20,000 ಮೌಲ್ಯದ Realme ಫೋನ್ ಕೇವಲ 999 ರೂಗಳಲ್ಲಿ ಲಭ್ಯ.!

Flipkart Realme Days:ಈ ಸೇಲ್ ನಲ್ಲಿ Realme 9 ಅನ್ನು ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹೌದು, ಸುಮಾರು 21,000 ರೂಪಾಯಿ ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಕೇವಲ 999 ರೂಪಾಯಿಗೆ ಖರೀದಿಸಬಹುದು.  

Written by - Ranjitha R K | Last Updated : Nov 21, 2022, 03:52 PM IST
  • Flipkartನಲ್ಲಿ ಪ್ರತಿದಿನ, ಒಂದಲ್ಲ ಒಂದು ಉತ್ಪನ್ನಗಳ ಮೇಲೆ ರಿಯಾಯಿತಿ
  • Realme 9 ಫೋನ್ ಮೇಲೆ ಭಾರೀ ರಿಯಾಯಿತಿ
  • ಕೇವಲ 999 ರೂಪಾಯಿಗೆ ಈ ಫೋನ್ ಖರೀದಿ ಸಾಧ್ಯ
20,000 ಮೌಲ್ಯದ Realme ಫೋನ್ ಕೇವಲ 999 ರೂಗಳಲ್ಲಿ ಲಭ್ಯ.!  title=
Flipkart Realme Days

Flipkart Realme Days : Flipkartನಲ್ಲಿ ಪ್ರತಿದಿನ, ಒಂದಲ್ಲ ಒಂದು ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಲಾಗುತ್ತದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ ಡೇಸ್ ಸೇಲ್ ನಡೆಯುತ್ತಿದೆ. ಈ ಸೇಲ್  ನವೆಂಬರ್ 24 ರವರೆಗೆ ನಡೆಯಲಿದೆ. ಈ ಮಾರಾಟದಲ್ಲಿ, Realme ಸ್ಮಾರ್ಟ್‌ಫೋನ್‌ಗಳಲ್ಲಿ ದೊಡ್ಡ ಮಟ್ಟದ ರಿಯಾಯಿತಿ ನೀಡಲಾಗುತ್ತದೆ.  ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಈ ಸೇಲ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸೇಲ್ ನಲ್ಲಿ Realme 9 ಅನ್ನು ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹೌದು, ಸುಮಾರು 21,000 ರೂಪಾಯಿ ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಕೇವಲ 999 ರೂಪಾಯಿಗೆ ಖರೀದಿಸಬಹುದು.

Flipkart Realme Days: Realme 9 ಆಫರ್‌ಗಳು ಮತ್ತು ರಿಯಾಯಿತಿಗಳು :
Flipkart Realme Daysನಲ್ಲಿ Realme 9 ಅನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.  Realme 9 ಲಾಂಚ್ ಬೆಲೆ 20,999 ರೂ ಆಗಿದೆ. ಆದರೆ ಈ ಸೇಲ್ ನಲ್ಲಿ 16,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಫೋನ್ ಮೇಲೆ 4 ಸಾವಿರ ರೂಪಾಯಿಗಳ  ರಿಯಾಯಿತಿ ನೀಡಲಾಗುತ್ತಿದೆ. ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡಾ  ಲಭ್ಯವಿದೆ.  ಇದರಿಂದಾಗಿ ಫೋನ್‌ನ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಇದನ್ನೂ ಓದಿ : ಫುಲ್ ಚಾರ್ಜ್‌ನಲ್ಲಿ 45 ದಿನಗಳವರೆಗೆ ಕಾರ್ಯನಿರ್ವಹಿಸುತ್ತಂತೆ ಈ ಜಲನಿರೋಧಕ ಸ್ಮಾರ್ಟ್‌ಫೋನ್

Flipkart Realme Days Realme 9 ಎಕ್ಸ್ಚೇಂಜ್ ಆಫರ್ : 
Realme 9 ನಲ್ಲಿ 16 ಸಾವಿರ ರೂಪಾಯಿಗಳ ವಿನಿಮಯ ಕೊಡುಗೆ ಇದೆ.  ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ  16 ಸಾವಿರ ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಆದರೆ 16,000 ರೂಗಳ ಪೂರ್ಣ ಆಫ್ ಫೋನ್ ಉತ್ತಮ ಸ್ಥಿತಿಯಲ್ಲಿದ್ದು ಮಾಡೆಲ್ ಇತ್ತೀಚಿನದ್ದಾಗಿದ್ದಾಗ ಮಾತ್ರ ಲಭ್ಯವಿರುತ್ತದೆ. ಈ ರೀತಿ ಎಲ್ಲಾ ರಿಯಾಯಿತಿ ಪಡೆಯುವುದು ಸಾಧ್ಯವಾದಾಗ ಫೋನ್ ಅನ್ನು 999 ರೂಪಾಯಿಗೆ ಖರೀದಿಸುವುದು ಸಾಧ್ಯವಾಗುತ್ತದೆ. 

Flipkart Realme Days: Realme 9 ಬ್ಯಾಂಕ್ ಆಫರ್ :
ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು  ಇಷ್ಟವಿಲ್ಲದಿದ್ದರೆ ಬ್ಯಾಂಕ್ ಆಫರ್ ಕೂಡ ಇದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಈ ಫೋನ್ ಖರೀದಿಸುವುದಾದರೆ, 850 ರೂಪಾಯಿಗಳ  ಕ್ಯಾಶ್‌ಬ್ಯಾಕ್  ಸಿಗುತ್ತದೆ. 

ಇದನ್ನೂ ಓದಿ : Best Family Car in India: 30km ಮೈಲೇಜ್ ಜೊತೆಗೆ 7 ಆಸನವುಳ್ಳ 5 ಲಕ್ಷದೊಳಗಿನ Best Family Carಗಳಿವು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News