Gowli Kannada Movie Official Trailer: ಹಳ್ಳಿ ಸೊಗಡು, ಅಪ್ಪ-ಮಗಳ ಭಾಂದವ್ಯ, ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ ಒಟ್ಟಾರೆ ಕುಟುಂಬ ಸಮೇತ ನೋಡಬಹುದಾದಂತಹ ಸಿನಿಮಾ ಎಂಬುದು ಈ ಟ್ರೈಲರ್ ನಲ್ಲೇ ಗೊತ್ತಾಗುತ್ತೆ.
ʼಗೌಳಿʼ ಸ್ಯಾಂಡಲ್ ವುಡ್‌ನಲ್ಲಿ ಕುತೂಹಲ ಮೂಡಿಸಿರುವ ಮುಂದಿನ ದಿನಗಳಲ್ಲಿ ತೆರೆಕಾಣಬೇಕಾಗಿರುವ ಸಿನಿಮಾ. ಡಿಫರೆಂಟ್ ಗೆಟಪ್ ಮೂಲಕ ಶ್ರೀ ನಗರ ಕಿಟ್ಟಿ ಹಲವು ದಿನಗಳ ನಂತರ ಬಿಗ್ ಸ್ಕ್ರೀನ್ ಮೇಲೆ ರಂಜಿಸಲು ಬರ್ತಿದ್ದಾರೆ. ರಘು ಸಿಗಂ ಬಂಡವಾಳ ಹೂಡಿರುವ ಗೌಳಿ ಸಿನಿಮಾದ ನಾಯಕನಾಗಿ ಶ್ರೀ ನಗರ ಕಿಟ್ಟಿ, ನಾಯಕಿಯಾಗಿ ಪಾವನಗೌಡ ಕಾಣಿಸಿಕೊಳ್ಳಲಿದ್ದಾರೆ. ಸೂರ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ತಾರಾ ಗಣವೇ ಇರೋದು ವಿಶೇಷ. ಕಿಟ್ಟಿ ರಗಡ್ ಲುಕ್, ಟೀಸರ್, ಹಾಡು, ಪೋಸ್ಟರ್ ಮೂಲಕ ಗೌಳಿ ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ.