ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಪ್ರಸಾದ್ ಅಬ್ಬಯ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಪ್ರಕಾಶ ಹುಬ್ಬಳ್ಳಿ ಒತ್ತಾಯಿಸಿದರು.
ರಾಜ್ಯ ಬಿಜೆಪಿ ಪಕ್ಷದ ಪರವಾಗಿ ಇತರೆ ಪಕ್ಷಗಳು ಸಾಥ್ ನೀಡಲು ಮುಂದಾಗಿವೆ. ಬಿಜೆಪಿ ಅಭಿವೃದ್ಧಿ ಕೆಲಸಗಳನ್ನ ಗುರ್ತಿಸಿರುವ ಸಲುವಾಗಿ ರಾಷ್ಟ್ರೀಯ ಲೋಕಜನಶಕ್ತಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪರ ಬೆಂಬಲಕ್ಕೆ ನಿಂತಿದೆ.
ರಾಜ್ಯ ವಿಧಾನಸಭಾ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಪರ ಪ್ರಚಾರ ನಡೆಸಲು ಬಿಜೆಪಿ ಚುನಾವಣಾ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಜೆ 4-20 ನಿಮಿಷಕ್ಕೆ ವಿಜಯಪುರದಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ಬಂದಿಳಿಯಲಿದ್ದಾರೆ. ಸಂಜೆ 4.20 ರಿಂದ ಯಾದಗಿರಿ ನಗರದ ಪದವಿ ಮಹಾವಿದ್ಯಾಲಯದಿಂದ (ಡಿಗ್ರಿ ಕಾಲೇಜಿನಿಂದ)ನಿಂದ ಸುಭಾಷ ಸರ್ಕಲ್ ಮಾರ್ಗವಾಗಿ ಶಾಸ್ತ್ರೀ ವೃತ್ತದವರೆಗೆ ಸುಮಾರು ಒಂದು ಕಿಲೋ ಮೀಟರ್ ವರೆಗೂ ನಡೆಯಲಿರುವ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾಗಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಪರ ಮತಯಾಚನೆ ಮಾಡಲಿದ್ದಾರೆ.
ಮಹದೇವಪುರ ಕ್ಷೇತ್ರದ ಟಿಕೆಟ್ ಘೋಷಣೆಯಾಗ್ತಿದ್ದಂತೆ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಜ್ಯೋತಿಪುರದ ಜ್ಯೋತಿರ್ಲಿಂಗೆಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.. ಮಹದೇವಪುರ ಕ್ಷೇತ್ರದಿಂದ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಲಿಂಬಾವಳಿಯವರಿಗೆ ಬಿಜೆಪಿ ಮಣೆ ಹಾಕಿದೆ.
2023ರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮಂಡ್ಯ ರಾಜಕಾರಣದ ಮೇಲೆ ಯುವ ಉದ್ಯಮಿಗಳ ಕಣ್ಣು. ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾದ ಇಬ್ಬರು ಉದ್ಯಮಿಗಳು. ಮಳವಳ್ಳಿ ಮತ್ತು ನಾಗಮಂಗಲ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧತೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಭ್ರಷ್ಟಾಚಾರ ಬಡಿದಾಟ ಜೋರಾಗಿಬಿಟ್ಟಿದೆ.. ಲಂಗು-ಲಗಾಮಿಲ್ಲದೇ ಪರಸ್ಪರ ವಾಗ್ದಾಳಿಗಿಳಿದಿದ್ದಾರೆ.. ಕಾಂಗ್ರೆಸ್ ಅವಧಿಯಲ್ಲಿನ ಕೇಸ್ಗಳನ್ನ ಸಿಎಂ ಹಾಗೂ ಸಚಿವರು ರೀ ಓಪನ್ ಮಾಡ್ತಿದ್ದಾರೆ. ಸಿದ್ದರಾಮಯ್ಯನವ್ರನ್ನ ಟಾರ್ಗೆಟ್ ಮಾಡಿ, ಜೈಲಿಗೆ ತಳ್ಳೋ ಲೆಕ್ಕಾಚಾರವೂ ಹಾಕಿಕೊಂಡಂತೆ ಕಾಣುತ್ತೆ..
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭ್ರಷ್ಟಾಚಾರ ವಿಚಾರದಲ್ಲಿ ಆರೋಪ- ಪ್ರತ್ಯಾರೋಪದ ಟಾಕ್ ಫೈಟ್ ಜೋರಾಗಿದೆ. ನಿಮ್ಮ ಕಾಲದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ಆಗಿದ್ದು ಎಂದು ಬಿಜೆಪಿ ಆರೋಪ ಮಾಡುತ್ತಿದ್ರೆ, ನಿಮ್ದು 40 % ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ನಿನ್ನೆ ವಿನೂತನವಾಗಿ ಪ್ರತಿಭಟನೆ ಮಾಡಿದೆ. ಬಿಜೆಪಿ-ಕಾಂಗ್ರೆಸ್ ಭ್ರಷ್ಟಾಚಾರದ ಟಾಕ್ ಫೈಟ್ ಹೇಗಿತ್ತು..? ಇಲ್ಲಿದೆ ನೋಡಿ
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ರಣಕಹಳೆ. ಇಂದಿನಿಂದ ಸಿದ್ದರಾಮಯ್ಯ, ಡಿಕೆಶಿ ಬಸ್ ಯಾತ್ರೆ. ಬೆಳಗಾವಿಯಿಂದ ಪ್ರಜಾಧ್ವನಿ ಜಂಟಿ ಯಾತ್ರೆ ಆರಂಭ. ಬಸ್ ಮೂಲಕ 10 ದಿನ, 20 ಜಿಲ್ಲೆಗಳಲ್ಲಿ ಸಂಚಾರ.
ಅಡ್ಡದಾರಿ ಮೂಲಕ ಸರ್ಕಾರ ಚುನಾವಣೆ ಎದುರಿಸೋಕೆ ಹೊರಟಿದ್ಯಾ.. ಮತದಾರ ಜಾಗೃತಿ, ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಅಕ್ರಮ ಚುನಾವಣೆಗೆ ಪ್ರಯತ್ನ ಮುಂದುವರಿಸಿದ್ಯಾ..ಈ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಮಾಡಿರುವ ಆರೋಪ ನಿಜವೇ..?
ವಿಧಾನಸಭೆ ಚುನಾವಣೆಗೆ ಇನ್ನೂ ಮೂಹೂರ್ತ ಫಿಕ್ಸ್ ಆಗಿಲ್ಲವಾದ್ರೂ ಚುನಾವಣೆಗೂ ಮುನ್ನ ರಾಜಕೀಯ ಟೆಸ್ಟ್ ಮ್ಯಾಚ್ ಭರ್ಜರಿ ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗಡಿ ಜಿಲ್ಲೆ ಬೀದರ್ನಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ 25 ಸಾವಿರಕ್ಕೂ ಅಧಿಕ ಜನರನ್ನ ಸೇರಿಸಿ ಚುನಾವಣೆ ರಣ ಕಹಳೆ ಮೋಳಗಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.. ಮೂರೂ ಪಕ್ಷಗಳು ಸಾಲು ಸಾಲು ಸಭೆಗಳು, ಪಾದಯಾತ್ರೆ, ರಥಯಾತ್ರೆಗಳನ್ನು ಹಮ್ಮಿಕೊಳ್ಳೋ ಮೂಲಕ ಅಧಿಕಾರದ ಗದ್ದುಗೆ ಏರಲು ತಂತ್ರ ಹೆಣೆದಿವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.