ಈ ಬಾರಿಯ ಬಜೆಟ್ ಅಧಿವೇಶನ ಪ್ರತಿಪಕ್ಷಗಳ ಗದ್ದಲದಲ್ಲೇ ವ್ಯರ್ಥವಾಗಿರುವುದರಿಂದ ಅಷ್ಟು ದಿನಗಳ ವೇತನ ಪಡೆಯದಿರಲು ಎನ್ಡಿಎ ಸಂಸದರು ತೀರ್ಮಾನಿಸಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.
ಎನ್ಡಿಎ ಮೈತ್ರಿಕೂಟ ತ್ಯಜಿಸಿದ ಟಿಡಿಪಿ ನಿರ್ಧಾರ ದುರದೃಷ್ಟಕರ ಮತ್ತು ಏಕಪಕ್ಷೀಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
ಬಜೆಟ್ನಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ನೀಡದಿರುವ ಬಗ್ಗೆ ಮೂಡಿದ್ದ ಅಸಮಧಾನ ಉಲ್ಬಣಗೊಂಡಿದೆ. ಇದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅತಿ ದೊಡ್ಡ ಮಿತ್ರಪಕ್ಷವಾಗಿದ್ದ ಟಿಡಿಪಿ ಜೊತೆಗಿನ ಸಂಬಂಧವನ್ನು ಸಡಿಲಗೊಳಿಸುತ್ತಿದೆ.
ಕೇಂದ್ರ ಬಜೆಟ್ 2018 ಯಾವುದೇ ಹೊಂದಾಣಿಕೆಯ ಬಜೆಟ್ಗಳಿಲ್ಲದೆ ಕೇವಲ ಫ್ಯಾನ್ಸಿ ಯೋಜನೆಗಳನ್ನು ಒಳಗೊಂಡಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.