ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನ ಅಧಿವೇಶನದ ಮಧ್ಯದಲ್ಲಿ ನನಗೆ ಇಡಿ ನೋಟಿಸ್ ಬಂದಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಆದರೆ, ದೈರ್ಯದಿಂದ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ಚುನಾವಣೆ ಫಲಿತಾಂಶಕ್ಕೆ ಮುನ್ನೆವೇ ನಾನು ಸಿಎಂ, ನಾನು ಸಿಎಂ ಎಂದು ಹೇಳುವುದು ಸರಿಯಲ್ಲಾ, ಸಿಎಂ ಯಾರಗಾಬೇಕು ಎಂಬುದು ಮೈಸೂರಿನಲ್ಲೂ, ಬೆಂಗಳೂರಿನಲ್ಲೂ ಗುಲ್ಬರ್ಗದಲ್ಲೂ ತೀರ್ಮಾನವಾಗುವುದಿಲ್ಲಾ. ಪಕ್ಷದ ಹೈ ಕಮಾಂಡ್ ಅದನ್ನ ತೀರ್ಮಾನ ಮಾಡುತ್ತದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಹುಲ್ ಗಾಂಧಿ ಸಮ್ಮುಖದಲ್ಲಿ ತಮ್ಮನ್ನು ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯ ಉದ್ದೇಶ. ಇದಕ್ಕಾಗಿಯೇ ರಾಹುಲ್ಗೆ ಅಧಿಕೃತ ಆಹ್ವಾನ ನೀಡಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿಎಂ ಇಬ್ರಾಹಿಂ ಮಾತುಗಳನ್ನು ಕಾಂಗ್ರೆಸ್ ನಾಯಕರು ನಿರ್ಲಕ್ಷಿಸಿದರು. ಇಂದು ಅದೇ ಇಬ್ರಾಹಿಂ ಮಾತಿಗೆ ಬೆಲೆಕೊಡಲೇ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಒಳ್ಳೆಯ ಆಡಳಿತ ಕೊಟ್ಟರೆ ಒಳ್ಳೆಯ ಅಭ್ಯರ್ಥಿಗಳು ಆಯ್ಕೆ ಆಗಿ ಬರ್ತಾರೆ ಅಂತಾ ಕಲಬುರಗಿಯಲ್ಲಿ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾನು ಹೋಮ್ ಮಿನಿಸ್ಟರ್ ಆಗಿದ್ದಾಗ ಹೊಸ ನಿಯಮ ಮಾಡಿ ಅವ್ಯವಹಾರ ನಿಲ್ಲಿಸೋದ್ರಲ್ಲಿ ಯಶಸ್ವಿಯಾಗಿದ್ದೆ.. ಆದ್ರೆ ಇವಾಗ ಕೆಟ್ಟ ಚಾಳಿಗೆ ಮುನ್ನುಡಿ ಬರೆದಿದ್ದಾರೆ. ಸಿಐಡಿ ನ್ಯಾಯವಾಗಿ ತನಿಖೆ ನಡೆಸಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.
ಬಿಜೆಪಿಯನ್ನು ಬೀಜಿಂಗ್ ಜನತಾ ಪಕ್ಷ ಎಂದು ಹಂಗಿಸುವ ನಿಮಗೆ ಚೀನಾ ನಿಯೋಗದ ಜೊತೆಗೆ ನಿಮ್ಮ ನಾಯಕ ರಾಹುಲ್ ಗಾಂಧಿ ಮಾಡಿಕೊಂಡ ರಾಷ್ಟ್ರ ವಿರೋಧಿ ಒಪ್ಪಂದ ಮರೆತು ಹೋಯಿತೇ? ಅಂತಾ ಪ್ರಶ್ನಿಸಿದೆ.
ಪ್ರಧಾನಿ ಮೋದಿಗೆ ಸಾಲ ಮಾಡಿ ತುಪ್ಪ ತಿನ್ನುವ ಚಾಳಿ ಇದೆ. ಅದಕ್ಕಾಗಿಯೇ ಅವರು ಎಲ್ಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.