ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಹಿನ್ನೆಲೆ ಸಚಿವೆ ಶಶಿಕಲಾ ಜೋಲ್ಲೆ ನೇತೃತ್ವದಲ್ಲಿ ಹುನುಮಾನ್ ಚಾಲೀಸ ಪಠಣ ಮಾಡಲಾಗಿದೆ. ನಿಪ್ಪಾಣಿ ಪಟ್ಟಣದ ಸಾಕರವಾಡಿ ಹನುಮಾನ ಮಂದಿರದಲ್ಲಿ 300ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಣ ಮಾಡಿದ್ದಾರೆ..
ಖರ್ಗೆ ಅವರ ಬೆಳವಣಿಗೆ ಸಹಿಸದೇ ಮಲ್ಲಿಕಾರ್ಜುನ್ ಖರ್ಗೆ, ಪತ್ನಿ ಹತ್ಯೆಗೆ ಸಂಚು ನಡೆಸಿದ್ದಾರೆ ಎಂದು ಕೈ ನಾಯಕ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ.. ಈ ಬಗ್ಗೆ ಸುರ್ಜೇವಾಲಾ ಆಡಿಯೋ ಬಿಡುಗಡೆ ಮಾಡಿದ್ದಾರೆ.
Karnataka Election 2023 : ಕರ್ನಾಟಕ ಚುನಾವಣೆಗೆ ಭಾರೀ ಪ್ರಚಾರ ನಡೆಯುತ್ತಿದೆ. ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಥಣಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಕನ್ನಡಪರ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಹೇಳಿಕೆ ವಿಚಾರವಾಗಿ ನಟ ಡಾ. ಶಿವರಾಜಕುಮಾರ್ ಅವರು ಗುಡುಗಿದ್ದಾರೆ. ಪ್ರಶಾಂತ ಸಂಬರಗಿ ಹಾಗೆ ಮಾತಾಡೋದು ಸರಿ ಅಲ್ಲ. ಅದನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ರ ಹಣನೇ ಇಲ್ವಾ ಎಂದ ಶಿವಣ್ಣ ಪ್ರಶ್ನೆ ಮಾಡಿದ್ದಾರೆ.
Karnataka Election 2023: ಆಡಿಯೋ ಒಂದರಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಖರ್ಗೆ ಹಾಗು ಅವರ ಹೆಂಡತಿ ಮಕ್ಕಳನ್ನು ಸಾಫ್ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ ಇಂತಹ ಹತ್ತು ಮಣಿಕಂಠನನ್ನು ನೋಡಿದ್ದೇನೆ ಎಂದು ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರು ಗೆಲ್ಲಲು ಪ್ರಧಾನಿ ಮೋದಿ ಮೆಗಾಬೇಟೆ. ಯಾವೆಲ್ಲ ರಸ್ತೆಗಳು ಬಳಸಬಾರದು.. ಯಾವೆಲ್ಲ ರಸ್ತೆಗಳು ಬಂದ್.? ರಾಜ ಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್ಬಿಐ ಲೇಔಟ್, ಜೆಪಿ ನಗರ, ಶಿರ್ಸಿ ಸರ್ಕಲ್, ಜೆಜೆ ನಗರ, ಬಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ಸರ್ಕಲ್ ಸೇರಿದಂತೆ ಹಲವು ರಸ್ತೆಗಳು ಬಂದ್.
ರಾಜಧಾನಿ ಬೆಂಗಳೂರು ಗೆಲ್ಲಲು ಪ್ರಧಾನಿ ಮೋದಿ ಮೆಗಾಬೇಟೆ. ನರೇಂದ್ರ ನರೇಂದ್ರ ಮೋದಿ ರಾಜಧಾನಿ ರೌಂಡ್ಸ್ಗೆ ಕೌಂಟ್ಡೌನ್. ಬೆಂಗಳೂರಿನಲ್ಲಿಂದು ಪ್ರಧಾನಮಂತ್ರಿ ಮೆಗಾ ರೋಡ್ ಶೋ. ಬೆಂಗಳೂರನ್ನ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಮೋದಿ ರಣಬೇಟೆ. ಎರಡು ದಿನ.. ಒಂದು ರಾಜಧಾನಿ.. ಒನ್ ಮ್ಯಾನ್ ಶೋ..! 26 ಕಿಲೋಮೀಟರ್ ರೋಡ್ ಶೋ.. 28 ಕ್ಷೇತ್ರಗಳ ಟಾರ್ಗೆಟ್. 28ರಲ್ಲಿ 20 ಕ್ಷೇತ್ರಗಳನ್ನ ಗೆಲ್ಲಲೇಬೇಕು ಅಂತ ಪಣತೊಟ್ಟಿರುವ BJP. ರೋಡ್ ಶೋ ಮೂಲಕ ಮತದಾರರ ಮನ ಗೆಲ್ಲಲು ಮೋದಿ ಕಸರತ್ತು.
ಚಿಕ್ಕೋಡಿಯಲ್ಲಿ ರಾಹುಲ್ ಗಾಂಧಿ ಮತಬೇಟೆ. ರಾಹುಲ್ ಗಾಂಧಿಯಿಂದ ಚಿಕ್ಕೋಡಿಯಲ್ಲಿ ಭರ್ಜರಿ ಕ್ಯಾಂಪೇನ್. ಯಮಕಣಮರಡಿ, ಚಿಕ್ಕೋಡಿಯಲ್ಲಿ ರಾಹುಲ್ ಮತಯಾಚನೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ರಾಹುಲ್ ಗಾಂಧಿ ಭರ್ಜರಿ ಪ್ರಚಾರ.
ಇಂದು ದಯಾನಂದ ನಗರ ವಾರ್ಡ್ನಲ್ಲಿ ನಡೆದ ಕರುಮಾರಿಯಮ್ಮನ ಜಾತ್ರೆ ಮಹೋತ್ಸವದಲ್ಲಿ ಪುಟ್ಟಣ್ಣ ಭಾಗಿಯಾಗಿದ್ದರು. ದೇವಿಯ ದರ್ಶನ ಪಡೆದು ಮತ ಮತಯಾಚಿಸಿದರು. ಈ ವೇಳೆ ನೂರಾರು ಕಾರ್ಯಕರ್ತರು, ಸ್ಥಳೀಯರು ಪುಟ್ಟಣ್ಣನಿಗೆ ಸಾಥ್ ನೀಡಿದರು.
ಚುನಾವಣೆ ಮತ ಪ್ರಚಾರಕ್ಕೆ ದಿನಗಣನೆ ಶುರುವಾಗಿದೆ. ಎಲ್ಲ ಪಕ್ಷದ ಅಭ್ಯರ್ಥಿಗಳು ಎದುರಾಳಿಗಳಿಗೆ ಪೈಪೋಟಿ ನೀಡುವಲ್ಲಿ ನಿರತರಾಗಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ ರಾಜಗೋಪಾಲನಗರದಲ್ಲಿ ಮನೆ ಮನೆಗೆ ಭೇಟಿ ನೀಡಿ ಜೆಡಿಎಸ್ನ ಪಂಚರತ್ನ ಯೋಜನೆಗಳನ್ನು ಮನವರಿಕೆ ಮಾಡಿಸಿ ಮತ ಪ್ರಚಾರ ಮಾಡಿದರು.
KR ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಪರ ಕಿರುತೆರೆ ನಟ-ನಟಿಯರ ಅಬ್ಬರದ ಪ್ರಚಾರ ನಡೆಸ್ತಿದ್ದಾರೆ.. ಹೆಬ್ಬಾಳು ಹೋಬಳಿಯ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡ್ತಿದ್ದಾರೆ..
ಬಳ್ಳಾರಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಮಳೆ ಆತಂಕ. ಇಂದು ಮಧ್ಯಾಹ್ನ 2 ಗಂಟೆಗೆ ಬಳ್ಳಾರಿಯಲ್ಲಿ ಮೋದಿ ಕಾರ್ಯಕ್ರಮ. ರಾತ್ರಿ ಸುರಿದ ಮಳೆಯಿಂದಾಗಿ ವೇದಿಕೆ ಸಂಪೂರ್ಣ ಕೆಸರುಮಯ. ಇನ್ನೂ ಮೋಡ ಕವಿದ ವಾತಾವರಣ ಹಿನ್ನೆಲೆ ಮತ್ತೆ ಮಳೆ ಆತಂಕ. ರಾತ್ರಿ ಸುರಿದ ಮಳೆಗೆ ವೇದಿಕೆ ಸರಿಪಡಿಸುತ್ತಿರುವ ಸಿಬ್ಬಂದಿ.
ಬಜರಂಗದಳ ಬ್ಯಾನ್ ಮಾಡುವ ಪ್ರಣಾಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ. ಈ ಬಗ್ಗೆ ನಮ್ಮ ಪಕ್ಷದ ಹಿರಿಯ ನಾಯಕರು ಈಗಾಗಲೇ ಮಾತನಾಡಿದ್ದಾರೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ರು. ಅಲ್ಲದೇ ಬಿಜೆಪಿ ಕಟ್ಟಿದ ನನಗೆ ಪಕ್ಷ ಮೋಸ ಮಾಡಿದೆ. ಬಿ.ಎಲ್.ಸಂತೋಷ್ ನನ್ನ ಟಿಕೆಟ್ ತಪ್ಪಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇನ್ನು ಈ ಕುರಿತು ನಮ್ಮ ಪ್ರತಿನಿಧಿ ವಿಶ್ವನಾಥ್ ಹರಿಹರ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.
ಇಂದು ಗಣಿನಾಡು ಬಳ್ಳಾರಿ ಜಿಲ್ಲೆಗೆ ನಮೋ ಎಂಟ್ರಿ. ಬಿಜೆಪಿ ಅಭ್ಯರ್ಥಿ ಪರ ಮತ ಬೇಟೆ ನಡೆಸಲಿರೋ ಮೋದಿ. ಜಿಲ್ಲೆಯ 5 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಪರ ಮೋದಿ ಮತಬೇಟೆ. ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಗರಿಗೆದರಿದ ಚುನಾವಣಾ ಕಾವು. ನಗರದ ಸತ್ಯಂ ಶಾಲೆ ಎದುರುಗಡೆ ಮೈದಾನದಲ್ಲಿ ಬಹಿರಂಗ ಸಭೆ. ಬಹಿರಂಗ ಸಭೆಯಲ್ಲಿ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ.
Karnataka Election 2023 : ವಿಭಿನ್ನ ಪ್ರಧಾನಿಯಿದ್ದರೆ ಕಾಂಗ್ರೆಸ್ ಗೆ ಕಷ್ಟ. ವಿಭಿನ್ನವಾಗಿರುವ ಪ್ರಧಾನಿಗಳು ಇದ್ದಾಗ ಅವರಿಗೆ ಕಷ್ಟವಾಗುತ್ತೆ. ರಾಜ್ಯದ ಜನರು ಕಷ್ಟದಲ್ಲಿದ್ದಾಗ ನಮ್ಮ ಪ್ರಧಾನಿ ಅತಿ ಹೆಚ್ಚು ಪರಿಹಾರ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Karnataka Election 2023 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ರಾಜ್ಯದಲ್ಲಿ ರಾಜಕೀಯ ಅಖಾಡ ರಂಗೇರಿದೆ. ಇತ್ತ ಮತದಾರರು ಕೂಡ ತಾವು ಮತಚಲಾಯಿಸಲು ಸಿದ್ಧರಾಗಿದ್ದಾರೆ. ಈ ಚುನಾವಣಾ ಬಿಸಿಯ ನಡುವೆ ಚಂದನವನದ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳು ಯಾವವು ಎಂದು ನಾವು ನಿಮಗೆ ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.