ಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಅಖಾಡಕ್ಕಿಳಿದ ವೀರೇಂದ್ರ ಪಪ್ಪಿ, ಬಿಜೆಪಿ ಭದ್ರಕೋಟೆ ಬೇಧಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ. ದಂಡಿನ ಕುರುಬರ ಹಟ್ಟಿ, ದೊಡ್ಡಸಿದ್ದವ್ವನಹಳ್ಳಿ, ತೋಪರ ಮಾಳಿಗೆ, ಬೊಮ್ಮನಹಳ್ಳಿ, ಹಂಪಯ್ಯನ ಮಾಳಿಗೆ, ಕಸವನಹಳ್ಳಿ, ಕ್ಯಾದಿಗೆರೆ ಇತರ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ರೋಡ್ ಶೋ, ಪಾದಯಾತ್ರೆ, ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿರುವ ವೀರೇಂದ್ರ ಪಪ್ಪಿ, ಮದುವೆ ಮನೆಗಳಲ್ಲೂ ಮತಯಾಚಿಸಿ ಗಮನ ಸೆಳೆದರು.
ಕಲಘಟಗಿ ಹಾಗೂ ಅಳ್ನಾವರ ವಿಧಾನಸಭಾ ಕ್ಷೇತ್ರದ ಮಿಶ್ರಿಕೋಟಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂತೋಷ್ ಲಾಡ್ ಬಿರುಸಿನ ಪ್ರಚಾರ ಕೈಗೊಂಡರು. ನಂತರ ಕಲಕುಂಡಿ ಗ್ರಾಮದ ಗ್ರಾಮಸ್ಥರು ಚಕ್ಕಡಿ ಮೂಲಕ ಲಾಡ್ರನ್ನು ಸ್ವಾಗತಿಸಿದರು. ನನ್ನ ಅಧಿಕಾರಾವಧಿಯಲ್ಲಿ ಕಲಘಟಗಿಯ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಯಾಗಿದೆ. ಈ ಬಾರಿ ಕ್ಷೇತ್ರದ ಜನ ಅಭಿವೃದ್ಧಿ ಮಾಡಿದವರ ಕೈ ಹಿಡಿಯಲಿದ್ದಾರೆ ಎಂದು ಸಂತೋಷ್ ಲಾಡ್ ಹೇಳಿದ್ರು. ಲಾಡ್ ಅವರ ಜೊತೆ ಸಹಸ್ರಾರು ಕೈ ಕಾರ್ಯಕರ್ತರು ಅಲ್ಲದೇ ವಿಶೇಷವಾಗಿ ಪುತ್ರ ಕರಣ್ ಲಾಡ್ ಪ್ರಚಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಯಾರಬ್ ಬಿಜೆಪಿ ಪ್ರಾಯೋಜಿತ ಅಭ್ಯರ್ಥಿಯಾಗಿದ್ದಾನೆ. ಪಾಕಿಸ್ತಾನ ಧ್ವಜ ಇರುವ ಕರಪತ್ರ ಮುದ್ರಿಸಿ ಅಶಾಂತಿ ನರ್ಮಾಣಕ್ಕೆ ಷಡ್ಯಂತ್ರ. ಯಾರಬ್ ಮುನಿರತ್ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾನೆ. ಮುನಿರತ್ನ ಜೊತೆಗೂಡಿ ಯಾರಬ್ ಷಡ್ಯಂತ್ರ ರೂಪಿಸಿದ್ದಾನೆ. ಕಾಂಗ್ರೆಸ್ ನಾಯಕರ ಫೋಟೋ ಜೊತೆಗೆ ಪಾಕಿಸ್ತಾನ ಧ್ವಜ ಮುದ್ರಿಸಿದ್ದಾರೆ. ನನ್ನ ವಿರುದ್ಧ ಕೋಮು ಪ್ರಚೋದನೆ ಮೂಡಿಸುವ ಕೆಲಸ ಮಾಡ್ತಿದ್ದಾರೆ ಎಂದು ಆರ್.ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆರೋಪಿಸಿದ್ದಾರೆ.
ಅಭಿವೃದ್ದಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಜಿ ಹೋಮ್ ಮಿನಿಸ್ಟರ್ ರಾಂಗ್.ಕಾಂಗ್ರೆಸ್ ಹಿರಿಯ ನಾಯಕನಿಂದ ಕಾರ್ಯಕರ್ತನ ಮೇಲೆ ʻಕೈʼಕೋಪ. ಏನ್ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ. ಯುವಕನಿಗೆ ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಕಪಾಳ ಮೋಕ್ಷ. ನಿನ್ನೆ ತಡರಾತ್ರಿ ಪ್ರಚಾರಕ್ಕೆ ತೆರಳಿದ್ದಾಗ ದೇವಾಪೂರ ಗ್ರಾಮದಲ್ಲಿ ಘಟನೆ. ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂಬಿ ಪಾಟೀಲ್. ಪ್ರಚಾರಕ್ಕೆ ತೆರಳಿದ್ದಾಗ ಬಬಲೇಶ್ವರದಲ್ಲಿ MBP ದರ್ಪ.
ಮಾಜಿ ಸಚಿವರು ಹಾಗೂ ಕಲಘಟಗಿ - ಅಳ್ನಾವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಅವರು ಹುಲಗಿನಕೊಪ್ಪ, ಸಂಗಟಿಕೊಪ್ಪ ಹಾಗೂ ಜುಂಜನಬೈಲ್ನಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಲಾಡ್, ನನ್ನ ಅಧಿಕಾರಾವಧಿಯಲ್ಲಿ ಪ್ರತಿಯೊಂದು ತಾಂಡಾ ಹಾಗೂ ಗ್ರಾಮಗಳ ಅಭಿವೃದ್ಧಿಯಾಗಿದೆ. ಅಧಿಕಾರ ಇಲ್ಲದೇ ಇದ್ದಾಗಲೂ ಕ್ಷೇತ್ರದ ಜನರಿಗಾಗಿ ಹಲವಾರು ಸಾಮಾಜಿಕ ಸೇವಾ ಕಾರ್ಯ ಕೈಗೊಂಡಿದ್ದೆ ಅಂತಾ ಹೇಳಿದ್ದಾರೆ.
Karnataka Bypoll Results 2020: ಕರ್ನಾಟಕದ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಟಿ.ಬಿ. ಜಯಚಂದ್ರ ಅವರಿಗೆ ಕರೋನಾ ಪಾಸಿಟಿವ್ ಆಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಾನು ಗೆಲುವು ಸಾಧಿಸುವುದು ನಿಶ್ಚಿತವಾಗಿದೆ. ಆದರೂ ಕಾರ್ಯಕರ್ತರು ಈಗಲೇ ಸಂಭ್ರಮಾಚರಣೆ ಮಾಡಬಾರದು. ಅನಾವಶ್ಯಕ ಗದ್ದಲ-ಗೊಂದಲಗಳಿಗೆ ಎಡೆ ಮಾಡಿಕೊಡಬಾರದು- ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.