ನವದೆಹಲಿ: ಐಫೋನ್ ಖರೀದಿಸಬೇಕು ಎನ್ನುವುದು ಪ್ರತಿಯೊಬ್ಬನ ಬಯಕೆಯಾಗಿರುತ್ತದೆ. ಆದರೆ ಐ ಫೋನ್ (iPhone) ದುಬಾರಿಯಾದ ಕಾರಣ ಎಲ್ಲರಿಗೂ ಅದರ ವೆಚ್ಚವನ್ನು ಭರಿಸುವುದು ಸಾಧ್ಯವಾಗುವುದಿಲ್ಲ. ಆದರೆ ಈ ಬಾರಿ ಐ ಫೋನ್ ಖರೀದಿಸಬೇಕೆಂಬ ಆಸೆ ಈಡೇರಬಹುದು. ಯಾಕೆಂದರೆ ಈ ವರ್ಷ apple ಅತ್ಯಂತ ಅಗ್ಗದ ಫೋನ್ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದೆ.
Apple ಕಂಪನಿಯು iPhone SE Plus ಅನ್ನು ಲಾಂಚ್ ಮಾಡುವ ಸಿದ್ದತೆ ನಡೆಸಿದೆ. ಈ ಹೊಸ ಫೋನಿನಲ್ಲಿ 6.1 ಇಂಚಿನ ಡಿಸ್ ಪ್ಲೆ ಇರಲಿದೆ. ಏಪ್ರಿಲ್ ತಿಂಗಳಲ್ಲಿ ಈ iPhone SE Plus ಲಾಂಚ್ ಆಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.
ಇದನ್ನೂ ಓದಿ : Samsung Galaxy M02 : ಸ್ಯಾಮ್ ಸಂಗ್ ತರುತ್ತಿದೆ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್..! ಅದರ ಫೀಚರ್ ಮತ್ತು ಬೆಲೆ ಎಷ್ಟಿರಬಹುದು ಗೊತ್ತಾ..?
ಇದಕ್ಕೂ ಮೊದಲು ಬಿಡುಗಡೆಯಾದ SE ಸೀರಿಸ್ ಐ ಪೋನಿನಂತೆಯೇ ಇದರಲ್ಲೂ ಹೋಮ್ ಬಟನ್ ಇರುವುದಿಲ್ಲ ಎನ್ನಲಾಗಿದೆ. ಈ ಫೋನ್ ಮೂರು ಬಣ್ಭಗಳಲ್ಲಿ ಲಭ್ಯವಿರಲಿದೆ. ಕಪ್ಪು, ಕೆಂಪು, ಮತ್ತು ಬಿಳಿ ಬಣ್ಣಗಳಲ್ಲಿ ಹೊಸ ಫೋನ್ ಸಿಗಲಿದೆ.
ಮೂಲಗಳ ಪ್ರಕಾರ, iPhone SE Plus, ಬೆಲೆ 36 ಸಾವಿರ ರೂಗಳ ಆಸುಪಾಸಿನಲ್ಲಿರಲ್ಲಿದೆ. ಈಗಿರುವ ಮಾಡೆಲ್ ಗಳಿಗೆ (Model) ಹೋಲಿಸಿದರೆ ಇದರ ಬೆಲೆ 7 ಸಾವಿರಗಳಷ್ಟು ಹೆಚ್ಚಿದೆ. ಆದರೆ ಹೊಸದಾಗಿ ಬಿಡುಗಡೆಯಾಗುವ iPhone ಮಾಡೆಲ್ ಎಂದು ನೋಡಿದರೆ ಈ ಬೆಲೆ ಕಡಿಮೆ ಎಂದೇ ಹೇಳಬಹುದು.
ಇದನ್ನೂ ಓದಿ : Permanent Ban On Chinese Apps: 59 ಚೀನಾ ಆಪ್ ಗಳ ಮೇಲೆ Modi ಸರ್ಕಾರದ ಶಾಶ್ವತ ನಿಷೇಧ!
iPhone SE Plusನಲ್ಲಿ 12 ಮೆಗಾಫಿಕ್ಸಲ್ ನ ರಿಯರ್ ಕ್ಯಾಮರಾ (Camera) ಇರಲಿದೆ ಎನ್ನಲಾಗಿದೆ. ಈ ರಿಯರ್ ಕ್ಯಾಮರಾದಲ್ಲಿ ಆಪ್ಟಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 6 ಪೋಟ್ರೇಟ್ ಲೈಟ್ ಇರುವ ಇಫೆಕ್ಟ್ ಇರಲಿದೆ. ಇದಲ್ಲದೆ ಸೆಲ್ಫಿಗಾಗಿ 7 ಮನೆಗಾಫಿಕ್ಸಲ್ ನ ಫ್ರಂಟ್ ಕ್ಯಾಮರಾ ಕೂಡಾ ಇರಲಿದೆ. ಈ ಫೋನ್ ನೀರು ಮತ್ತು ಧೂಳಿನಿಂದ ಹಾಳಾಗುವುದಿಲ್ಲ ಎಂದು ಹೇಳಲಾಗಿದೆ. Appleನ ಈ ಹೊಸ ಫೋನಿನ ಬದಿಯಲ್ಲಿ ಪವರ್ ಬಟನ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡಾ ಅಳವಡಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Android Link - https://bit.ly/3hDyh4G
Apple Link - https://apple.co/3hEw2hy