ಕುಡಿತದ ಚಟಕ್ಕಾಗಿ ದೇವಸ್ಥಾನಗಳಲ್ಲಿ ದೇವರ ತಾಳಿಯನ್ನೇ ಕದಿಯುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಂದ್ರ ಬಂಧಿತ ಆರೋಪಿ. ಬೆಳ್ಳಂಬೆಳಗ್ಗೆ ದೇವಸ್ಥಾನಗಳಿಗೆ ತೆರಳ್ತಿದ್ದ ಖದೀಮ ದೇವರಿಗೆ ಕೈ ಮುಗಿಯವಂತೆ ನಾಟಕ ಮಾಡಿ ತಾಳಿ ಕದಿಯುತ್ತಿದ್ದ. ಇದೇ ರೀತಿ ಮಾರತ್ತಹಳ್ಳಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದಲ್ಲಿ ದೇವರ ತಾಳಿ ಕದ್ದಿದ್ದು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಸಾಕು ನಾಯಿಯೊಂದು ಚಿರತೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ನೀವು ಚಿಂತಿತರಾಗಿದ್ದೀರಾ? ಇದಕ್ಕಾಗಿ ಕೆಲವು ಪರ್ಯಾಯ ಮೊಬೈಲ್ ಅಪ್ಲಿಕೇಶನ್ಗಳ ಮಾಹಿತಿ ಇಲ್ಲಿದೆ. ಅದನ್ನು ಡೌನ್ಲೋಡ್ ಮಾಡುವ ಮೂಲಕ ಮನೆಯನ್ನು ನೀವು ಸುಲಭವಾಗಿ ಸುರಕ್ಷಿತವಾಗಿರಿಸಿಕೊಳ್ಳಬಹುದು.
ಸ್ಥಳಕ್ಕೆ ಸರಿಯಾದ ಸಮಯಕ್ಕೆ ಆಗಮಿಸಿದ ಆರ್ ಪಿಎಫ್ (RPF) ಯೋಧ ಆ ವ್ಯಕ್ತಿಯ ಪಾಲಿಗೆ ದೇವರೇ ಸರಿ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಿದ ವೆಳೆ ವ್ಯಕ್ತಿಯೊಬ್ಬರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಪ್ಲಾಟ್ ಫಾರ್ಮ್ ಮತ್ತು ಹಳಿಯ ಮಧ್ಯೆ ಸಿಲುಕಿಕೊಂಡ ವ್ಯಕ್ತಿಯನ್ನು ಅಲ್ಲೆ ಇದ್ದ ಆರ್ ಪಿಎಫ್ ಯೋಧ ರಕ್ಷಿಸಿದ್ದಾರೆ.
ಹನೋಯಿಯಲ್ಲಿರುವ ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಕೆಳಗೆ ಬಿದ್ದ ಕಂದಮ್ಮನನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ ಡೆಲಿವರಿ ಬಾಯ್. ಈ ಸಂಪೂರ್ಣ ಘಟನೆ ಅಪಾರ್ಟ್ ಮೆಂಟಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಹಾಡುಹಗಲಲ್ಲೇ ಆತಂಕವಾದಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.
ಸಿಸಿಟಿವಿಯಲ್ಲಿ ತನ್ನ ಮಗುವಿನ ಪಕ್ಕದಲ್ಲಿ ಭೂತ ಮಲಗಿದ್ದನ್ನು ನೋಡಿದೆ ಎಂದು ಭಾವಿಸಿ ಮಹಿಳೆಯೊಬ್ಬಳು ತನ್ನ ಮಗುವಿನ ಚಿತ್ರವನ್ನು ಇತ್ತೀಚೆಗೆ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವುದು ಇದೀಗ ವೈರಲ್ ಆಗಿದೆ.
ತ್ರಿಪುರಾದ ಮಹಿಳೆಯೊಬ್ಬಳು ಪತಿ ಬೆಡ್ ರೂಮಿನಲ್ಲಿಯೂ ಸಿಸಿಟಿವಿಯನ್ನು ಅಳವಡಿಸಿದ್ದಕ್ಕೆ ಮಹಿಳಾ ಆಯೋಗಕ್ಕೆ ಪತ್ನಿ ದೂರು ನೀಡಿದ್ದಾಳೆ. ಆದರೆ ಪತಿ ತನ್ನ ಕ್ರಮನ್ನು ಸಮರ್ಥಿಸಿಕೊಂಡು ಇದೆಲ್ಲವೂ ಸ್ವಯಂ ರಕ್ಷಣೆಗೆ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.