2018 ರ ಆ. 1 ರಂದು ಬೊಮ್ಮಲಾಪುರ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ಪುಜೇರಿ ಎಂಬವರಿಗೆ ಪೌತಿ ಖಾತೆ ಮಾಡಿಕೊಟ್ಟ ವಿಚಾರದಲ್ಲಿ ಶ್ರೀಕಂಠಸ್ವಾಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮುಂಗಾರಿನ ಅವಧಿ ಮತ್ತಷ್ಟು ಹಿಮ ಹೊತ್ತು ತರುತ್ತಿದ್ದು ಹಿಮಾಚ್ಛಾದಿತ ಬೆಟ್ಟಕ್ಕೆ ಭಕ್ತರು, ಪ್ರವಾಸಿಗರು ಮನ ಸೋಲುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು, ಬೆಳಚಲವಾಡಿ, ಕಮರಹಳ್ಳಿ ಮೂರು ಗ್ರಾಮಗಳ ಗ್ರಾಮಸ್ಥರು ಒಗ್ಗಟ್ಟಿನಿಂದ 35 ವರ್ಷಗಳ ಬಳಿಕ ಶ್ರೀ ಮಹದೇಶ್ವರ ಸ್ವಾಮಿಯ ರಥೋತ್ಸವ (Shri Mahadeshwar Swami Rathotsava) ನೆರವೇರಿಸಿದರು.
ಹಣ ಜಮೆ ಮಾಡಲು ವಿಳಂಬವಾದ ಹಿನ್ನಲೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಅರಿಶಿಣ ಬೆಳೆಗಾರರು ಪ್ರತಿಭಟನಾ ಧರಣಿ ಮುಂದುವರೆಸಿದ್ದಾರೆ. ಈ ವೇಳೆ, ಡಿಸಿ ಬರಲೇಬೇಕೆಂದು ಮಾದಪ್ಪ ಹಾಗೂ ಬಸವರಾಜು ಎಂಬವರು ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಿದ್ದು ಡಿಸಿ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ನಾಗೇಶ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು ಒಳೇಟಿನಿಂದ ಚಾಮರಾಜನಗರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಂಗಳ ಗ್ರಾಮದ ಸಿದ್ದರಾಜು, ನಾಗೇಶ್, ಗೋಪಾಲ ಹಾಗೂ ತೇಜು ಎಂಬವರ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡ್ಲುಪೇಟೆ (Gundlupete) ತಾಲೂಕಿನ ಕರಿಕಲ್ಲುಮಾದಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಆಶಾ ದಂಪತಿಯ 5 ವರ್ಷದ ಮಗು ಸ್ನೇಹಾ ಬದುಕು ಹಸನಾಗಲು ಸಹಾಯ ಹಸ್ತಬೇಕಿದೆ. ಮಾತನಾಡುವ ಹಾಗೂ ಸ್ವಂತ ಬಲದಲ್ಲಿ ನಿಲ್ಲುವ ಶಕ್ತಿ ಕಳೆದುಕೊಂಡಿದ್ದು ಸೂಕ್ತ ವೈದ್ಯಕೀಯ ನೆರವು ಸಿಕ್ಕರೇ ಎಲ್ಕರಂತೇ ತನ್ನ ಮಗಳಾಗುವಳು ಎಂಬ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.
ಕಳೆದ ಎರಡು ದಿನಗಳಿಂದ ಗುಂಡ್ಲುಪೇಟೆ ಮಡಹಳ್ಳಿ ಕಲ್ಲು ಕ್ವಾರಿ ಕುಸಿತ ಪ್ರಕರಣ (White stone quarry) ದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು ಇಂದು ಎರಡು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಗುಡ್ಡ ಕುಸಿದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಸಮೀಪವಿರುವ ಬಿಳಿಕಲ್ಲು ಕ್ವಾರಿಯಲ್ಲಿ ನಡೆದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದ ಸಾವಿನ ಬಗ್ಗೆ ನಿಖರ ಮಾಹಿತಿ ಇನ್ನೂ ಅಧಿಕಾರಿಗಳು ತಿಳಿಸಿಲ್ಲ, ಸದ್ಯಕ್ಕೆ, ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.