ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಮೂರು ದಿನಗಳ ರಷ್ಯಾ ಪ್ರವಾಸಕ್ಕೆ ಮಾಸ್ಕೋಗೆ ಆಗಮಿಸಿದ್ದು, ಅಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಸಹ-ಉತ್ಪಾದನೆಗೆ ಸಂಬಂಧಿಸಿದ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಈ ಪ್ರವಾಸವು ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ನಿರ್ದೇಶನ, ಹೊಸ ಶಕ್ತಿ ಮತ್ತು ಹೊಸ ವೇಗ ನೀಡುತ್ತದೆ ಎಂದು ಹೇಳಿದ್ದಾರೆ. 20 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ಮತ್ತು ಪೂರ್ವ ಆರ್ಥಿಕ ವೇದಿಕೆಯ (ಇಇಎಫ್) ಐದನೇ ಸಭೆಯಲ್ಲಿ ಭಾಗವಹಿಸಲು ಮೋದಿ ಬುಧವಾರ ವ್ಲಾಡಿವೋಸ್ಟಾಕ್ಗೆ ಆಗಮಿಸಿ ರಷ್ಯಾದ ಸರ್ಕಾರಿ ಸ್ವಾಮ್ಯದ ಟಾಸ್ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದರು.
ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಬಗೆಹರಿಸಬೇಕಿದೆ ಎಂದು ಪುನರುಚ್ಚರಿಸಿದ ರಷ್ಯಾ ದಕ್ಷಿಣ ಏಷ್ಯಾದ ಎರಡೂ ದೇಶಗಳು ಮಧ್ಯಸ್ಥಿಕೆ ಕೇಳದ ಹೊರತು ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದನಡೆ ಸಂವಿಧಾನದ ಚೌಕಟ್ಟಿನಲ್ಲಿದೆ ಎಂದು ಈಗ ಭಾರತದ ನಡೆಯನ್ನು ರಷ್ಯಾ ಬೆಂಬಲಿಸಿದೆ. ಇನ್ನು ಉಭಯ ದೇಶಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ದ್ವಿಪಕ್ಷೀಯವಾಗಿ ಸಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಯ ಆಧಾರದ ಮೇಲೆ ಪರಿಹರಿಸಿಕೊಳ್ಳಲಿವೆ ಎಂದು ಆಶಿಸಿದೆ.
ಮಾಸ್ಕೋ ಪರಮಾಣು ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಮತ್ತು ಅದನ್ನು ಅನುಸರಿಸುವ ಯಾವುದೇ ಯೋಜನೆಗಳಿಲ್ಲ ಎಂದು ನಿರ್ಧರಿಸಿದ ನಂತರ ಅಮೇರಿಕಾ ಈಗ ರಷ್ಯಾದೊಂದಿಗಿನ ಪರಮಾಣು ಒಪ್ಪಂದದಿಂದ ಹೊರಕ್ಕೆ ಬಂದಿದೆ.
ಈ ಸೇತುವೆಯ ಮಧ್ಯಭಾಗವನ್ನು 75 ಅಡಿ ಎತ್ತರದಿಂದ ಕದಿಯಲಾಗಿದೆ ಎಂದು ಸ್ಥಳೀಯ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸ್ಥಳೀಯ ಪೊಲೀಸರು ಕಾಣೆಯಾದ ಸೇತುವೆಯ ಭಾಗವನ್ನು ಹುಡುಕಲು ಪ್ರಾರಂಭಿಸಿದ್ದಾರೆ.
2017ರ ಡಿಸೆಂಬರ್ ತಿಂಗಳಲ್ಲಿ, 6 ರಿಂದ 7 ನಿಮಿಷಗಳು ಮಾತ್ರ ಸೂರ್ಯ ಗೋಚರಿಸಿದ್ದಾನೆ. ಅಂದರೆ ಆ ಮಾಸದಲ್ಲಿ ಮಾಸ್ಕೋ ನಿವಾಸಿಗಳು ಕೇವಲ 6 ರಿಂದ 7 ನಿಮಿಷಗಳಿಗೆ ಮಾತ್ರ ಸೂರ್ಯನ ಬೆಳಕನ್ನು ಕಂಡುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.