ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ದೆಹಲಿ ಪೊಲೀಸರು ಶ್ರದ್ಧಾ ಅವರ ಫೋನ್ನ ಸಿಡಿಆರ್ (ಕಾಲ್ ಡಿಟೇಲ್ ರೆಕಾರ್ಡ್) ವರದಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಶ್ರದ್ಧಾ ಫೋನ್ನ ಕೊನೆಯ ಲೊಕೇಶನ್ ಮೇ 18 ಮತ್ತು 19 ರಂದು ಮೆಹ್ರೌಲಿಯ ಛತ್ತರ್ಪುರ ಎಂಬ ವಿಚಾರ ವರದಿಯಿಂದ ಬಹಿರಂಗವಾಗಿದೆ.
Shraddha Murder Case: ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಬೆಳಗ್ಗೆ ಮನೆಯ ಹೊರಗೆ ಬ್ಯಾಗ್ ಸಮೇತ ತಿರುಗಾಡುತ್ತಿದ್ದ ದೃಶ್ಯಗಳು ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಯಿಂದ ಇದು ಬಹಿರಂಗವಾಗಿದೆ. ಈತ ಶ್ರದ್ಧಾ ವಾಕರ್ ಅವರ ದೇಹದ ಭಾಗಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.
ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ರೋಚಕ ಸಂಗತಿಗಳು ಹೊರ ಬರುತ್ತಿವೆ. ಇಡಿ ದೇಶವನ್ನೇ ಬೆಚ್ಚಿ ಬೀಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಶ್ರದ್ಧಾ ಸ್ನೇಹಿತರೊಬ್ಬರು ನೀಡಿರುವ ಹೇಳಿಕೆ ಭಯಾನಕವಾಗಿದೆ. ಅಲ್ಲದೆ, 2020ರಲ್ಲಿಯೇ ಅಫ್ತಾಬ್ ಶ್ರದ್ಧಾಳನ್ನು ಕೊಲ್ಲಲು ಮುಂದಾಗಿದ್ದ ಎಂಬ ಸಂಗತಿಯನ್ನು ಹೊರ ಬಿದ್ದಿದೆ.
ಶ್ರದ್ಧಾ ಕೊಲೆ ಪ್ರಕರಣ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ಇತ್ತ ಮಗಳನ್ನು ಕಳೆದುಕೊಂಡಿರುವ ತಂದೆಯ ನೋವು ಮುಗಿಲು ಮುಟ್ಟಿದೆ. ಇದೀಗ ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್, ತನ್ನ ಮಗಳ ಹಂತಕನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಘಟನೆಯ ಹಿಂದೆ “ಲವ್ ಜಿಹಾದ್” ಇದೆ ಎಂದು ಶಂಕಿಸಿದ್ದಾರೆ.
ಆರು ತಿಂಗಳ ಹಿಂದಿನ ಭೀಕರ ಹತ್ಯೆ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರು, 26 ವರ್ಷದ ಗೆಳತಿ ಶ್ರದ್ಧಾ ವಾಕರ್ನನ್ನು ಕೊಂದ ಆರೋಪದ ಮೇಲೆ ಆಫ್ತಾಬ್ ಅಮೀನ್ ಪೂನಾವಾಲಾನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆಫ್ತಾಬ್ ಭಯಾನಕ ಮಾಹಿತಿಯ ಬಗ್ಗೆ ಬಾಯಿಬಿಚ್ಚಿದ್ದಾನೆ. ಮೇ 18 ರ ರಾತ್ರಿ ನಡೆದ ಸಣ್ಣ ಜಗಳ ಅಮಾಯಕ ಜೀವದ ಹತ್ಯೆಗೆ ಸಾಕ್ಷಿಯಾಗಿತ್ತು. ಪ್ರಕರಣದ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.