ಒಂದು ಲೋಟ ಬಿಸಿ ನೀರಿನಿಂದ ಕಾರಿನ ಡೆಂಟ್ ತೆಗೆಯಬಹುದು ! ಮೆಕ್ಯಾನಿಕ್ ಕರೆಯುವ ಅಗತ್ಯವೇ ಇಲ್ಲ

Car Dent Removal Tips:ಒಂದು ಲೋಟ ನೀರಿನ ಸಹಾಯದಿಂದ ಕಾರಿನಲ್ಲಿರುವ  ಸಣ್ಣ ಡೆಂಟ್‌ಗಳನ್ನು ಸರಿಪಡಿಸುವ ವಿಧಾನ ಇಲ್ಲಿದೆ. 

Written by - Ranjitha R K | Last Updated : Jul 18, 2024, 11:49 AM IST
  • ಕಾರಿನ ಮೇಲೆ ಡೆಂಟ್ ಕಂಡರೆ ಯಾರಿಗೂ ಇಷ್ಟವಾಗುವುದಿಲ್ಲ.
  • ಕಾರಿನ ಮಾಲೀಕರು ತಮ್ಮ ಕಾರನ್ನು ಮನೆ ಸದಸ್ಯರಂತೆ ಪ್ರೀತಿಸುತ್ತಾರೆ.
  • ಅದರ ಮೇಲೆ ಒಂದು ಸಣ್ಣ ಗೆರೆಯನ್ನು ಕೂಡಾ ಸಹಿಸುವುದಿಲ್ಲ.
ಒಂದು ಲೋಟ ಬಿಸಿ ನೀರಿನಿಂದ ಕಾರಿನ ಡೆಂಟ್ ತೆಗೆಯಬಹುದು ! ಮೆಕ್ಯಾನಿಕ್ ಕರೆಯುವ ಅಗತ್ಯವೇ ಇಲ್ಲ title=

Car Dent Removal Tips : ಕಾರಿನ ಮೇಲೆ ಡೆಂಟ್ ಕಂಡರೆ ಯಾರಿಗೂ ಇಷ್ಟವಾಗುವುದಿಲ್ಲ.ಕಾರಿನ ಮಾಲೀಕರು ತಮ್ಮ ಕಾರನ್ನು ಮನೆ ಸದಸ್ಯರಂತೆ ಪ್ರೀತಿಸುತ್ತಾರೆ. ಅದರ ಮೇಲೆ ಒಂದು ಸಣ್ಣ ಗೆರೆಯನ್ನು ಕೂಡಾ ಸಹಿಸುವುದಿಲ್ಲ.ಕೆಲವೊಮ್ಮೆ ಎಷ್ಟೇ ಎಚ್ಚರಿಕೆ ವಹಿಸಿದರೂ ಕಾರಿನ ಬಾಡಿಯಲ್ಲಿ ಡೆಂಟ್ ಕಾಣಿಸಿಕೊಳ್ಳುತ್ತದೆ. ಹಾಗಂತೆ ಡೆಂಟ್ ತೆಗೆಸಲು ಮೆಕ್ಯಾನಿಕ್ ಬಾಲಿ ಹೋದರೆ 500ರಿಂದ 2000 ರೂ.ವರೆಗೆ ಖರ್ಚಾಗುವುದು ಗ್ಯಾರಂಟಿ. ಆದರೆ ಒಂದು ಲೋಟ ನೀರಿನ ಸಹಾಯದಿಂದ ಕಾರಿನಲ್ಲಿರುವ  ಸಣ್ಣ ಡೆಂಟ್‌ಗಳನ್ನು ಸರಿಪಡಿಸುವ ವಿಧಾನ ಇಲ್ಲಿದೆ. 

ಕಾರ್ ಡೆಂಟ್ ತೆಗೆಯುವುದು ಹೇಗೆ ? :  
ಈ ವಿಧಾನವು ಸಣ್ಣ ಮತ್ತು ಸೌಮ್ಯವಾದ ಡೆಂಟ್ ಗಳ ಮೇಲೆ  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 

ಡೆಂಟ್ ತೆಗೆಯಲು ಬೇಕಾಗಿರುವ ವಸ್ತುಗಳು :
ಒಂದು ಲೋಟ ಬಿಸಿ ನೀರು
ಒಂದು ಟವೆಲ್
ಸಕ್ಷನ್ ಕಪ್ 

ಇದನ್ನೂ ಓದಿ : Ratan Tata ಕಂಪನಿಯಲ್ಲಿ30 ಸಾವಿರ ಹುದ್ದೆಗಳು ಖಾಲಿ ! ನಿರುದ್ಯೋಗಿಗಳಿಗೆ ಇಲ್ಲಿದೆ ಅವಕಾಶ

ಸುರಕ್ಷತಾ ಮುನ್ನೆಚ್ಚರಿಕೆಗಳು: ಕಾರನ್ನು ಯಾವಾಗಲೂ ತಂಪಾಗಿರುವ ಸ್ಥಳದಲ್ಲಿಯೀ ಇರಿಸಿ. ಸೂರ್ಯನ ನೇರ ಬೆಳಕಿನಲ್ಲಿ ಕಾರು ನಿಲುಗಡೆ ಮಾಡದಂತೆ ನೋಡಿಕೊಳ್ಳಿ. ಹ್ಯಾಂಡ್ ಗ್ಲೌಸ್ ಧರಿಸಿ ಮತ್ತು ಬಣ್ಣಕ್ಕೆ ಹಾನಿಯಾಗದಂತೆ ಸುತ್ತಮುತ್ತಲಿನ ಪ್ರದೇಶವನ್ನು ಟವೆಲ್ ನಿಂದ ಮುಚ್ಚಿ.

೧. ಪಾತ್ರೆ ಅಥವಾ ಕೆಟಲ್‌ನಲ್ಲಿ ನೀರನ್ನು ಕುದಿಸಿ.
೨. ನಿಧಾನವಾಗಿ ಬಿಸಿ ನೀರನ್ನು ಡೆಂಟ್ ಮೇಲೆ ಸುರಿಯಿರಿ.ಸುಮಾರು 30 ಸೆಕೆಂಡುಗಳ ಕಾಲ ನೀರು ಡೆಂಟ್ ಮೇಲಿರುವಂತೆ ನೋಡಿಕೊಳ್ಳಿ. 
೩.ಸಕ್ಷನ್ ಕಪ್ ಅನ್ನು ಡೆಂಟ್‌ನ ಮಧ್ಯಭಾಗದಲ್ಲಿ ಇರಿಸಿ ಮತ್ತು ನಿಧಾನವಾಗಿ ಎಳೆಯಿರಿ.
೪. ಈಗ ತಣ್ಣನೆಯ ನೀರನ್ನು ಡೆಂಟ್ ಮೇಲೆ ಸುರಿಯಿರಿ.ಇದು ಲೋಹದ ಸಂಕೋಚನವನ್ನು ಉಂಟುಮಾಡುತ್ತದೆ. ಈ ಕಾರಣದಿಂದ ಡೆಂಟ್ ಹೊರಬರಬಹುದು.
೫. ಸರಿ ಹೋಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಇಲ್ಲ ಎಂದಾದರೆ ಈ ಕ್ರಮವನ್ನು ಮತ್ತೊಮ್ಮೆ ಪುನರಾವರ್ತಿಸಬಹುದು.

ಇದನ್ನೂ ಓದಿ : ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು ಇವು ! ಒಮ್ಮೆ ಟ್ಯಾಂಕ್ ತುಂಬಿಸಿದರೆ ತಿಂಗಳು ಪೂರ್ತಿ ಓಡಾಡಬಹುದು !

ಆದರೆ ನೆನಪಿರಲಿ ಈ ಕ್ರಮವನ್ನು ಒಂದೇ ಡೆಂಟ್ ಮೇಲೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಮಾಡಬಹುದು. ಪದೇ ಪದೇ ಮಾಡಿದರೆ ಬಣ್ಣಕ್ಕೆ ಹಾನಿಯಾಗಬಹುದು.  ಗಮನಿಸಿ:
ಡೆಂಟ್ ತೆಗೆಯುವಾಗ್ ತುಂಬಾ ಬಿಸಿ ನೀರು ಬಳಕೆ ಬೇಡ. ಅತಿಯಾದ ಬಲ ಪ್ರಯೋಗ ಕೂಡಾ ಮಾಡಬೇಡಿ.ಪ್ಲಾಸ್ಟಿಕ್ ಬಂಪರ್‌ಗಳಲ್ಲಿ ಈ ವಿಧಾನವು ಕಾರ್ಯನಿರ್ವಹಿಸುವುದಿಲ್ಲ. ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು, ಡೆಂಟ್ ಅನ್ನು ಸಂಪೂರ್ಣವಾಗಿ ಸರಿಪಡಿಸದೆಯೂ ಇರಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News