Car AC Vent Cleaning: ಕಾರ್ ಎಸಿಯನ್ನು ದೀರ್ಘ ಸಮಯದವರೆಗೆ ಬಳಸದಿದ್ದರೆ ಅದರ ದ್ವಾರಗಳಲ್ಲಿ ಬ್ಯಾಕ್ಟೀರಿಯಾಗಳು ರೂಪುಗೊಳ್ಳುತ್ತವೆ. ಇದಲ್ಲದೆ, ಕಾರ್ ಎಸಿಯನ್ನು ನಿಯಮಿತವಾಗಿ ಬಳಸುವಾಗಲೂ ಕಾರ್ ವೆಂಟ್ ಕೊಳಕು ಮತ್ತು ಧೂಳಿನಿಂದ ಕೂಡಿರುತ್ತದೆ. ಇದು ಎಸಿಯ ಕಾರ್ಯಕ್ಷಮತೆಯನ್ನು ಕುಂದಿಸುವುದು ಮಾತ್ರವಲ್ಲದೆ, ನಿಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದನ್ನು ತಪ್ಪಿಸಲು ಕಾರ್ ಎಸಿ ವೆಂಟ್ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ತುಂಬಾ ಅವಶ್ಯಕ.
ಕಾರ್ ಸರ್ವಿಸ್ ಸೆಂಟರ್ ನಲ್ಲಿ ಫ್ಯೂಮಿಗೇಷನ್/ಧೂಮೀಕರಣ ಮೂಲಕ ಬ್ಯಾಕ್ಟೀರಿಯಾ ವಿರೋಧಿ ರಾಸಾಯನಿಕ ಅಥವಾ ಅನಿಲದ ಬಳಕೆಯಿಂದ ಕಾರ್ ಎಸಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಲಾಗುತ್ತದೆ. ಇದಕ್ಕಾಗಿ ಎಸಿ ಸರ್ವಿಸ್ ನವರು ಪೈಪ್ ಮೂಲಕ ಎಸಿ ವೆಂಟ್ ಗಳ ಒಳಗೆ ಕೆಮಿಕಲ್ ಹಾಕುತ್ತಾರೆ. ಈ ರಾಸಾಯನಿಕವು ಒಳಗೆ ಹೋಗಿ ಎಸಿ ವೆಂಟ್ಗಳನ್ನು ಸ್ವಚ್ಛಗೊಳಿಸುತ್ತದೆ. ಇದಕ್ಕೆ 500-1000 ರೂ. ವೆಚ್ಚವನ್ನು ಸಹ ಭರಿಸಬೇಕಾಗುತ್ತದೆ.
ಇದನ್ನೂ ಓದಿ- ಸ್ಮಾರ್ಟ್ಫೋನ್ ಅಪ್ಲಿಕೇಶನ್ನಂತೆ ಪಿಸಿಯಲ್ಲೂ ಸಾಂಗ್ ಡೌನ್ಲೋಡ್ ಮಾಡಬಹುದು!
ಆದಾಗ್ಯೂ, ಕಾರ್ ಎಸಿ ವೆಂಟ್ಗಳನ್ನು ಸ್ವಚ್ಛಗೊಳಿಸಲು (Car AC Vent Cleaning) ಯಾವಾಗಲೂ ನಿಮ್ಮ ಕಾರನ್ನು ವೃತ್ತಿಪರರಿಗೆ ನೀಡಬೇಕೆಂದಿಲ್ಲ ಅಥವಾ ಸರ್ವಿಸ್ ಸ್ಟೇಷನ್ ಗೆ ಕೊಂಡೊಯ್ಯುವ ಅಗತ್ಯವಿಲ್ಲ. ಈ ಕೆಲಸವನ್ನು ನೀವು ಉಚಿತವಾಗಿಯೂ ಮಾಡಬಹುದು. ಇದಕ್ಕಾಗಿ, ನಿಮ್ಮ ಕಾರ್ ಹೀಟರ್ ಪ್ರಯೋಜನಕಾರಿ ಆಗಿದೆ.
ಇದನ್ನೂ ಓದಿ- WhatsApp: ವಾಟ್ಸಾಪ್ನ ಚಾಟ್ ಪಟ್ಟಿಯಲ್ಲಿ ಶೀಘ್ರವೇ ಲಭ್ಯವಾಗಲಿದೆ ಈ ಸೌಲಭ್ಯ
ಕಾರ್ ಹೀಟರ್ ಬಳಸಿ ಕಾರ್ ಎಸಿಯಲ್ಲಿ ಅಡಕವಾಗಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಹೀಟರ್ ಅನ್ನು ಗರಿಷ್ಠ ಶಾಖಕ್ಕೆ ಹೊಂದಿಸಿ, ಬ್ಲೋವರ್ ಅನ್ನು ಗರಿಷ್ಠ ವೇಗದಲ್ಲಿ ರನ್ ಮಾಡಿ. ಈ ಸಂದರ್ಭದಲ್ಲಿ ನಿಮ್ಮ ಕಾರ್ ಓವರ್ ಹೀಟ್ ಆಗುವುದನ್ನು ತಪ್ಪಿಸಲು ಕಾರಿನ ಎಲ್ಲಾ ಕಿಟಕಿಗಳನ್ನು ತೆರೆದಿಡುವುದನ್ನು ಮರೆಯಬೇಡಿ. 15 ರಿಂದ 20 ನಿಮಿಷಗಳ ಕಾಲ ಪೂರ್ಣ ಬ್ಲೋವರ್ ವೇಗದಲ್ಲಿ ಹೀಟರ್ ಅನ್ನು ಬಿಟ್ಟಾಗ ಎಸಿ ವೆಂಟ್ಗಳಲ್ಲಿ ತಾಪಮಾನವನ್ನು ಹೆಚ್ಚಿ ಬ್ಯಾಕ್ಟೀರಿಯಾ ನಾಶವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.