ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ (ವಿಶೇಷ ತನಿಖಾ ತಂಡ) ಈಗ ಪರಾರಿಯಾಗಿದ್ದ ಆರೋಪಿ ರುಶಿಕೇಶ್ ದೇವದಿಕರ್ ಅವರನ್ನು ಬಂಧಿಸಿದೆ ಎಂದು ಸ್ಥಳೀಯ ಸುದ್ದಿ ಮಾದ್ಯಮಗಳು ವರದಿ ಮಾಡಿವೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದ ವಿಚಾರವಾಗಿ 9 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರುವ ಎಸ್ಐಟಿ ಪೋಲಿಸ್ ತಂಡವು ಈಗ ಸನಾತನ ಸಂಸ್ಥೆಯು ಅವರನ್ನು ಕೊಲ್ಲಲು 5 ವರ್ಷಗಳ ಹಿಂದೆ ಪ್ಲಾನ್ ಸಿದ್ದಪಡಿಸಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಿದೆ.
2017ರ ಸೆಪ್ಟೆಂಬರ್ 5 ರಂದು ಗೌರಿ ಲಂಕೇಶ್ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಬಳಿಯೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ಗೆ ಆದೇಶಿಸಿತ್ತು.
ಸೂಕ್ತ ಪರವಾನಗಿ ಪಡೆದುಕೊಂಡೇ ಆಯೋಜಕರು ಸಮಾವೇಶ ನಡೆಸುತ್ತಿದ್ದಾರೆ. ಕಪ್ಪು ಬಣ್ಣದ ಕೊಡೆಗಳನ್ನು ಹಿಡಿದುಕೊಂಡು ನಡೆಯುವುದು ರ್ಯಾಲಿ ವಿಶೇಷ - ಕೊಡೆಗಳ ಮೇಲೆಲ್ಲಾ ವಿವಿಧ ಬಗೆಯ ಖಂಡನಾ ಹೇಳಿಕೆಗಳ ಚಿತ್ರಣ - ಕರ್ನಾಟಕ ಚಿತ್ರಕಲಾ ಪರಿಷತ್ ವಿದ್ಯಾರ್ಥಿಗಳಿಂದ ಕೊಡೆಗಳ ಮೇಲೆ ಬರಹ - ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದು ಬರೆದಿರುವ ಕೊಡೆಗಳು - ವಿಭಿನ್ನ ಬಗೆಯ ಬರಹಗಳನ್ನು ಕೊಡೆಗಳ ಮೇಲೆ ಚಿತ್ರಿಸಿರುವ ವಿದ್ಯಾರ್ಥಿಗಳು - ಗೌರಿ ಲಂಕೇಶ್ ಹತ್ಯೆ ಖಂಡಿಸಿ, ಪ್ರತಿರೋಧಿಸಿ ಬರೆದಿರುವ ಬರಹಗಳು - ಬರಹಗಳುಳ್ಳ ಕಪ್ಪು ಕೊಡೆ ಹಿಡಿದು ಸಾಗುವ ಪ್ರಗತಿಪರರು ಹಾಗೂ ಚಿಂತಕರು.
ಗೌರಿ ಲಂಕೇಶ್ ಕೊಲೆ: ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಟೀಕೆ ಮಾಡಿದ ಕಾರಣಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಬಿಜೆಪಿ ಸದಸ್ಯರು ದೂರು ದಾಖಲಿಸಿದ್ದಾರೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಗ್ಗೆ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ದ ಮಾಡಿರುವ ಆರೋಪದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹತ್ಯೆಯ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿ ಮತ್ತು ಕಾಂಗ್ರೇಸ್ ಸರ್ಕಾರ ಗೌರಿ ಲಂಕೇಶ್ಗೆ ಏಕೆ ಭದ್ರತೆ ನೀಡಲಿಲ್ಲ ಎಂದು ಕೇಳಿದ್ದಾರೆ.
ಈ ಹಿಂದೆ ಮಹಾರಾಷ್ಟದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆಗೂ, ಗೌರಿ ಲಂಕೇಶ್ ಅವರ ಹತ್ಯೆಗೂ ಸಾಮ್ಯತೆ ಇರುವ ಬಗ್ಗೆ ಈಗಲೇ ಸ್ಪಷ್ಟತೆ ನೀಡುವುದು ಅಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.