ರಾಜ್ಯದಲ್ಲಿ ಅಮುಲ್ ಡೇರಿ ಉದ್ಯಮ ವಿಸ್ತರಣೆ ವಿಚಾರ. ಸರ್ಕಾರದ ವಿರುದ್ಧ ಮಾಜಿ ಸಿಎಂ HDK ಕೆಂಡಾಮಂಡಲ. ನಂದಿನಿ ವಿರುದ್ಧದ ಮೂರು ಸಂಚುಗಳನ್ನ ಬಿಚ್ಚಿಟ್ಟ HDK. ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಟ್ವೀಟ್ ಮಾಡಿ ಹೆಚ್ಡಿ ಕುಮಾರಸ್ವಾಮಿ ಕೆಂಡಾಮಂಡಲ.
ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಿ ಹಾಲಿನ ಉತ್ಪನ್ನಗಳ ದರ ಏರಿಕೆಯಿಂದಾಗಿ ಬರುವ ಲಾಭವನ್ನು ಪೂರ್ಣವಾಗಿ ಹೈನುಗಾರರಿಗೇ ನೀಡಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಇಂದಿನಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ಆಗಲಿದೆ. ಪ್ರತೀ ಲೀಟರ್ ಹಾಲು ಮೊಸರಿಗೆ ಎರಡು ರೂಪಾಯಿ ಹೆಚ್ಚಿಸಿ ಕೆಎಂಎಫ್ ಆದೇಶ ಹೊರಡಿಸಿದೆ. ಸಾಕಷ್ಟು ಚರ್ಚೆ ಬಳಿಕ ಕೆಎಂಎಫ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇಂದು ನಡೆದಿದೆ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು, ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.
ಸಿಎಂ ಬೊಮ್ಮಾಯಿ ಅವರು ನಂದಿನ ಹಾಲು ಹಾಗೂ ಮೊಸರಿನ ದರ ಹೆಚ್ಚಳವನ್ನು ತಡೆದಿದ್ದು, ಸಿಎಂ ಸೂಚನೆ ನಂತರ ದರ ಏರಿಕೆ ಆದೇಶವನ್ನು ಕೆಎಂಎಫ್ ಹಿಂಪಡೆದಿದೆ. ಕೆಎಂಎಫ್ ಇಂದಿನಿಂದಲೇ ಜಾರಿಗೆ ಬರುವಂತೆ ನಂದಿನ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20 ರಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಅಲ್ಲದೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು.
ಹಾಲಿನ ದರ ಏರಿಕೆ ಬಗ್ಗೆ ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.
ಸರ್ಕಾರ ಮತ್ತು ಕರ್ನಾಟಕ ಹಾಲು ಮಹಾಮಂಡಳಿಯ ಆದೇಶದಂತೆ ಧಾರವಾಡ ಹಾಲು ಒಕ್ಕೂಟದ ಪಶು ಆಹಾರ ಕಾರ್ಖಾನೆಗೆ ರೈತರಿಂದ ನೇರವಾಗಿ ಬೆಂಬಲ ಬೆಲೆ ಮೂಲಕ ಮೆಕ್ಕೆಜೋಳವನ್ನು ಖರೀದಿಸಲಾಗುವುದೆಂದು ಪಶು ಆಹಾರ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
2022ರ ಆಗಸ್ಟ್ 22 ರಂದು 450 ರೂ.ಗೆ ಮಾರಾಟವಾಗಿದ್ದ ಒಂದು ಲೀಟರ್ ನಂದಿನಿ ತುಪ್ಪ ಈಗ ಲೀಟರ್ಗೆ 630 ರೂ.ಗೆ ಮಾರಾಟವಾಗುತ್ತಿದೆ. ಹಬ್ಬದ ಋತು ಆರಂಭವಾಗುವ ಪೂರ್ವದಲ್ಲಿ ಒಂದು ಲೀಟರ್ ತುಪ್ಪ 450 ರೂ.ಗೆ ಮಾರಾಟ ಮಾಡಲಾಗಿತ್ತು. ಹಬ್ಬದ ಋತುವಿನಲ್ಲಿ ಕೆಎಂಎಫ್ ನಿಯಮಿತವಾಗಿ ತುಪ್ಪದ ಬೆಲೆ ಏರಿಕೆಯನ್ನು ಪ್ರಾರಂಭಿಸಿತು.
ಹಣದುಬ್ಬರದಿಂದ ಈಗಾಗಲೇ ತತ್ತರಿಸಿರುವ ಜನತೆಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಇದೆ. ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ನಿರ್ಧರಿಸಿದ್ದು, ಇಂದಿನಿಂದ ಹಾಲಿನ ದರ ಮೂರು ರೂಪಾಯಿ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.
ನಂದಿನಿ ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರಗಳನ್ನು ನಿನ್ನೆ ಸಂಜೆ ಮತ್ತೆ ಪರಿಷ್ಕರಿಸಲಾಗಿದೆ. ಈ ಎಲ್ಲ ಹಾಲಿನ ಉತ್ಪನ್ನಗಳ ದರವನ್ನು 50 ಪೈಸೆಯಿಂದ ₹1.50ರಷ್ಟು ಕಡಿಮೆ ಮಾಡಲಾಗಿದೆ. ಭಾನುವಾರ ಈ ಉತ್ಪನ್ನಗಳ ದರಗಳನ್ನು ₹1ರಿಂದ ₹3ರಷ್ಟು ಹೆಚ್ಚಿಸಲಾಗಿತ್ತು. ಗ್ರಾಹಕರಿಂದ ಬೆಲೆ ಏರಿಕೆಗೆ ಅಸಮಾಧಾನ ವ್ಯಕ್ತವಾಗಿದ್ದರಿಂದ ಕೆಎಂಎಫ್ ಈ ಕ್ರಮ ಕೈಗೊಂಡಿದೆ.
Milk Products Price Cut: ನಂದಿನಿ, ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರ ಮತ್ತು ಇತರೆ ಹಾಲಿನ ಉತ್ಪನ್ನಗಳ ಮೇಲೆ ಇಂದಿನಿಂದ ಜಿಎಸ್ಟಿ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಈ ನೂತನ ದರ ಜಾರಿಗೆ ಮಾಡಿ ಕೆಎಂಎಫ್ ಈ ದರ ಏರಿಕೆಯ ಕುರಿತು ತನ್ನ ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ ಜಾರಿಗೊಳಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.