ಬೆಂಗಳೂರು : ಇನ್ನು ಮುಂದೆ ಯಾವುದೇ ನಂಬರ್ ಬಳಸದೆ, X ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಇಲ್ಲದೆ ಯೇ ವಿಡಿಯೋ ಮತ್ತು ಆಡಿಯೋ ಕರೆ ಮಾಡುವ ಸೌಲಭ್ಯವನ್ನು ಎಕ್ಸ್ ತನ್ನ ಬಳಕೆದಾರರಿಗೆ ನೀಡುತ್ತಿದೆ. ಈ ಮೊದಲು ಈ ವೈಶಿಷ್ಟ್ಯವು X ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಈಗ ಎಲ್ಲಾ ಬಳಕೆದಾರರು ಇದರ ಲಾಭವನ್ನು ಪಡೆಯಬಹುದು. ಈ ಮೂಲಕ ಮೆಟಾದ ವಾಟ್ಸಾಪ್ ಸೇರಿ ಇತರ ಕಂಪನಿಗಳಿಗೆ ಕಠಿಣ ಸ್ಪರ್ ನೀಡಲು ಎಕ್ಸ್ ಮುಂದಾಗಿದೆ.
ಎಕ್ಸ್ ತಂಡದಿಂದಲೇ ಬಹಿರಂಗಗೊಂಡ ಮಾಹಿತಿ :
ಎಕ್ಸ್ ತಂಡದ ಇಂಜಿನಿಯರ್ ಎನ್ರಿಕ್ ಬರ್ರಾಗನ್ ಈ ವಿಷಯವನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಹಿರಂಗಪಡಿಸಿದ್ದಾರೆ. 'ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಇಲ್ಲದ ಬಳಕೆದಾರರಿಗಾಗಿ ಆಡಿಯೊ ಮತ್ತು ವೀಡಿಯೊ ಕರೆಗಳ ವೈಶಿಷ್ಟ್ಯವನ್ನು ಕ್ರಮೇಣ ಪರಿಚಯಿಸುತ್ತಿದ್ದೇವೆ. ನೀವು ಕೂಡಾ ಈ ವೈಶಿಷ್ಟ್ಯವನ್ನು ಪ್ರಯತ್ನಿಸಬಹುದು. ಎಲ್ಲಾ ಕರೆಗಳನ್ನು ಅನುಮತಿಸುವ ಆಯ್ಕೆಯನ್ನು ಇಲ್ಲಿ ನೀವು ಎಂದು ಎನ್ರಿಕ್ ಬರ್ರಾಗನ್ ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Earbudsಗೆ ಹೊಸ ಸ್ವರೂಪ ನೀಡಲಿದ್ದಾರೆ Tim Cook!ಮುಂಬರುವ ದಿನಗಳಲ್ಲಿ AirPodsಗಳಲ್ಲೂ ಇರುವುದು ಕ್ಯಾಮರಾ !
ಪ್ರಸ್ತುತ ನೀವು ನಿರ್ದಿಷ್ಟ ಜನರೊಂದಿಗೆ ವಾಯ್ಸ್ ಮತ್ತು ವಿಡಿಯೋ ಕರೆಗಳಲ್ಲಿ ಮಾತನಾಡುವುದು ಸಾಧ್ಯವಾಗುತ್ತದೆ. ನೀವು ಯಾರನ್ನೂ ಫಾಲೋ ಮಾಡುತ್ತೀರಿ, ಅಥವಾ ನಿಮ್ಮ ಫೋನ್ನ ಕಾಂಟಾಕ್ಟ್ ಲಿಸ್ಟ್ ನಲ್ಲಿ ಯಾರ ನಂಬರ್ ಇದೆ ಅವರಿಗೆ ಮಾತ್ರ ನೀವು ಕರೆ ಮಾಡಬಹುದು. ಕರೆ ಮಾಡುವ ಮೊದಲು, ಆ ನಂಬರ್ ನಲ್ಲಿ ಮೆಸೇಜ್ ಮೂಲಕ ಮಾತನಾಡಿರಬೇಕು. ಆದರೆ ಇನ್ನು ಸೆಟ್ಟಿಂಗ್ಗಳಲ್ಲಿ ಇದನ್ನೂ ಬದಲಾಯಿಸಿಕೊಳ್ಳಬಹುದು. ನೀವು ಯಾರಿಂದ ಕರೆಗಳನ್ನು ಸ್ವೀಕರಿಸಲು ಬಯಸುತ್ತೀರಿ ಎನ್ನುವುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನೀವು ಫಾಲೋ ಮಾಡುವ ಅಥವಾ ಪ್ಲಾಟ್ಫಾರ್ಮ್ನಲ್ಲಿರುವ ಯಾರಿಂದ ಬೇಕಾದರೂ ಕರೆಗಳನ್ನು ಸ್ವೀಕರಿಸಬಹುದು.
ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಲಭ್ಯ :
X ಮೊದಲು ಐಫೋನ್ ಬಳಕೆದಾರರಿಗೆ ಮಾತ್ರ ಕರೆ ಮಾಡುವ ವೈಶಿಷ್ಟ್ಯವನ್ನು ಪ್ರಾರಂಭಿಸಿತ್ತು. ಅದು ಕೂಡ ಹಣ ಪಾವತಿಸುವ ಬಳಕೆದಾರರಿಗೆ ಮಾತ್ರ ಈ ವೈಶಿಷ್ಟ್ಯ ಲಭ್ಯವಿತ್ತು. ಈ ವರ್ಷದ ಆರಂಭದಲ್ಲಿ, ಕಂಪನಿಯು ಆಂಡ್ರಾಯ್ಡ್ ಬಳಕೆದಾರರಿಗೆ ಕೂಡಾ ಕರೆ ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇಲ್ಲಿ ಕೂಡಾ ಹಣ ಪಾವತಿ ಮಾಡುವವರಿಗೆ ಮಾತ್ರ ಈ ವೈಶಿಷ್ಟ್ಯ ಲಭ್ಯವಿತ್ತು. ಆದರೆ ಈಗ ಈ ವೈಶಿಷ್ಟ್ಯವನ್ನು ಎಲ್ಲಾ ಬಳಕೆದಾರರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಅಂದರೆ ನೀವು ಈ ವೈಶಿಷ್ಟ್ಯ ಬಳಸಲು ಯಾವುದೇ ರೀತಿಯಲ್ಲಿಯೂ ಹಣ ಪಾವತಿ ಮಾಡಬೇಕಾಗಿಲ್ಲ.
ಇದನ್ನೂ ಓದಿ : ಜನರಿಗೆ ಸುಸ್ಥಿರ ಸಾರ್ವಜನಿಕ ಸಾರಿಗೆ ಒದಗಿಸಲು ಮುಂದಾದ Alstom
X ನಲ್ಲಿ ಕರೆ ಮಾಡುವುದು ಹೇಗೆ?:
ಹಂತ 1: ನಿಮ್ಮ ಫೋನ್ನಲ್ಲಿ X ಅಪ್ಲಿಕೇಶನ್ ತೆರೆಯಿರಿ ಮತ್ತು ಡೈರೆಕ್ಟ್ ಮೆಸೇಜ್ (DM) ವಿಭಾಗಕ್ಕೆ ಹೋಗಿ.
ಹಂತ 2: ಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಕರೆಯನ್ನು ಪ್ರಾರಂಭಿಸಲು 'ಆಡಿಯೋ ಕರೆ' ಅಥವಾ 'ವೀಡಿಯೋ ಕರೆ' ಆಯ್ಕೆಮಾಡಿ. ಈಗ ನೀವು ಕರೆ ಮಾಡುತ್ತಿರುವ ವ್ಯಕ್ತಿ ನೀವು ಕರೆ ಮಾಡಲು ಪ್ರಯತ್ನಿಸುತ್ತಿರುವ ನೋಟಿಫಿಕೇಶನ್ ಪಡೆಯುತ್ತಾರೆ.
ಹಂತ 3: ನಿಮಗೆ ಯಾರು ಕರೆ ಮಾಡಬಹುದು ಎಂಬುದನ್ನು ಕೂಡ ನೀವು ಸೇತ್ಮಡಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ಬಲ ಮೂಲೆಯಲ್ಲಿರುವ ಸೆಟ್ಟಿಂಗ್ಗಳ ಆಯ್ಕೆಗೆ ಹೋಗಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ