ರಾಯಚೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಮಸ್ಕಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಯಚೂರಿನ ಸಂತೆ ಬಜಾರ್ ರಸ್ತೆಯ ನಿವಾಸಿ ಮಹಿಳೆ ಒಬ್ಬರು ತುಂಬು ಗರ್ಬಿಣಿಯಾಗಿದ್ದು ಶುಕ್ರವಾರ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಚೀರಾಡುತ್ತಿದ್ದ ಮಹಿಳೆಯನ್ನು ಕಂಡ ಕುಟುಂಬಸ್ಥರು ತಕ್ಷಣ ಆಟೋ ಕರೆಸಿದ್ದಾರೆ.
ಬೆಂಗಳೂರು: ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಪಾಲಿಸುವುದು ಅತ್ಯಂತ ಅವಶ್ಯಕ. ರೋಗಿಯ ಪ್ರಾಣ ಉಳಿಸಿದರೆ ವೈದ್ಯರೇ ದೇವರಾಗುತ್ತಾರೆ. ತಮ್ಮ ವೃತ್ತಿಯಲ್ಲಿ ಯಾವುದೇ ಕಾರಣಕ್ಕೂ ವೈದ್ಯರು ನಿರ್ಲಕ್ಷ್ಯ ತೋರಬಾರದು.
case against Pushpa villain Fahad Fazil: ಫಹದ್ ನಿರ್ಮಾಣ ಮಾಡುತ್ತಿರುವ ಪಿಂಕೇಲಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಇದೇ ವೇಳೆ ಫಹಾದ್ ಫಾಜಿಲ್ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.
Chhattisgarh : ಆಪರೇಷನ್ ಥಿಯೇಟರ್ನಲ್ಲಿ ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೂವರು ನರ್ಸ್ಗಳನ್ನು ಕೆಲಸದಿಂದ ವಜಾಗೊಳಿಸಿದ ಘಟನೆಯೊಂದು ಛತ್ತೀಸ್ಗಢದ ರಾಯ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
Karnataka: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬರದನಹಳ್ಳಿ ಗ್ರಾಮದಲ್ಲಿ ಜನವರಿ 1 ರಂದು 2024 ಸೋಮವಾರದಂದು ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಬಳಿಕ ಕನಕಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಚಿಕಿತ್ಸೆ ವಿಳಂಬ, ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ, ರೋಗಿಗಳ ಜೊತೆ ಅನುಚಿತ ವರ್ತನೆ, ಅವಧಿ ಮೀರಿದ ಔಷಧಿ ವಿತರಣೆ ಕುರಿತು ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ ಮಲಗಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕರ್ತವ್ಯಕ್ಕೆ ಹಾಜರಾಗದೆ ಇದ್ದರಿಂದ ಆಸ್ಪತ್ರೆ ಸಿಬ್ಬಂದಿ ಮನೆಗೆ ಹೋಗಿ ನೋಡಿದಾಗ ಸಿಂದುಜಾ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆತರುವಾಗ ಹೆರಿಗೆ ನೋವು ಹೆಚ್ಚಾಗಿತ್ತು. ತಕ್ಷಣ ಎಚ್ಚೆತ್ತ ಅಂಬ್ಯುಲೆನ್ಸ್ ಸಿಬ್ಬಂದಿ ಆಸ್ಪತ್ರೆ ತಲುಪುವುದಕ್ಕಿಂತ ಮುಂಚೆಯೇ ವಾಹನದಲ್ಲಿಯೇ ಹೆರಿಗೆ ಕಾರ್ಯ ಮಾಡಿಸಿದರು.
ಧಾರವಾಡ ಜಿಲ್ಲೆಯ ಕುಂದಗೋಳ ಸೇರಿದಂತೆ ವಿವಿಧ ತಾಲೂಕು ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಚೀಟಿ ಕೌಂಟರ್ ತುಂಬಾ ಜನಜಂಗುಳಿ, ಇತ್ತ ವೈದ್ಯರ ಮುಂದೆ ರೋಗಿಗಳ ದಂಡೇ ನೆರದಿದ್ದರೇ, ಅತ್ತ ಕ್ಷ-ಕಿರಣ ವಿಭಾಗದಲ್ಲಿ ಕಾಲಿಡಲೂ ಜಾಗ ಇಲ್ಲದಂತಾಗಿದೆ.
ಕೇಂದ್ರ ಸರ್ಕಾರವು ಪ್ರಸಕ್ತ ವರ್ಷ 3,39,600 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಗುರಿ ನೀಡಿತ್ತು. ಈಗಾಗಲೇ 4,28,451 ಶಸ್ತ್ರಚಿಕಿತ್ಸೆ ಮಾಡಿ ಒಟ್ಟಾರೆ ಶೇ.126 ರಷ್ಟು ಸಾಧನೆ ಮಾಡಲಾಗಿದೆ. ಎನ್.ಜಿ.ಒ, ವೈದ್ಯಕೀಯ ಕಾಲೇಜುಗಳು, ಇತರೆ ವಲಯಗಳಲ್ಲಿಯೂ ಉತ್ತಮ ಸಾಧನೆಯಾಗಿದೆ. ರಾಜ್ಯದಲ್ಲಿ ಅಂಧತ್ವ ನಿವಾರಣೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಸಚಿವರು ವಿವರಿಸಿದ್ದಾರೆ
ಸರ್ಕಾರಿ ಆಸ್ಪತ್ರೆಯ ಧನಪಿಶಾಚಿಗಳಿಗೆ ಅಂಕುಶ ಹಾಕೋರು ಯಾರು? - ಇಷ್ಟೇ ಬೇಕೆಂದು ಕೇಳಿ ಪಡೆದು ಗರಿ ಗರಿ ನೋಟಿ ಎಣಿಸೋ ಸಿಬ್ಬಂದಿ - ಆರೋಗ್ಯ ಸಚಿವರೇ ಇದೇನಾ ನಿಮ್ಮ ಇಲಾಖೆ ಸಿಬ್ಬಂದಿಯ ಕೆಲಸ..!
ಇಷ್ಟೇ ಅಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು 10 ರೂಪಾಯಿ, ಬಿಪಿಎಲ್ ಕಾರ್ಡ್ ದಾರರಿಗೆ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಬಹುದು. ಆದರೆ, ಡಿಜಿಟಲ್ ರೂಪದಲ್ಲಿ ಶುಲ್ಕ ಪಾವತಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ಇನ್ಮುಂದೆ ಜಾರಿ ಮಾಡಲಾಗುವುದು ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ತಮಿಳುನಾಡಿನಲ್ಲಿ ಸುಮಾರು 50 ಸಾವಿರ ಜನರು TBಯಿಂದ ಬಳಲುತ್ತಿದ್ದು, ಟಿಬಿ ರೋಗಿ/ಗ್ರಾಮ ದತ್ತು ಸ್ವೀಕಾರ ಯೋಜನೆಯಾದ ನಿಕ್ಷಯ ಮಿತ್ರ ಅಭಿಯಾನವನ್ನು ಬೆಂಬಲಿಸುವಂತೆ ಮನ್ಸುಖ್ ಮಾಂಡವಿಯಾ ಜನರಿಗೆ ಮನವಿ ಮಾಡಿದರು.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದಡಿಯಲ್ಲಿ ದೇಶದಲ್ಲಿ ಈವರೆಗೆ 420 ಇ-ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ರಾಜ್ಯಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. 2015 ರ ಸೆಪ್ಟೆಂಬರ್ನಿಂದ ಈ ಸೌಲಭ್ಯದ ಮೂಲಕ 18.37 ಕೋಟಿ ವಹಿವಾಟು ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೊರೋನಾ ಸೊಂಕು ಹೆಚ್ಚಳವಾಗುತ್ತಿರುವ ವೇಳೆಯಲ್ಲೆ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಬಿಬಿಎಂಪಿ ಹಾಗೂ ಇತರೆ ಇಲಾಖೆಗಳು ಕೋಳಿ ಜಗಳವಾಡುತ್ತಾ ಜನರ ಜೀವದ ಜತೆ ಚೆಲ್ಲಾಟವಾಡುತ್ತಿವೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಉಸ್ತುವಾರಿ ಜಗದೀಶ್ ವಿ ಸದಂ ಆರೋಪ ಮಾಡಿದ್ದಾರೆ.
ರಾಜಸ್ಥಾನದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಸುದ್ದಿ ಮಾಸುವ ಮುನ್ನವೇ , 2019 ರ ಡಿಸೆಂಬರ್ನಲ್ಲಿ ಗುಜರಾತ್ನ ರಾಜ್ಕೋಟ್ ಮತ್ತು ಜಾಮ್ನಗರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 179 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ರಾಜ್ಕೋಟ್ನಲ್ಲಿ 111 ಸಾವುಗಳು ಸಂಭವಿಸಿದರೆ, ಜಮ್ನಗರದಲ್ಲಿ ಡಿಸೆಂಬರ್ನಲ್ಲಿ 68 ಮತ್ತು ನವೆಂಬರ್ನಲ್ಲಿ 71 ಸಾವುಗಳು ಸಂಭವಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.