ಸಿಲಿಕಾನ್ ಸಿಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾತ್ರಿ ವೇಳೆ ಮನೆಗಳ್ಳತನ, ರಾಬರಿ, ರೇಪ್ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ ಸಮಾಧಾನಕಾರಿ ಸಂಗತಿ ಎಂದರೆ ಸರಗಳ್ಳತನ, ಡಕಾಯಿತಿಗೆ ಸಂಚು ಪ್ರಕರಣಗಳು ಇಳಿಕೆಯಾಗಿವೆ. ಕಳೆದ 11 ತಿಂಗಳಲ್ಲಿ ಬೆಂಗಳೂರಿನಲ್ಲಿಯೇ 145 ಆತ್ಯಾಚಾರ ಪ್ರಕರಣ ದಾಖಲಾಗಿವೆ. 2021ರಲ್ಲಿ 116 ಪ್ರಕರಣಗಳು ನಡೆದಿದ್ದು, ಪರಿಚಯಸ್ಥರಿಂದಲೇ ಆತ್ಯಾಚಾರ ನಡೆದಿವೆ ಎಂದು ಪೊಲೀಸ್ ವರದಿಗಳು ಹೇಳಿವೆ.
ಈ ವರ್ಷದ ಕ್ರೈಂ ಲೋಕದಲ್ಲಿ ಸ್ಟೂಡೆಂಟ್, ಬಿಸಿನೆಸ್ ಸೇರಿ ವಿವಿಧ ವೀಸಾದಡಿ ಭಾರತಕ್ಕೆ ಬರುವ ವಿದೇಶಿಯರು ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಜೊತೆಗೆ ಸೈಬರ್ ಕ್ರೈಂ, ಗಡುವು ಮೀರಿ ಅಕ್ರಮ ವಾಸ ಸೇರಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ 11 ತಿಂಗಳಲ್ಲಿ 3398 ಕೇಸ್ ಗಳಲ್ಲಿ 4480 ಆರೋಪಿಗಳನ್ನ ಬಂಧಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.