ಮಕ್ಕಳಿಗೆ ಕರೋನಾ ಲಸಿಕೆ: 12 ರಿಂದ 17 ವರ್ಷ ವಯಸ್ಸಿನ ಮಕ್ಕಳು ಈಗ ಸೀರಮ್ ಇನ್ಸ್ಟಿಟ್ಯೂಟ್ನ ಕೊರೊನಾವೈರಸ್ ಲಸಿಕೆಯನ್ನು ಖಾಸಗಿ ಕೇಂದ್ರಗಳಲ್ಲಿಯೂ ಪಡೆಯಬಹುದಾಗಿದೆ. ಇಮ್ಯುನೈಸೇಶನ್ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್ಟಿಎಜಿಐ) ಶಿಫಾರಸನ್ನು ಅನುಸರಿಸಿ , ಕೋವಿನ್ ಪೋರ್ಟಲ್ನಲ್ಲಿ ಲಭ್ಯವಿರುವ ಲಸಿಕೆ ಆಯ್ಕೆಗಳಲ್ಲಿ ಕೋವೊವಾಕ್ಸ್ ಅನ್ನು ಸೇರಿಸಲಾಗಿದೆ.
ಕೊರೋನಾದ ನಾಲ್ಕನೇ ಅಲೆ ಬರುವ ಮೊದಲು, ಮತ್ತೊಮ್ಮೆ ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು ಶುರು ಮಾಡಿ, ಸಾಮಾಜಿಕ ಅಂತರ ಮತ್ತು ಮಾಸ್ಕ ಧರಿಸುವುದು ಮುಂತಾದ ಅಭ್ಯಾಸಗಳನ್ನು ಮತ್ತೆ ರೂಡಿಸಿಕೊಳ್ಳಿ.
ಈ ಲಸಿಕೆಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಆ ವ್ಯಕ್ತಿಯು ಧರ್ಮಕ್ಕೆ ವಿರುದ್ಧವಾಗಿದ್ದಾರೆಯೇ ಎಂಬುದು ಸ್ಪಷ್ಟವಾಗುವವರೆಗೆ ಲಸಿಕೆಯನ್ನು ಭಾರತದಲ್ಲಿ ಬಳಸಬಾರದು ಎಂದು ಸ್ವಾಮಿ ಚಕ್ರಪಾಣಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಾಣ ಹೋದರು ಪರವಾಗಿಲ್ಲ, ಧರ್ಮ ನಷ್ಟವಾಗಬಾರದು ಹಾಗೂ ಇದೇ ಕಾರಣದಿಂದ ಕೊರೊನಾ ವಿರುದ್ಧ ತಯಾರಿಸಲಾಗಿರುವ ಲಸಿಕೆಯಲ್ಲಿ ಹಸುವಿನ ರಕ್ತ ಬಳಕೆಯಾಗಿರುವ ಕುರಿತು ಸ್ಪಷ್ಟನೆ ಸಿಗದ ಹೊರತು ಲಸಿಕೆಯನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕರೋನವೈರಸ್ ಲಸಿಕೆಯನ್ನು ದೇಶದಲ್ಲಿ ಲಭ್ಯವಾಗುವಂತೆ ಮಾಡಲು ಫಿಜರ್ ಭಾರತ ಸರ್ಕಾರದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಅವಕಾಶಗಳನ್ನು ಅನ್ವೇಷಿಸಲು ಬದ್ಧವಾಗಿದೆ ಎಂದು ಅಮೆರಿಕದ ಫಾರ್ಮಾ ದೈತ್ಯ, ಮುಂದಿನ ವಾರದಲ್ಲಿ ಬ್ರಿಟನ್ ಲಸಿಕೆಯನ್ನು ಸಾರ್ವಜನಿಕರಿಗೆ ತಲುಪಿಸಲು ಅನುಮೋದಿಸಿದ ಒಂದು ದಿನದ ನಂತರ ಹೇಳಿದೆ.
ವಿಶ್ವಾದ್ಯಂತ ಕೊರೊನಾ ವೈರಸ್ ತನ್ನ ಪ್ರಕೋಪ ಮುಂದುವರೆಸಿದೆ. ಏತನ್ಮಧ್ಯೆ ರಷ್ಯಾ ಕೊರೊನಾ ವ್ಯಾಕ್ಸಿನ್ ಸ್ಪುಟ್ನಿಕ್ Vನ ಜಂಟಿ ಉತ್ಪಾದನೆಗಾಗಿ ಭಾರತದೊಂದಿಗೆ ಅಧಿಕೃತ ಸಂಪರ್ಕ ಸಾಧಿಸಿದೆ.
ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು.
ಕರೋನಾ ಬಿಕ್ಕಟ್ಟು ಮತ್ತು ಲಾಕ್ ಡೌನ್ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ದೇಶವನ್ನು ಸಂಬೋಧಿಸಲಿದ್ದು, ಕರೋನಾ ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿದ ನಂತರ ಜನರನ್ನು ಕರೋನಾ ಸೋಂಕಿನಿಂದ ರಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ವಿಮಾನ ನಿಲ್ದಾಣದೊಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಲಿದೆ.
ತಂಜಾನಿಯಾದಲ್ಲಿ ಮೇಕೆ ಹಾಗೂ ಹಣ್ಣುಗಳೂ ಕೂಡ ಕೊರೊನಾ ಟೆಸ್ಟ್ ಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿವೆ. ಹೀಗಾಗಿ ಅಲ್ಲಿನ ರಾಷ್ಟ್ರಪತಿಗಳು ಅಲ್ಲಿ ಬಳಸಲಾಗುತ್ತಿರುವ ಟೆಸ್ಟ್ ಕಿಟ್ ಗಳ ಟೆಸ್ಟ್ ಗೆ ಆದೇಶ ನೀಡಿದ್ದಾರೆ.
ಲಾಕ್ ಡೌನ್ ಅನ್ನು ಉಲ್ಲಂಘಿಸಿದವರಿಗೆ ಪಾಠ ಕಲಿಸಲು ತಮಿಳುನಾಡು ಪೊಲೀಸರು ವಿನೂತನ ಕ್ರಮವೊಂದನ್ನು ಕೈಗೊಂಡಿದ್ದಾರೆ. ತಮಿಳುನಾಡು ಪೊಲೀಸರು ಕೈಗೊಂಡ ಈ ಕ್ರಮದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಮೈಕ್ರೋವೇವ್ ಓವನ್ ರೀತಿ ಕಾಣಿಸುವ ಈ ವಿಶೇಷ ಡಿಸ್ ಇನ್ಫೆಕ್ಟೆಂಟ್ ಬಾಕ್ಸ್ 'ಅಲ್ಟ್ರವೈಲೆಟ್-ಸಿ' ತಂತ್ರಜ್ಞಾನದ ಆಧಾದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಅನ್ನು ಒಂದು ನಿಮಿಷ ಇಟ್ಟರೆ ನಿಮ್ಮ ಮೊಬೈಲ್ ಕ್ರಿಮಿ ಮುಕ್ತವಾಗುತ್ತದೆ. ಇನ್ನೊಂದೆಡೆ ಕುರ್ಚಿ, ಮೇಜು, ಫೈಲ್, ಆಹಾರದ ಪೊಟ್ಟಣಗಳನ್ನೂ ಕೊರೊನಾ ಮುಕ್ತವಾಗಿಸಲು ಯುವಿ-ಲ್ಯಾಂಪ್ ವೊಂದನ್ನು ಕೂಡ ಸಿದ್ಧಪಡಿಸಲಾಗಿದೆ.
ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೊವಿಡ್-19 ಪ್ರಕರಣಗಳು 14 ರಾಜ್ಯಗಳಿಂದ ಬರಲಾರಂಭಿಸಿವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಸಂಯುಕ್ತ ಕಾರ್ಯದರ್ಶಿ ಲವ್ ಅಗರ್ವಾಲ್ ಈ ಮಾಹಿತಿ ನೀಡಿದ್ದಾರೆ
ಕೊರೊನಾವೈರಸ್ ನ ಟೆಸ್ಟ್ ತೆಗೆದುಕೊಳ್ಳಲು ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್ ವೆಬ್ ಸೈಟ್ ವೊಂದನ್ನು ಸಿದ್ಧಪಡಿಸುತ್ತಿದೆ. ಇದನ್ನು ಮೊಟ್ಟ ಸ್ಯಾನ್ ಫ್ರಾನ್ಸಿಸ್ಕೊದ ಕಣಿವೆ ಪ್ರಾಂತ್ಯದಲ್ಲಿ ಇದನ್ನು ಮೊದಲು ಆನ್ಲೈನ್ ಮಾಡಲಾಗುತ್ತಿದೆ.
ಆರೋಗ್ಯ ಸಚಿವರಾದ ಕೆ.ಕೆ.ಶೈಲಜಾ, "ಕೇರಳ ಎನ್-ಕರೋನವೈರಸ್ ಅನ್ನು ರಾಜ್ಯ ವಿಪತ್ತು ಎಂದು ಘೋಷಿಸಿದೆ. ನಮ್ಮ ಕಣ್ಗಾವಲು ವ್ಯವಸ್ಥೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸಲು ನಾವು ಬಯಸುತ್ತೇವೆ" ಎಂದು ಸೋಮವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.