ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ಡಿಯುಬಾ ಅವರು ಭಾನುವಾರ (ಜುಲೈ 18) 275 ಸದಸ್ಯರ ಸದನದಲ್ಲಿ 165 ಮತಗಳೊಂದಿಗೆ ವಿಶ್ವಾಸ ಮತವನ್ನು ಗೆದ್ದಿದ್ದಾರೆ.ಸಂಸತ್ತಿನ ವಿಶ್ವಾಸ ಮತವನ್ನು ಗೆಲ್ಲಲು ಅವರಿಗೆ ಕನಿಷ್ಠ 136 ಮತಗಳ ಅಗತ್ಯವಿತ್ತು.
ನಾಳೆಯಿಂದಲೇ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ. ನನ್ನ ಮೊದಲ ಆದ್ಯತೆ ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಅನ್ನ ಕೊಡುವ ರೈತ ಸಮುದಾಯ. ಹಾಗಾಗಿ ರಾಜ್ಯದಲ್ಲಿ ಬರಪರಿಹಾರಕ್ಕಾಗಿ ತ್ವರಿತವಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ನಾನೆಂದೂ ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕೂತವನಲ್ಲ. ಅಧಿಕಾರದ ಬಗ್ಗೆ ನನಗೆ ಯಾವುದೇ ಮೋಹವಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಜನರ ಪರವಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ ಎಂದು ಎಂದು ಸಿಎಂ ಕುಮಾರಸ್ವಾಮಿ ಅವರು ಸದನದ ಮುಂದೆ ಹೇಳಿದರು.
ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ವೇ? ನೇರವಾಗಿ ನಾವೇ ಕುದುರೆ ವ್ಯಾಪಾರ ಮಾಡಿದ್ದು ಅಂತ ಹೇಳಿ. ಯಡಿಯೂರಪ್ಪನವರೇ, ಕುದುರೆಗಳನ್ನು ಕಟ್ಕೊಂಡು ಸರ್ಕಾರ ರಚನೆ ಮಾಡಲು ಆಗಲ್ಲ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.
ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಳಿಗ್ಗೆ ಸದನಕ್ಕೆ ಆಗಮಿಸಿದ ಡಿಸಿಎಂ ಜಿ.ಪರಮೇಶ್ವರ್ ಅವರು ಬಿಜೆಪಿ ಶಾಸಕರ ಕುಶಲೋಪರಿ ವಿಚಾರಿಸಿದರು. ಸರ್ಕಾರದ ವಿರುದ್ಧ ಹೋರಾಟ ನಡೆಸಿದರೂ ಸಹ ಬೆಳಗಿನ ಉಪಹಾರವನ್ನು ವಿಪಕ್ಷ ಸದಸ್ಯರೊಂದಿಗೇ ಪರಮೇಶ್ವರ್ ಸೇವಿಸಿದರು.
ವೈಯಕ್ತಿಕ ಕೆಲಸದ ಮೇಲೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ಎದೆ ನೋವು ಕಾಣಿಸಿಕೊಂಡಿತು. ಯಾವ ಆಸ್ಪತ್ರೆಗೆ ದಾಖಲಾಗುವುದು ಎಂದು ತಿಳಿಯದೆ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ಮುಂಬೈ ಬಂದೆ ಎಂದು ಶ್ರೀಮಂತ ಪಾಟೀಲ ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ.
ಆರ್ಟಿಕಲ್ 175(2)ರ ಅಡಿಯಲ್ಲಿ ಸ್ಪೀಕರ್ ಅವರಿಗೆ ಸಂದೇಶ ರವಾನಿಸಿದ್ದೇನೆ. ಇಂದು ಸದನ ಮುಂದೂಡಲ್ಪಟ್ಟ ಕಾರಣ ಜುಲೈ 19ರಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರ ಕಳೆದ 14 ತಿಂಗಳುಗಳಿಂದ ಅಚ್ಚುಕಟ್ಟಾಗಿ ಕೆಲಸಗಳನ್ನು ನಿರ್ವಹಿಸಿದೆ. ಆದಾಗ್ಯೂ ವಿರೋಧ ಪಕ್ಷದವರು ಐಎಂಎ ಹಗರಣ, ಜಿಂದಾಲ್ ಪ್ರಕರಣಗಳ ಬಗ್ಗೆ ಶಾಸಕರು ರಾಜೀನಾಮೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ವಿಪಕ್ಷದವರು 'ಅಯೋಗ್ಯ ಸರ್ಕಾರ' ಎಂದಿದ್ದಾರೆ. ಇಲ್ಲಿ ಯಾರಿಗೆ ಮಾನ ಮರ್ಯಾದೆ ಇದೆಯೋ ತಿಳಿದಿಲ್ಲ. ನಮಗಂತೂ ಇದೆ. ಇವೆಲ್ಲದಕ್ಕೂ ನಾವು ಸ್ಪಷ್ಟನೆ ನೀಡಬೇಕಿದೆ. ಹಾಗಾಗಿ ಮೊದಲು ಚರ್ಚೆ ನಡೆಸಿ ಬಳಿಕ ವಿಶ್ವಾಸಮತಯಾಚನೆಗೆ ಹೋಗುವುದು ಸೂಕ್ತ ಎಂದು ಸಿಎಂ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.