2020ರಲ್ಲೇ ಶ್ರದ್ಧಾ ಹತ್ಯೆಗೆ ಸಂಚು: ಅಂದೇ ಅಫ್ತಾಬ್‌ನನ್ನು ಬಂಧಿಸಿದ್ದರೆ ಬದುಕುತ್ತಿತ್ತು ಜೀವ..!

ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ರೋಚಕ ಸಂಗತಿಗಳು ಹೊರ ಬರುತ್ತಿವೆ. ಇಡಿ ದೇಶವನ್ನೇ ಬೆಚ್ಚಿ ಬೀಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಶ್ರದ್ಧಾ ಸ್ನೇಹಿತರೊಬ್ಬರು ನೀಡಿರುವ ಹೇಳಿಕೆ ಭಯಾನಕವಾಗಿದೆ. ಅಲ್ಲದೆ, 2020ರಲ್ಲಿಯೇ ಅಫ್ತಾಬ್‌ ಶ್ರದ್ಧಾಳನ್ನು ಕೊಲ್ಲಲು ಮುಂದಾಗಿದ್ದ ಎಂಬ ಸಂಗತಿಯನ್ನು ಹೊರ ಬಿದ್ದಿದೆ.

Written by - Krishna N K | Last Updated : Nov 18, 2022, 05:00 PM IST
  • 2020ರಲ್ಲೇ ಶ್ರದ್ಧಾ ವಾಕರ್‌ ಹತ್ಯೆಗೆ ಸಂಚು
  • ಪೊಲೀಸರು ಅಂದೇ ಅಫ್ತಾಬ್‌ನನ್ನು ಬಂಧಿಸಿದ್ದರೆ ಬದುಕುತ್ತಿತ್ತು ಜೀವ
  • ರೋಚಕ ಮಾಹಿತಿ ಬಿಚ್ಚಿಟ್ಟ ಶ್ರದ್ಧಾ ಗೆಳೆಯ
2020ರಲ್ಲೇ ಶ್ರದ್ಧಾ ಹತ್ಯೆಗೆ ಸಂಚು: ಅಂದೇ ಅಫ್ತಾಬ್‌ನನ್ನು ಬಂಧಿಸಿದ್ದರೆ ಬದುಕುತ್ತಿತ್ತು ಜೀವ..! title=

ನವದೆಹಲಿ : ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ರೋಚಕ ಸಂಗತಿಗಳು ಹೊರ ಬರುತ್ತಿವೆ. ಇಡಿ ದೇಶವನ್ನೇ ಬೆಚ್ಚಿ ಬೀಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಶ್ರದ್ಧಾ ಸ್ನೇಹಿತರೊಬ್ಬರು ನೀಡಿರುವ ಹೇಳಿಕೆ ಭಯಾನಕವಾಗಿದೆ. ಅಲ್ಲದೆ, 2020ರಲ್ಲಿಯೇ ಅಫ್ತಾಬ್‌ ಶ್ರದ್ಧಾಳನ್ನು ಕೊಲ್ಲಲು ಮುಂದಾಗಿದ್ದ ಎಂಬ ಸಂಗತಿಯನ್ನು ಹೊರ ಬಿದ್ದಿದೆ.

ಮೃತ ಶ್ರದ್ಧಾ ಸ್ನೇಹಿತ ರಾಹುಲ್ ರೈ ಅವರು ಅಫ್ತಾಬ್ ಜೊತೆಗಿನ ಅವರ ಜೀವನ ಪರಿಸ್ಥಿತಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಇದರಿಂದ ಮೆಹ್ರೌಲಿ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪೂನಾವಾಲಾ ಡ್ರಗ್ಸ್ ಸೇವಿಸಿ ಶ್ರದ್ಧಾಳನ್ನು ಥಳಿಸಿದ್ದ ಎಂದು ಬಹಿರಂಗಪಡಿಸಿದ್ದಾರೆ. 2020ರಲ್ಲಿ ಅಫ್ತಾಬ್‌ ಆಕೆಯನ್ನು ಮನಸೋಇಚ್ಛೆ ಹೊಡೆದಿದ್ದ ಎಂಬ ಸಂಗತಿಯನ್ನು ರಾಹುಲ್‌ ಹೇಳಿದ್ದಾನೆ. 

ಇದನ್ನೂ ಓದಿ: “ಜೈಲಿನಲ್ಲಿದ್ದಾಗಿನಿಂದ ನನ್ನ ಕಣ್ಣಿನ ದೃಷ್ಟಿ ದುರ್ಬಲವಾಗಿದೆ”

ಅಲ್ಲದೆ, ಈ ಕುರಿತು ಎಫ್‌ಐಆರ್ ದಾಖಲಿಸಲು ಶ್ರದ್ಧಾಗೆ ಸಹಾಯ ಮಾಡಿದ್ದಾಗಿಯೂ ರೈ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಶ್ರದ್ಧಾಳನ್ನು ಮನೆಗೆ ಕರೆದುಕೊಂಡು ಹೋದೆ ಎಂದು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಿದ ನಂತರ, ಪೊಲೀಸ್ ಅಧಿಕಾರಿ ಅಫ್ತಾಬ್‌ನನ್ನು ಬಂಧಿಸುವಂತೆ ಸೂಚಿಸಿದರು ಆದರೆ ಅವರು ಪ್ರೀತಿಯ ವಿಚಾರದಲ್ಲಿ ಇಂತಹ ಸಂಗತಿಗಳು ನಡೆಯುತ್ತಲೆ ಇರುತ್ತವೆ ಎಂದು ಈ ಪ್ರಕರಣವನ್ನು ಕಾಮನ್‌ ಆಗಿ ತೆಗೆದುಕೊಂಡರು.

ಮರುದಿನ ಪೊಲೀಸರು ಅವಳನ್ನು ಠಾಣೆಗೆ ಕರೆಸಿದ್ದರು. ಅಲ್ಲಿ ಶ್ರದ್ದಾ ತನ್ನನ್ನು ಅಫ್ತಾಬ್‌ ಕೊಲ್ಲಲು ಪ್ರಯತ್ನಿಸಿದ್ದಾಗಿ ಮತ್ತು ಅನೇಕ ಬಾರಿ ಹೊಡೆದಿದ್ದಾಗಿ ತಿಳಿಸಿ ತನಗೆ ಜೀವ ಭಯವಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಳು. ಅಲ್ಲದೆ ಅಫ್ತಾಬ್ ತನ್ನನ್ನು ಬೀಗ ಹಾಕಿ ಮನೆಯಲ್ಲಿಯೇ ಕೂಡಿ ಹಾಕುತ್ತಿದ್ದಾನೆ. ಅನೈತಿಕ ಸಂಬಂಧ ಹೊಂದಿದ್ದಾನೆ, ಇತರ ಹುಡುಗಿಯರೊಂದಿಗೆ ಮಾತನಾಡುತ್ತಾನೆ. ಡ್ರಗ್ಸ್ ಬಳಸುತ್ತಾನೆ ಎಂದು ಆಕೆ ಉಲ್ಲೇಖಿಸಿದ್ದಳು ಎಂದು ರಾಹುಲ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News