ಲೋಕಸಭಾ ಚುನಾವಣೆ ನಂತರ ಬಂಗಾಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎನ್ಆರ್ಸಿ ಬಗ್ಗೆ ಭೀತಿ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎನ್ ಆರ್ ಸಿ ಪಟ್ಟಿಯಿಂದ ಹೊರಗೂಳಿದಿರುವ ಅಸ್ಸಾಂನಲ್ಲಿನ ನೊಂದಾಯಿತ ಮತದಾರರು ನ್ಯಾಯಮಂಡಳಿ ಅಂತಿಮ ತಿರ್ಮಾನ ತೆಗೆದುಕೊಳ್ಳುವವರೆಗೂ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿ ಜಾರಿಗೆ ಬರುವುದಿಲ್ಲ ಎಂದು ಒಂದು ಕಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪದೇ ಪದೇ ಭರವಸೆ ನೀಡುತ್ತಿರುವ ಮಧ್ಯೆ, ಈಗ ಅಲ್ಲಿಯೂ ಕೂಡ ಎನ್ಆರ್ಸಿ ಜಾರಿಗೆ ತರಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಬುಧವಾರ ಹೇಳಿದ್ದಾರೆ.
ಎನ್ಆರ್ಸಿಯನ್ನು ದೆಹಲಿಯಲ್ಲಿ ಜಾರಿಗೆ ತರಬೇಕು. ದೆಹಲಿಯಲ್ಲಿ ಎನ್ಆರ್ಸಿ ಜಾರಿಗೆ ಬಂದರೆ ಮನೋಜ್ ತಿವಾರಿ ಅವರೇ ಮೊದಲು ಹೊರಹೋಗಬೇಕಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರೊಂದಿಗಿನ ಸಭೆಯಲ್ಲಿ ನಾಗರಿಕರ ನೋಂದಣಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಅಕ್ರಮವಾಗಿ ಒಳನುಗ್ಗುವವರ ಬಗ್ಗೆ ಸರ್ಕಾರ ಕಟ್ಟುನಿಟ್ಟಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಈ ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ರಾಜ್ಯದಲ್ಲಿ ಕೂಡ ಎನ್ಆರ್ಸಿ ಬಗ್ಗೆ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹರಿಯಾಣದಲ್ಲಿಯೂ ಕೂಡ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್ಆರ್ಸಿ) ಪರಿಚಯಿಸುವ ಬಗ್ಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಸುಳಿವು ನೀಡಿದ್ದಾರೆ, ಅದು ಹೇಗೆ ಮತ್ತು ಯಾವಾಗ ಮಾಡಬೇಕೆಂಬುದರ ಬಗ್ಗೆ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಮಾತ್ರ ಅವರು ತಿಳಿಸಿಲ್ಲ ಎನ್ನಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿ ಜಾರಿಗೆ ಬರಲಿದೆ. ಆದಾಗ್ಯೂ ಮಮತಾ ತಮ್ಮ ಮತ ಬ್ಯಾಂಕ್ ಉಳಿಸಿಕೊಳ್ಳಲು ಬಾಂಗ್ಲಾದೇಶಿಗರನ್ನು ರಕ್ಷಿಸಲು ಬಯಸಿದರೆ ಅವರು ಬಾಂಗ್ಲಾದೇಶದ ಪ್ರಧಾನಿಯಾಗುವುದು ಉತ್ತಮ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಟೀಕಿಸಿದ್ದಾರೆ.
ಅಸ್ಸಾಂ ಎರಡನೇ ಪ್ರಬಲ ವಿರೋಧ ಪಕ್ಷ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ನ ಶಾಸಕರಾದ ಅನಂತ ಕುಮಾರ್ ಮಾಲೋ ಅವರ ಹೆಸರನ್ನು ಈಗ ಎನ್ಆರ್ಸಿಯಿಂದ ಹೊರಹಾಕಲಾಗಿದೆ. ಆ ಮೂಲಕ ಈಗ ಈ ಪಟ್ಟಿಯಿಂದ ಹೊರಗಿಟ್ಟಿರುವ 19 ಲಕ್ಷ ಜನರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
ನವೀಕರಿಸಿದ ರಾಷ್ಟ್ರೀಯ ನಾಗರಿಕರ ದಾಖಲೆಯ ಅಂತಿಮ ಪಟ್ಟಿ ಶನಿವಾರ ಹೊರಬಿದ್ದ ಕೂಡಲೇ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮೋದಿ ಸರ್ಕಾರದ ಮೇಲೆ ದಾಳಿ ನಡೆಸಿದರು, ಮುಸ್ಲಿಮರನ್ನು ಗುರಿಯಾಗಿಸುವ ನೀತಿಯ ಭಾಗವಾಗಿ ಎನ್ಆರ್ಸಿ ಜಾರಿಗೆ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಯ ಅಂತಿಮ ಪಟ್ಟಿ ಘೋಷಣೆಯಾದ ನಂತರ ವ್ಯಂಗ್ಯ ವಾಡಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಂಸತ್ತಿನಲ್ಲಿ ಎನ್ಆರ್ಸಿಯನ್ನು ಸಹ ನಡೆಸಬೇಕು ಎಂದು ಹೇಳಿದರು
ಕಾನೂನುಬದ್ಧ ನಿವಾಸಿಗಳನ್ನು ಗುರುತಿಸಲು ಮತ್ತು ಅಸ್ಸಾಂನಿಂದ ಅಕ್ರಮ ವಲಸಿಗರನ್ನು ಕಳೆಗಟ್ಟಲು ಉದ್ದೇಶಿಸಿರುವ ಅಂತಿಮ ರಾಷ್ಟ್ರೀಯ ನಾಗರಿಕರ ನೋಂದಣಿ ಅಥವಾ ಎನ್ಆರ್ಸಿ ಪಟ್ಟಿಯಿಂದ 19 ಲಕ್ಷಕ್ಕೂ ಹೆಚ್ಚು ಜನರನ್ನು ಹೊರಗಿಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.