ರಷ್ಯಾ ಜೊತೆಗಿನ 1987 ರ ಪರಮಾಣು ಒಪ್ಪಂದಿಂದ ಯುಎಸ್ ಹೊರಕ್ಕೆ

ಮಾಸ್ಕೋ ಪರಮಾಣು ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಮತ್ತು ಅದನ್ನು ಅನುಸರಿಸುವ ಯಾವುದೇ ಯೋಜನೆಗಳಿಲ್ಲ ಎಂದು ನಿರ್ಧರಿಸಿದ ನಂತರ ಅಮೇರಿಕಾ ಈಗ ರಷ್ಯಾದೊಂದಿಗಿನ ಪರಮಾಣು ಒಪ್ಪಂದದಿಂದ ಹೊರಕ್ಕೆ ಬಂದಿದೆ. 

Last Updated : Aug 2, 2019, 03:53 PM IST
ರಷ್ಯಾ ಜೊತೆಗಿನ 1987 ರ ಪರಮಾಣು ಒಪ್ಪಂದಿಂದ ಯುಎಸ್ ಹೊರಕ್ಕೆ  title=

ನವದೆಹಲಿ: ಮಾಸ್ಕೋ ಪರಮಾಣು ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಮತ್ತು ಅದನ್ನು ಅನುಸರಿಸುವ ಯಾವುದೇ ಯೋಜನೆಗಳಿಲ್ಲ ಎಂದು ನಿರ್ಧರಿಸಿದ ನಂತರ ಅಮೇರಿಕಾ ಈಗ ರಷ್ಯಾದೊಂದಿಗಿನ ಪರಮಾಣು ಒಪ್ಪಂದದಿಂದ ಹೊರಕ್ಕೆ ಬಂದಿದೆ. ರಷ್ಯಾ 1987ರ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದವನ್ನು ಉಲ್ಲಂಘಿಸಿದ ನಂತರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡರು ಎಂದು ಆಡಳಿತದ ಹಿರಿಯ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದರು. 

ಈ ಒಪ್ಪಂದವು ಯುರೋಪಿನಲ್ಲಿ ಸಣ್ಣ ಮತ್ತು ಮಧ್ಯಂತರ-ಶ್ರೇಣಿಯ, ಭೂ-ಆಧಾರಿತ ಕ್ಷಿಪಣಿಗಳ ಸಂಗ್ರಹಣೆಯನ್ನು ನಿಷೇಧಿಸುತ್ತದೆ. ರಷ್ಯಾ ಇದನ್ನು ಅನುಸರಿಸಲು ಕ್ರಮ ಕೈಗೊಳ್ಳದಿದ್ದರೆ ಒಪ್ಪಂದದಿಂದ ಹಿಂದೆ ಸರಿಯುವ ವಿಚಾರವನ್ನು ಆರು ತಿಂಗಳ ಹಿಂದೆಯೇ ವಾಷಿಂಗ್ಟನ್ ಘೋಷಿಸಿತ್ತು.ರಷ್ಯಾವು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವ ಒಪ್ಪಂದದಲ್ಲಿ ಅಮೇರಿಕಾ ಇರುವುದಿಲ್ಲ ಎಂದು ಯು.ಎಸ್. ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ತಿಳಿಸಿದ್ದಾರೆ. 

ರಷ್ಯಾ ದೇಶವು ಈಗ ಒಪ್ಪಂದವನ್ನು ಉಲ್ಲಂಘಿಸಿ ಸಣ್ಣ ಮತ್ತು ಮಧ್ಯಂತರ-ಶ್ರೇಣಿಯ, ಭೂ-ಆಧಾರಿತ ಕ್ಷಿಪಣಿಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಅಮೇರಿಕಾ ಆರೋಪಿಸಿದೆ. ಇದರಿಂದಾಗಿ ತನ್ನ ಸರ್ವೋಚ್ಚ ಹಿತಾಸಕ್ತಿಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಹೇಳಿದೆ. ಆದರೆ ರಷ್ಯಾ ಈ ಆರೋಪವನ್ನು ನಿರಾಕರಿಸಿದೆ, ಕ್ಷಿಪಣಿಯ ವ್ಯಾಪ್ತಿಯು ಅದನ್ನು ಒಪ್ಪಂದದ ಹೊರಗೆ ಇರಿಸುತ್ತದೆ ಮತ್ತು ವಾಷಿಂಗ್ಟನ್ ಒಪ್ಪಂದದಿಂದ ಹೊರಕ್ಕೆ ಹೋಗಲು ಸುಳ್ಳು ನೆಪವನ್ನು ಕಂಡುಹಿಡಿದಿದೆ ಎಂದು ಆರೋಪಿಸಿದೆ.  

ಐಎನ್ಎಫ್ ಒಪ್ಪಂದವು ಅಂದಿನ ಅಧ್ಯಕ್ಷ ರೊನಾಲ್ಡ್ ರೇಗನ್ ಮತ್ತು ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರ ನಡುವೆಯಾಗಿತ್ತು, ಆಗ ವಿಶ್ವದ ಎರಡು ಅತಿದೊಡ್ಡ ಪರಮಾಣು ಶಕ್ತಿಗಳ ನಡುವಿನ ಪರಮಾಣು ಸಮರದ ತೀವ್ರತೆಯನ್ನು ಕಡಿಮೆ ಮಾಡಲು ಈ ಒಪಂದವನ್ನು ಮಾಡಿಕೊಳ್ಳಲಾಗಿತ್ತು.
 

Trending News