ಬೆಂಗಳೂರು: ಕಾಂಗ್ರಸ್ ಬಾಹ್ಯವಾಗಿ ಉಗ್ರರನ್ನು ಬೆಂಬಲಿಸಿದರೆ, ಅಂತರಿಕವಾಗಿ ಎಸ್ಡಿಪಿಐ ಜೊತೆ ಮೈತ್ರಿ ಮಾಡಿಕೊಂಡಿದ್ದು ಬಹಿರಂಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ. #CommunalCongress ಹ್ಯಾಶ್ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘2018ರ ವಿಧಾನಸಭಾ ಚುನಾವಣೆಯಲ್ಲಿ ಮಾಡಿಕೊಂಡಿದ್ದ ಒಳ ಒಪ್ಪಂದ ಇದೀಗ ಬಹಿರಂಗವಾಗಿದೆ. ಈಗ ಎದುರುಬದರು ನಿಂತಿರುವುದೂ ಅಂಥದ್ದೇ ನಾಟಕ. ಅವು ಸಮಾಜವಿರೋಧಿ ಶಕ್ತಿಗಳೇ ಆಗಿರಲಿ, ಅಧಿಕಾರಕ್ಕಾಗಿ ಯಾರೊಂದಿಗೂ ಕೈಜೋಡಿಸಲು ಕಾಂಗ್ರೆಸ್ ಹೇಸುವುದಿಲ್ಲ’ವೆಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: Chamarajanagar : ಮಾ.18ಕ್ಕೆ ಲೋಕಾರ್ಪಣೆಯಾಗಲಿದೆ 108 ಅಡಿ ಎತ್ತರದ ಮಲೆಮಹದೇಶ್ವರ ಪ್ರತಿಮೆ!
'@INCIndia ಬಾಹ್ಯವಾಗಿ ಉಗ್ರರನ್ನು ಬೆಂಬಲಿಸಿದರೆ, ಅಂತರಿಕವಾಗಿ @sdpofindia ಜತೆ ಮೈತ್ರಿ ಮಾಡಿಕೊಂಡಿದ್ದು ಬಹಿರಂಗವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮಾಡಿಕೊಂಡಿದ್ದ ಒಳ ಒಪ್ಪಂದ ಇದೀಗ ಬಹಿರಂಗವಾಗಿದೆ. ಈಗ ಎದುರುಬದರು ನಿಂತಿರುವುದೂ ಅಂಥದ್ದೇ ನಾಟಕ.#CommunalCongress
1/3— BJP Karnataka (@BJP4Karnataka) March 17, 2023
‘ಎದುರೆದುರು ಬೈದಾಡಿಕೊಂಡರೂ ಕಾಂಗ್ರೆಸ್ ಒಳಗೊಳಗೆ ಷಡ್ಯಂತ್ರ ಮಾಡಿ, ದೇಶದ ಅಡಿಪಾಯ-ಅಸ್ಮಿತೆಗಳನ್ನು ಅಲುಗಾಡಿಸುವ ಪ್ರಯತ್ನವನ್ನು ಕೇವಲ ಚುನಾವಣೆಗೋಸ್ಕರ ಮಾಡುತ್ತಿರುವುದು ಖೇದಕರ. ವಿದೇಶೀ ಕೈಗೊಂಬೆಯಾಗಿ ಭಾರತವನ್ನು ಹೊರಗಿಂದ ಹಣಿಯಲು ರಾಹುಲ್ ಗಾಂಧಿ ನಿಂತಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ಐ-ಎಸ್ಡಿಪಿಐ ಗೂಂಡಾಗಳನ್ನು ಬಿಡುಗಡೆ ಮಾಡಿ ಕರ್ನಾಟಕದಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಈಗಲೂ ಕಾಂಗ್ರೆಸ್ ಅವರೊಂದಿಗೆ ಅದೇ ಸಂಬಂಧವನ್ನು ಮುಂದುವರಿಸಿದೆ’ ಎಂದು ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಹಡಗು ಮುಳಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ವಿದೇಶೀ ಕೈಗೊಂಬೆಯಾಗಿ ಭಾರತವನ್ನು ಹೊರಗಿಂದ ಹಣಿಯಲು @RahulGandhi ನಿಂತಿದ್ದಾರೆ. @siddaramaiahನವರು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ಐ-ಎಸ್ಡಿಪಿಐ ಗೂಂಡಾಗಳನ್ನು ಬಿಡುಗಡೆ ಮಾಡಿ ಕರ್ನಾಟಕದಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಈಗಲೂ ಕಾಂಗ್ರೆಸ್ ಅವರೊಂದಿಗೆ ಅದೇ ಸಂಬಂಧವನ್ನು ಮುಂದುವರಿಸಿದೆ.#CommunalCongress
3/3— BJP Karnataka (@BJP4Karnataka) March 17, 2023
‘ಅಂದು ಟಿಪ್ಪು ಸುಲ್ತಾನ್ ಅಫ್ಘಾನಿಸ್ತಾನದ ರಾಜನಿಗೆ ಪತ್ರ ಬರೆದು ಭಾರತದ ಮೇಲೆ ಹೊರಗಿನಿಂದ ದಂಡೆತ್ತಿ ಬನ್ನಿ, ನಾನು ಒಳಗಿನಿಂದ ದಂಗೆ ಎದ್ದು ಬರುತ್ತೇನೆ ಎಂದಿದ್ದ. ಇಂದು ಅದೇ ಟಿಪ್ಪುವನ್ನು ಆರಾಧಿಸುವ ಸಿದ್ದರಾಮಯ್ಯನವರು ಕನ್ನಡಿಗರ ಅಸ್ಮಿತೆಗೆ ಕೊಳ್ಳಿ ಇಡಲು ಪಿಎಫ್ಐ-ಎಸ್ಡಿಪಿಐ ಮೊರೆ ಹೋಗಿರುವುದು ದುರಂತ!’ವೆಂದು ಬಿಜೆಪಿ ಟೀಕಿಸಿದೆ.
‘ಸೋಲುವ ಭಯದಲ್ಲಿರುವ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯನವರ ಪಲಾಯನವಾದದ ಚಾಳಿ ಅಂಟಿಕೊಂಡಿದೆ. ಸ್ವಕ್ಷೇತ್ರ ಕೊರಟಗೆರೆ ಜನತೆಗೆ ಏನೂ ಮಾಡದೆ ಕೈಗೆ ಕರಟ ಕೊಟ್ಟ ಡಾ.ಜಿ.ಪರಮೇಶ್ವರ್ ಸೋಲುವ ಮೊದಲೇ ಬೇರೆಡೆ ಪಲಾಯನ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.