ನಿಗೂಢವಾಗಿ ಉಳಿದಿದ್ದ ಶ್ರದ್ಧಾ ಕಪೂರ್ ನಟನೆಯ ಸ್ತ್ರೀ ಸೀಕ್ವೆಲ್ ಟೀಸರ್ ಬಿಡುಗಡೆ

Shraddha Kapoor : ಶ್ರದ್ಧಾ ಕಪೂರ್ ನಟನೆಯ ಸ್ತ್ರೀ 2 ರ ಟೀಸರ್ ಬಿಡುಗಡೆಯಾಗಿದ್ದು,  ಸ್ತ್ರೀ ಮೊದಲನೆಯ ಭಾಗದ ಸೀಕ್ವೆಲ್ ಇದಾಗಿದೆ. 

Last Updated : Jun 25, 2024, 09:46 PM IST
  • ಖ್ಯಾತ ನಿರ್ಮಾಪಕ ದಿನೇಶ್ ವಿಷನ್ ಮಡಕ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.
  • ಮಹಿಳೆ ಎಂಬ ಶಕ್ತಿಯು ಪುರುಷರನ್ನು ಹೆಚ್ಚು ಭಯಪಡುವಂತೆ ತೋರುತ್ತದೆ
  • ಮೊದಲ ಭಾಗದಲ್ಲಿ ನಿಗೂಢವಾಗಿ ಉಳಿದಿದ್ದ ಶ್ರದ್ಧಾ ಕಪೂರ್ ಈಗ ಸೀಕ್ವೆಲ್‌ನಲ್ಲಿ ಶಕ್ತಿಯುತವಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿಗೂಢವಾಗಿ ಉಳಿದಿದ್ದ ಶ್ರದ್ಧಾ ಕಪೂರ್ ನಟನೆಯ ಸ್ತ್ರೀ ಸೀಕ್ವೆಲ್ ಟೀಸರ್ ಬಿಡುಗಡೆ title=

 ಬಹು ನಿರೀಕ್ಷಿತ ಸ್ತ್ರೀ ಚಿತ್ರದ ಸೀಕ್ವೆಲ್ ಸ್ತ್ರೀ 2 ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಇದಕ್ಕೂ ಮುಂಚೆ ಸ್ತ್ರೀ ಚಿತ್ರ 2018 ರಲ್ಲಿ ತೆರೆಕಂಡಿತ್ತು. 

ಬಾಲಿವುಡ್ ನಾಯಕಿ ಶ್ರದ್ಧಾ ಕಪೂರ್ ಮತ್ತು ರಾಜಕುಮಾರ್ ರಾವ್ ಅಭಿನಯದ ಸ್ತ್ರೀ ಚಿತ್ರ 2018 ರಲ್ಲಿ ತೆರೆಕಂಡಿದ್ದು ಗೊತ್ತೇ ಇದೆ. ಹಾರರ್ ಕಾಮಿಡಿ ಡ್ರಾಮಾ ಆಗಿ ಬಂದ ಈ ಸಿನಿಮಾ ಅಂದು ಭರ್ಜರಿ ಯಶಸ್ಸು ಕಂಡಿತ್ತು. ಬಿಡುಗಡೆಯಾದ ಮೂರು ವಾರಗಳಲ್ಲಿ ವಿಶ್ವಾದ್ಯಂತ ರೂ.100 ಕೋಟಿ ಕಲೆಕ್ಷನ್ ಮಾಡಿದೆ. ಈಗ ಆರು ವರ್ಷಗಳ ನಂತರ ಸ್ತ್ರಿ ಚಿತ್ರದ ಸೀಕ್ವೆಲ್ ಬರುತ್ತಿದೆ. ತಯಾರಕರು ಇತ್ತೀಚೆಗೆ ಸ್ತ್ರೀ 2 ರ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನು ಓದಿ : ಮಹಾರಾಷ್ಟ್ರದ ಪಾಲ್ಘರ್ ಕಡಲತೀರದಲ್ಲಿ 100 ಅಡಿ ಉದ್ದದ ಸತ್ತ ತಿಮಿಂಗಿಲ ಪತ್ತೆ

 ಮಹಿಳೆ ಎಂಬ ಶಕ್ತಿಯು ಪುರುಷರನ್ನು ಹೆಚ್ಚು ಭಯಪಡುವಂತೆ ತೋರುತ್ತದೆ. ಮೊದಲ ಭಾಗದಲ್ಲಿ ನಿಗೂಢವಾಗಿ ಉಳಿದಿದ್ದ ಶ್ರದ್ಧಾ ಕಪೂರ್ ಈಗ ಸೀಕ್ವೆಲ್‌ನಲ್ಲಿ ಶಕ್ತಿಯುತವಾಗಿ ಕಾಣಿಸಿಕೊಳ್ಳಲಿದ್ದಾರೆ.ಈ ಟೀಸರ್‌ನಲ್ಲಿ ಪಂಕಜ್ ತ್ರಿಪಾಠಿ, ಅಪರಶಕ್ತಿ ಖುರಾನಾ ಮತ್ತು ಅಭಿಷೇಕ್ ಬ್ಯಾನರ್ಜಿ ಚಂದೇರಿ ಕಾಣಿಸಿಕೊಂಡಿದ್ದಾರೆ.

ಕಾಮಿಡಿ, ಹಾರರ್ ಜೊತೆಗೆ ಹೆಣ್ಣಿನ ಕೋಪ ಎಷ್ಟು ಭಯಂಕರವಾಗಿದೆ, ಹೆಂಗಸರು ಎಷ್ಟು ಪವರ್ ಫುಲ್ ಎನ್ನುವುದನ್ನು ಸಿನಿಮಾ ತೋರಿಸಲಿದೆ. ಆದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟೀಸರ್ ನೋಡಿದರೆ ಮಿಲ್ಕಿ ಬ್ಯೂಟಿ ತಮನ್ನಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.

ಅಮರ್ ಕೌಶಿಕ್ ನಿರ್ದೇಶನಾಡಲಿ ಖ್ಯಾತ ನಿರ್ಮಾಪಕ ದಿನೇಶ್ ವಿಷನ್ ಮಡಕ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News