Kangana Ranaut : ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದೆಯಾಗಿ ಸ್ಪರ್ಧಿಸಿ, ತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಭಾರಿ ಬಹುಮತದೊಂದಿಗೆ ಗೆದ್ದಿದ್ದಾರೆ. ಸಂಸದೆಯಾಗಿ ಗೆದ್ದ ನಂತರ ಕೊಯಮತ್ತೂರಿನ ಇಶಾ ಫೌಂಡೇಶನ್ಗೆ ಹೋಗಿ, ಅಲ್ಲಿ ಆದಿಯೋಗಿಯನ್ನು ಭೇಟಿ ಮಾಡಿ ಸದ್ಗುರುಗಳ ಆಶೀರ್ವಾದ ಪಡೆದಿರುವ ಫೋಟೋಸ್ ಸದ್ಯಕ್ಕೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಸ್ ವೈರಲ್ ಆಗುತ್ತಿವೆ.
Lokasabha 2024 : 2023ರ ವಿಧಾನಸಭಾ ಚುನಾವಣೆ ಗೆಲುವಿನ ಜೋಶ್ ನಲ್ಲಿ ಇರುವ ಕಾಂಗ್ರೆಸ್ ಲೋಕಸಭೆ ಚುನಾವನೆಯಲ್ಲೂ ರಾಜ್ಯದಲ್ಲಿ ಕನಿಷ್ಠ 15ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಪಣ ತೊಟ್ಟಿದ್ದೆ. ಈ ಹಿನ್ನಲೆಯಲ್ಲಿ ಬಿಜೆಪಿ ಭದ್ರ ಕೋಟೆ ಆಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಭೇದಿಸಲು ಸಿದ್ಧತೆ ನಡೆಸುತ್ತಿದೆ.
ಲೋಕಸಭೆ ಸಂಸದರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ವಯನಾಡ್ಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು "ಎಂಪಿ ಎನ್ನುವುದು ಕೇವಲ ಟ್ಯಾಗ್ ಅಥವಾ ಸ್ಥಾನ ಅಷ್ಟೇ ಆದರೆ ಅದು ವಯನಾಡ್ ಜನರನ್ನು ಪ್ರತಿನಿಧಿಸುವುದನ್ನು ತಡೆಯುವುದಿಲ್ಲ ಎಂದು ಹೇಳಿದರು.
ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ತಮ್ಮ ಮದುವೆಯಲ್ಲಿ ಡಿಜೆ ಸಂಗೀತ ನುಡಿಸುವುದನ್ನು ಕೆಲವು ಪೊಲೀಸರು ತಡೆದ ನಂತರ ದಂಪತಿಗಳು ಪೊಲೀಸ್ ಠಾಣೆಯಲ್ಲಿ ಧರಣಿ ಪ್ರತಿಭಟನೆ ನಡೆಸಿದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಗುರುವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ವಧು-ವರರು ಪ್ರತಿಭಟನೆಗೆ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಸೀರೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ನಂತರ ಹೇಳಿಕೆಯೊಂದರಲ್ಲಿ,ತಾವು ಸುರಕ್ಷಿತವಾಗಿದ್ದು,ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
Fire Accident At Private Hospital - ಮಧ್ಯಪ್ರದೇಶದ ಜಬಲ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.
Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರ ರಾಜಕೀಯ ಪ್ರವೇಶದ ಬಗ್ಗೆ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಪಕ್ಷ, ಸ್ಥಾನ ಸೇರಿದಂತೆ ರಶ್ಮಿಕಾ ಶೀಘ್ರದಲ್ಲೇ ಸಂಸದೆಯಾಗುತ್ತಾರೆ ಎಂದು ಹೇಳಿದ್ದಾರೆ. ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರ ಇತ್ತೀಚಿನ ಮಾತುಗಳು ವೈರಲ್ ಆಗಿವೆ.
ನನಗೆ ಕೆ.ಆರ್. ನಗರ ತಾಲೂಕಿನ ಜನತೆ ಆರ್ಶೀವಾದ ಮಾಡಿದರೆ ಹಳ್ಳಿಗಳ ರಸ್ತೆಗಳಿಗೆ ಡಾಂಬರೀಕರಣ ಮಾಡುವುದಾಗಿ ಹೇಳಿದ್ದೆ, ಮಾತಿಗೆ ತಪ್ಪದೇ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್
ಎರಡು ವರ್ಷಗಳ ಉಪಕ್ರಮ ಪೌಷ್ಟಿಕಾಂಶ ಅಭಿಯಾನದಡಿ ದೇಶದ ಅಂಗನವಾಡಿಗಳಲ್ಲಿ 6 ವರ್ಷದವರೆಗಿನ ಮಕ್ಕಳ ತೂಕ ಮತ್ತು ಎತ್ತರವನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ನೀಡಲು ನಿರ್ಧರಿಸಿದೆ. ಈ ಯೋಜನೆಯನ್ನು ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ ಜಾರಿಗೆ ತರಲಾಗಿಲ್ಲ. ಇದಕ್ಕಾಗಿ 9 ಟೆಂಡರ್ಗಳನ್ನು ಹಿಂಪಡೆಯಲಾಗಿದ್ದು ಪ್ರತಿ ಬಾರಿಯೂ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ.
ಮನರೇಗಾ ಯೋಜನೆಯಲ್ಲಿನ ಮೋಸದ ಚಟುವಟಿಕೆಯ ಮತ್ತೊಂದು ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದ್ದು, ಪಂಚಾಯತ್ ಅಧ್ಯಕ್ಷ , ಕಾರ್ಯದರ್ಶಿ ಮತ್ತು ಜಿರ್ನ್ಯಾ ಜಿಲ್ಲೆಯ ಸಹಾಯಕ ಪಿಪಾರ್ಖೆಡಾ ನಾಕಾ ಪಂಚಾಯತ್ ಅವರು ಬಾಲಿವುಡ್ ನಟಿಯ ಚಿತ್ರಗಳನ್ನು ಸ್ಕೀಮ್ ಫಲಾನುಭವಿಗಳ ನಕಲಿ ಜಾಬ್ ಕಾರ್ಡ್ಗಳನ್ನು ರಚಿಸಲು ಬಳಸಿದ್ದರು. ಖಾತೆಗಳಿಂದ ಹಣವನ್ನು ತೆಗೆದುಕೊಳ್ಳಲು ನಕಲಿ ಜಾಬ್ ಕಾರ್ಡ್ಗಳನ್ನು ಸಹ ಬಳಸಲಾಗುತ್ತಿತ್ತು.
COVID-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಗತ್ಯತೆಗಳನ್ನು ಪೂರೈಸಲು ಲೋಕಸಭೆ ಮಂಗಳವಾರ ಎಲ್ಲಾ ಸಂಸದರ ವೇತನವನ್ನು ಶೇಕಡಾ 30ರಷ್ಟು ಕಡಿತಗೊಳಿಸುವ ಮಸೂದೆಯನ್ನು ಅಂಗೀಕರಿಸಿತು. ಸಂಸತ್ತಿನ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ, 2020 ಅನ್ನು ಕೆಳಮನೆಯ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು.
ಬೆಂಗಾಲಿ ನಟಿ ನುಸ್ರತ್ ಜಹಾನ್ ಇದೇ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದು ಇತ್ತೀಚಿಗೆ ಮುಖ್ಯಾಂಶಗಳಲ್ಲಿದ್ದಾರೆ. ಈಗ ಮೊದಲ ಬಾರಿಗೆ ಅವರು ಪತಿ ನಿಖಿಲ್ ಜೈನ್ ಅವರೊಂದಿಗೆ ಕೆಲವು ರೋಮ್ಯಾಂಟಿಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.