Joker Virus : ನಿಮ್ಮ ಫೋನಿನಲ್ಲಿ ಈ 8 ಆಪ್‌ಗಳಿದ್ದರೆ ಈಗಲೇ ಡಿಲೀಟ್ ಮಾಡಿ : ಇಲ್ಲದಿದ್ದರೆ ತಪ್ಪಿದ್ದಲ್ಲ ಅಪಾಯ!

ಬೆಲ್ಜಿಯಂ ಪೊಲೀಸರು ಆಂಡ್ರಾಯ್ಡ್ ಆಪ್ ಬಳಕೆದಾರರಿಗೆ 'ಜೋಕರ್' ವೈರಸ್ ಮರಳಿ ಬಂದಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಜೋಕರ್ ವೈರಸ್ ಎಂದರೇನು ಮತ್ತು ಅದರ ಬಗ್ಗೆ ನಾವು ಏಕೆ ಜಾಗರೂಕರಾಗಿರಬೇಕು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Aug 25, 2021, 12:23 PM IST
  • ಕೊರೋನಾದಿಂದಾಗಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳ
  • ಅದರೊಂದಿಗೆ ಆನ್‌ಲೈನ್ ವಂಚನೆ ಪ್ರಕರಣಗಳ ಸಂಖ್ಯೆಯುವು ಹೆಚ್ಚುತ್ತಿವೆ
  • ಅತೀ ದೊಡ್ಡ ವೈರಸ್‌ಗಳಲ್ಲಿ ಒಂದಾದ ಜೋಕರ್ ಆಂಡ್ರಾಯ್ಡ್ ಮೊಬೈಲ್ ಗಳಿಗೆ ದಾಳಿ
Joker Virus : ನಿಮ್ಮ ಫೋನಿನಲ್ಲಿ ಈ 8 ಆಪ್‌ಗಳಿದ್ದರೆ ಈಗಲೇ ಡಿಲೀಟ್ ಮಾಡಿ : ಇಲ್ಲದಿದ್ದರೆ ತಪ್ಪಿದ್ದಲ್ಲ ಅಪಾಯ! title=

ನವದೆಹಲಿ : ಕೊರೋನಾದಿಂದಾಗಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಅದರೊಂದಿಗೆ ಆನ್‌ಲೈನ್ ವಂಚನೆ ಪ್ರಕರಣಗಳ ಸಂಖ್ಯೆಯುವು ಹೆಚ್ಚುತ್ತಿವೆ. ಹ್ಯಾಕರ್‌ಗಳು ಹೊಸ ವೈರಸ್ ಅನ್ನು ತರುವ ಮೂಲಕ ಇತರರ ಫೋನ್ ಅನ್ನು ಪ್ರವೇಶಿಸಿ ಅವರ ವಯಕ್ತಿಕ ಮಾಹಿತಿ ಕದಿಯುತ್ತಿದ್ದಾರೆ. ಇತ್ತೀಚೆಗೆ ಇಂತಹ ಹಲವು ವೈರಸ್‌ ಆಪ್‌ಗಳು ಪತ್ತೆಯಾಗಿವೆ. ಬೆಲ್ಜಿಯಂ ಪೊಲೀಸರು ಆಂಡ್ರಾಯ್ಡ್ ಆಪ್ ಬಳಕೆದಾರರಿಗೆ 'ಜೋಕರ್' ವೈರಸ್ ಮರಳಿ ಬಂದಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಜೋಕರ್ ವೈರಸ್ ಎಂದರೇನು ಮತ್ತು ಅದರ ಬಗ್ಗೆ ನಾವು ಏಕೆ ಜಾಗರೂಕರಾಗಿರಬೇಕು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಜೋಕರ್ ವೈರಸ್ ಫೋನ್ ಗೆ ಅಟ್ಯಾಕ್ ಆದ್ರೆ ಲೀಕ್ ಆಗುತ್ತೆ ನಿಮ್ಮ ವೈಯಕ್ತಿಕ ಡೇಟಾ 

ಅತೀ ದೊಡ್ಡ ವೈರಸ್‌ಗಳಲ್ಲಿ ಒಂದಾದ ಜೋಕರ್(virus Joker Virus) ಆಂಡ್ರಾಯ್ಡ್ ಮೊಬೈಲ್ ಗಳಿಗೆ ದಾಳಿ ಮಾಡುತ್ತದೆ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಲವಾರು ಆಪ್‌ಗಳಲ್ಲಿ ಅಡಗಿಸಿ ಕೊಂಡಿದೆ. ವೈರಸ್ ಬಳಕೆದಾರರ ಅನುಮತಿಯಿಲ್ಲದೆ ಪಾವತಿಸಿದ ಸೇವೆಗಳಿಗೆ ಚಂದಾದಾರರಾಗಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : YouTube ವಿಡಿಯೋ ಮೂಲಕ ನೀವು ಮಿಲಿಯನೇರ್ ಆಗಬಹುದು : ಹೇಗೆ? ಇಲ್ಲಿ ನೋಡಿ

ಬೆಲ್ಜಿಯಂ ಪೊಲೀಸರು ಈ ಹೇಳಿಕೆ ಹೀಗಿದೆ ನೋಡಿ..

"ಈ ದುರುದ್ದೇಶಪೂರಿತ ಪ್ರೋಗ್ರಾಂ ಅನ್ನು ಗೂಗಲ್ ತೆಗೆದುಹಾಕಿರುವ ಎಂಟು ಪ್ಲೇ ಸ್ಟೋರ್ ಅಪ್ಲಿಕೇಶನ್‌ಗಳಲ್ಲಿ(Google Play Store) ಪತ್ತೆ ಮಾಡಲಾಗಿದೆ" ಎಂದು ಬೆಲ್ಜಿಯಂ ಪೊಲೀಸರು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಾಸಂಗಿಕವಾಗಿ, ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ನ ಸಂಶೋಧಕರು ಈ ವರ್ಷದ ಜೂನ್‌ನಲ್ಲಿ ಪತ್ತೆಹಚ್ಚಿದ 8 ಆಪ್‌ಗಳು. ಮಾಲ್ವೇರ್ ಬಗ್ಗೆ ಮಾಹಿತಿ ಪಡೆದ ನಂತರ, ಗೂಗಲ್ ಈ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿತು.

ಮೊಬೈಲ್ ಬಳಕೆದಾರರು ಈ ಆಪ್ ಡಿಲೀಟ್ ಮಾಡಬೇಕು

ಆಂಡ್ರಾಯ್ಡ್ ಮೊಬೈಲ್(Android Mobile) ಬಳಕೆದಾರರು ಈ ಆಪ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಚೆಕ್ ಮಾಡಿ ಆದಷ್ಟು ಬೇಗ ಡಿಲೀಟ್ ಮಾಡಬೇಕು ಎಂದು ಬೆಲ್ಜಿಯಂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಆಪ್‌ಗಳನ್ನು ತಮ್ಮ ಮೊಬೈಲ್ ಗಳಲ್ಲಿ ಜೋಕರ್ ಮಾಲ್‌ವೇರ್‌ ಅಡಗಿ ಕುಳಿತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : OnePlus9ನಲ್ಲಿ ಸಿಗುತ್ತಿದೆ ಭಾರೀ Discount, 21 ಸಾವಿರ ರೂಪಾಯಿಗಳಷ್ಟು ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಸ್ಮಾರ್ಟ್ ಫೋನ್

ಜೋಕರ್ ವೈರಸ್‌ ಅಡಗಿರುವ ಆಂಡ್ರಾಯ್ಡ್ ಆಪ್‌ಗಳ ಪಟ್ಟಿ:

1. Auxiliary Message
2. Element Scanner
3. Fast Magic SMS
4. Free CamScanner
5. Go Messages
6. Super Message
7. Super SMS
8. Travel Wallpapers

ಇದನ್ನೂ ಓದಿ : Jio Recharge plan : ಇಷ್ಟು ಕಡಿಮೆ ದರದಲ್ಲಿ ಸಿಗುತ್ತಿದೆ ನಿತ್ಯ 2GB ಇಂಟರ್ನೆಟ್ , ಅನ್ ಲಿಮಿಟೆಡ್ ಕಾಲಿಂಗ್

ಆಂಡ್ರಾಯ್ಡ್ ಮೊಬೈಲ್ ಗಳನ್ನ ಟಾರ್ಗೆಟ್ ಮಾಡುವ ಅತ್ಯಂತ ನಿರಂತರ ಮಾಲ್‌ವೇರ್‌ಗಳಲ್ಲಿ ಜೋಕರ್ ಕೂಡ ಒಂದು. ಇದನ್ನು ಮೊದಲು 2017 ರಲ್ಲಿ ಪತ್ತೆ ಮಾಡಲಾಯಿತು. ಕ್ವಿಕ್ ಹೀಲ್ ನ ಸಂಶೋಧಕರ ಪ್ರಕಾರ, ಜೋಕರ್ ವೈರಸ್ ಈ ಆಪ್ ಗಳ(Apps) ಮೂಲಕ ಬಳಕೆದಾರರ ಡೇಟಾವನ್ನು ಕದಿಯುತ್ತದೆ. ಬೆಲ್ಜಿಯಂ ಪೊಲೀಸರು ಹೇಳಿರುವ ಪ್ರಕಾರ, 'ನೀವು ಈ ಆಪ್‌ಗಳನ್ನು ಹೊಂದಿದ್ದರೆ, ನೀವು ಭಾರೀ ಅಪಾಯವನ್ನು ಎದುರಿಸಬೇಕಾಗುತ್ತದೆ. ಇದರಿಂದ ನಿಮ್ಮ ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ಖಾಲಿಯಾಗಬಹುದು ಅದಕ್ಕೆ ಆದಷ್ಟು ಬೇಗ ನಿಮ್ಮ ಮೊಬೈಲ್ ನಿಂದ ಡಿಲೀಟ್ ಮಾಡಿ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News