ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆ ತನ್ನ ಒಡಿಸ್ಸಿಯಸ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಚಂದ್ರನ ಮೇಲ್ಮೈಯಲ್ಲಿ ಖಾಸಗಿ ಸಂಸ್ಥೆಯೊಂದು ಬಾಹ್ಯಾಕಾಶ ನೌಕೆಯನ್ನು ಇಳಿಸಿರುವುದು ಇದೇ ಮೊದಲ ಬಾರಿಯಾಗಿದ್ದು, ಇತರ ಹಲವು ಖಾಸಗಿ ಸಂಸ್ಥೆಗಳ ಪ್ರಯತ್ನಗಳಲ್ಲಿನ ವೈಫಲ್ಯಗಳ ಬಳಿಕ ಮಹತ್ತರ ಯಶಸ್ಸಾಗಿದೆ.
ಒಡಿಸ್ಸಿಯಸ್ ನೌಕೆಯ ಪ್ರಯಾಣ ಫೆಬ್ರವರಿ 14ರಂದು ಫಾಲ್ಕನ್ 9 ರಾಕೆಟ್ ಮೂಲಕ ಆರಂಭಗೊಂಡಿತು. ಈ ನೌಕೆ ಫೆಬ್ರವರಿ 21ರಂದು ಚಂದ್ರನ ಕಕ್ಷೆಗೆ ತಲುಪಿ, ಫೆಬ್ರವರಿ 22ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಯಿತು.
Human Life On Moon - ಚಂದಿರನ ಅಂಗಳದಲ್ಲಿ ಮಾನವ ಜೀವನದ ಅಸ್ತಿತ್ವ ಹುಡುಕಾಟ ನಡೆಸುತ್ತಿರುವವರ ಪಾಲಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಇತ್ತೀಚೆಗಷ್ಟೇ ನಡೆಸಲಾಗಿರುವ ಸಂಶೋಧನೆಯೊಂದರಲ್ಲಿ ಒಂದು ಸಕಾರಾತ್ಮಕ ಸಂಗತಿ ಬಹಿರಂಗಗೊಂಡಿದೆ. ವಾಸ್ತವದಲ್ಲಿ, ವಿಜ್ಞಾನಿಗಳು ಚಂದ್ರನ ಅಂಗಳದಿಂದ ತಂದ ಮಣ್ಣಿನಲ್ಲಿ ಕೆಲ ಸಸಿಗಳನ್ನು ನೆಟ್ಟಿದ್ದರು ಮತ್ತು ಅವು ಇದೀಗ ಯಶಸ್ವಿಯಾಗಿ ಬೆಳೆದಿವೆ. ಇದರರ್ಥ ಚಂದ್ರನ ಮೇಲ್ಮೈ ಮೇಲಿನ ಮಣ್ಣಿನಲ್ಲಿ ಸಸ್ಯಗಳು ಬೆಳೆದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.