ಜಿಬಿಎ ವ್ಯಾಪ್ತಿಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣ ಅಸಾಧ್ಯವೆಂಬ ಒಬಿಸಿ ಆಯೋಗದ ಮನವಿಗೆ ಸಿಎಂ ಸಿದ್ದರಾಮಯ್ಯಸ್ಪಂದಿದ್ದು, ಅಕ್ಟೋಬರ್ ೩೧ ರವರೆಗೆ ಸಮೀಕ್ಷೆ ಮಾಡಲು ಅವಕಾಶ ನೀಡಿದ್ದಾರೆ.
ನಾವು ಸೂಚಿಸೋ ವಾರ್ಡ್ ಗಳನ್ನು ಕೊಟ್ಟರೆ ಮಾತ್ರ ಸಮೀಕ್ಷೆ ನಡೆಸುತ್ತೇವೆ ಇಲ್ಲ ಎಂದಾದರೆ ಸಮೀಕ್ಷೆ ಮಾಡುವುದಿಲ್ಲ ಎಂದಿದ್ದಾರೆ.
ಗಣತಿಯಲ್ಲಿ ಅತಿಹೆಚ್ಚು ಪ್ರಶ್ನೆ ಕೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ʼಪ್ರಶ್ನೆಗೆ ಉತ್ತರಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ನಿನ್ನೆ ಗೋಕಾಕ್ನಲ್ಲಿಯೂ ಸರ್ವೇಗೆ ಬಂದಿದ್ದರು. ಪ್ರಶ್ನೆಗಳನ್ನು ಕಮ್ಮಿ ಮಾಡಿದ್ರೆ ಒಳ್ಳೆಯದು ಅಂತಾಹೇಳಿದ್ದಾರೆ.
ನಿಮಗೆ ಮದ್ವೆ ಆದಾಗ ಎಷ್ಟು ವರ್ಷ ಸರ್ ಅನ್ನೋ ಪ್ರಶ್ನೆಗೆ, ಇವೆಲ್ಲ ಯಾಕೆ? ದುರಂತ... ನಮ್ಮ ಅಪ್ಪ-ಅಮ್ಮನ ಕೇಳ್ಬೇಕು. 26 ಅಂತಾ ಬರೆದುಕೊಳ್ಳಿ. ಇದು ಸಿದ್ದರಾಮಯ್ಯ ವೋಟಿಗಾಗಿ ಮಾಡ್ತಿರೋದು ಎಂದು ವಿ.ಸೋಮಣ್ಣ ಹೇಳಿದ್ದಾರೆ.