Catastrophe Predection By UN Climate Chief: ಕೇವಲ ಎರಡು ವರ್ಷಗಳು... ಹೌದು, ಇದು ವಿಶ್ವವನ್ನು ಉಳಿಸಲು ನಮ್ಮ ಬಳಿ ಉಳಿದಿರುವ ಸಮಯಾವಕಾಶ. ಇಲ್ಲದಿದ್ದರೆ, ಹವಾಮಾನ ವೈಪರೀತ್ಯದಿಂದ ವಿನಾಶ ಖಚಿತ! ವಿಶ್ವಸಂಸ್ಥೆಯ ಹವಾಮಾನ ಮುಖ್ಯಸ್ಥ ಸೈಮನ್ ಸ್ಟಿಲ್ ಈ ಎಚ್ಚರಿಕೆಯನ್ನು ನೀಡಿದ್ದಾರೆ. 'ಜಗತ್ತನ್ನು ಉಳಿಸಲು ಎರಡು ವರ್ಷಗಳು' ಎಂಬ ವಿಷಯದ ಕುರಿತು ಮಾತನಾಡಿರುವ ಅವರು. ಜಗತ್ತು ನಿರಂತರವಾಗಿ ಬಿಸಿಯಾಗುತ್ತಿದೆ. ಗರಿಷ್ಠ ತಾಪಮಾನ ದಾಖಲಾಗಿರುವ ಮಾರ್ಚ್ ತಿಂಗಳು ಸತತ ಹತ್ತನೇ ತಿಂಗಳಾಗಿದೆ. ಯುರೋಪಿಯನ್ ಯೂನಿಯನ್‌ನ ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವೆಯು ಮಂಗಳವಾರ ಆಘಾತಕಾರಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ 12 ತಿಂಗಳುಗಳಲ್ಲಿ (ಏಪ್ರಿಲ್ 2023 - ಮಾರ್ಚ್ 2024) ಜಾಗತಿಕ ಸರಾಸರಿ ತಾಪಮಾನವು 1991-2020 ರ ಸರಾಸರಿಗಿಂತ 0.70 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುಎನ್ ಹವಾಮಾನ ತಜ್ಞರ ಈ ಎಚ್ಚರಿಕೆ ತುಂಬಾ ಗಂಭೀರವಾಗಿದೆ. ಇನ್ನೂ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಹವಾಮಾನ ಸಂಬಂಧಿತ ಯೋಜನೆಗಳನ್ನು ಬಲಪಡಿಸಲು ಎಲ್ಲಾ ದೇಶಗಳಿಗೆ ಮನವಿ ಮಾಡಿದೆ. ಸದ್ಯದ ಪರಿಸ್ಥಿತಿ ಮುಂದುವರಿದರೆ 2030ರ ವೇಳೆಗೆ ಹೊರಸೂಸುವಿಕೆ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಹವಾಮಾನ ಬದಲಾವಣೆಯ ಕುರಿತಾದ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್‌ನ ಎಚ್ಚರಿಕೆಯನ್ನು ಕೂಡ ಇಲ್ಲಿ ಉಲ್ಲೇಖಿಸಲಾಗಿದೆ. ಇದರ ಪ್ರಕಾರ, ಗ್ಲೋಬಲ್ ಗ್ರೀನ್ ಹೌಸ್ ಗ್ಯಾಸ್ ಎಮಿಷನ್ 2025 ರ ಮೊದಲು ಗರಿಷ್ಠ ಮಟ್ಟವನ್ನು ತಲುಪಬೇಕು ಮತ್ತು ಇದು 2030 ರ ವೇಳೆಗೆ 43% ರಷ್ಟು ಕಡಿಮೆಯಾಗಬೇಕು, ಇಲ್ಲದಿದ್ದರೆ 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಅದು ದಾಟಲಿದೆ.
ಈ ಎಚ್ಚರಿಕೆಯ ಹಿಂದಿನ ಕಾರಣ ಏನು?
ಪ್ಯಾರಿಸ್ ಒಪ್ಪಂದದ ಪ್ರಕಾರ, ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕಲು ಜಗತ್ತು ನಿರ್ಧರಿಸಿತ್ತು. 2030ರ ವೇಳೆಗೆ ಗ್ರೀನ್ ಹೌಸ್ ಗ್ಯಾಸ್ ನಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ನಿರ್ಧರಿಸಲಾಯಿತು. 2017 ರಲ್ಲಿ, ಕೈಗಾರಿಕಾ ಯುಗ ಪ್ರಾರಂಭವಾಗುವ ಮೊದಲು ನಾವು ವಿಶ್ವದ ತಾಪಮಾನಕ್ಕಿಂತ 1 ಡಿಗ್ರಿಯನ್ನು ತಲುಪಿದ್ದೇವೆ. ಯಾವುದೇ ಪರಿಸ್ಥಿತಿಯಲ್ಲಿ, ಈ ಸರಾಸರಿ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇಡೀ ಜಗತ್ತೇ ಸರ್ವನಾಶವಾಗಲಿದೆ ಎಂದು ಸೈಮನ್ ಸ್ಟೀಲ್ ಎಚ್ಚರಿಕೆ ನೀಡಿದ್ದಾರೆ
ಜಾಗತಿಕ ಸರಾಸರಿ ತಾಪಮಾನವು 1.5 ° C ರಷ್ಟು ಹೆಚ್ಚಾದರೆ, ತೀವ್ರ ಹವಾಮಾನ ವೈಪರೀತ್ಯ ಘಟನೆಗಳು ನಡೆಯಲಿವೆ. ಜಗತ್ತು ಹಿಂದೆಂದಿಗೂ ಅನುಭವಿಸದಂತಹ ಅಪಾಯಕಾರಿ ಉಷ್ಣದ ಅಲೆ ಎದುರಿಸಲಿದೆ. ಕರಾವಳಿಯುದ್ದಕ್ಕೂ ಇರುವ ನಗರಗಳು ಮುಳುಗುವ ಅಪಾಯದಲ್ಲಿವೆ. ಅನೇಕ ಪ್ರದೇಶಗಳಲ್ಲಿ ತೀವ್ರ ಶಾಖ ಮತ್ತು ಬರದ ಪರಿಸ್ಥಿತಿ ಎದುರಾಗಲಿದೆ. ಇಂತಹ ಆತಂಕಕಾರಿ ಸನ್ನಿವೇಶವಿದ್ದರೂ ಜಗತ್ತು ಇನ್ನೂ ಎಚ್ಚೆತ್ತುಕೊಂಡಿಲ್ಲ.
'ಅಭಿವೃದ್ಧಿ ಹೊಂದಿದ ದೇಶಗಳು ದುರ್ಬಲದೇಶಗಳಿಗೆ ಸಹಾಯ ಮಾಡಬೇಕು'
ಈ ಕುರಿತು ಲಂಡನ್‌ನಲ್ಲಿ ಮಾತನಾಡಿದ ಸ್ಟಿಲ್, ಪ್ರಸ್ತುತ ಜಾಗತಿಕ ಹೊರಸೂಸುವಿಕೆಯಲ್ಲಿ G20 ದೇಶಗಳ ಭಾಗವಹಿಸುವಿಕೆ ಶೇ.80 ರ ಸಮೀಪದಲ್ಲಿವೆ. ನವೆಂಬರ್‌ನಲ್ಲಿ ಬಾಕುದಲ್ಲಿ ನಡೆಯಲಿರುವ ಯುಎನ್ ಹವಾಮಾನ ಸಮ್ಮೇಳನದಲ್ಲಿ (ಸಿಒಪಿ 29) ಹೊಸ ಹಣಕಾಸು ಒಪ್ಪಂದವನ್ನು ಪ್ರಸ್ತುತಪಡಿಸಬೇಕು ಎಂದು ಅವರು ಹೇಳಿದ್ದಾರೆ. ಇದರಿಂದ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಹವಾಮಾನ ಯೋಜನೆಗಳನ್ನು ಬಲಪಡಿಸಲು ಸಹಾಯ ಮಾಡಬಹುದು. ಇನ್ನೂ ಹೊಸ ರೀತಿಯ ಒಪ್ಪಂದ ಮಾಡಿಕೊಳ್ಳಲು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಕೋರಲಾಗಿದೆ. ಈ ಒಪ್ಪಂದವು ಹಣಕಾಸಿನ ಹೊಸ ಮೂಲಗಳಿಂದ ಅಭಿವೃದ್ಧಿ ಬ್ಯಾಂಕ್‌ಗಳಲ್ಲಿನ ಸುಧಾರಣೆಗಳು ಮತ್ತು ಹೆಚ್ಚು ಅಪಾಯದಲ್ಲಿರುವ ದೇಶಗಳಿಗೆ ಸಾಲ ಪರಿಹಾರದವರೆಗೆ ಅಂಶಗಳನ್ನು ಒಳಗೊಂಡಿರಬೇಕು ಎಂದು ಅವರು ಹೇಳಿದ್ದಾರೆ.
COP29 ಭಾರತದಂತಹ ದೇಶಗಳಿಗೆ ಬಹಳ ಮುಖ್ಯವೆಂದು ಸಾಬೀತಾಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳಿಂದ ತಕ್ಷಣದ ಹವಾಮಾನ ಹಣಕಾಸುಗಾಗಿ ಬೇಡಿಕೆಯಿರುವ ದೇಶಗಳಲ್ಲಿ ಭಾರತವೂ ಶಾಮಿಲಾಗಿದೆ. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಪ್ರಕಾರ, 2030 ರ ವೇಳೆಗೆ ಹಲವಾರು ಟ್ರಿಲಿಯನ್ ಡಾಲರ್‌ಗಳು ಇದಕ್ಕಾಗಿ ಬೇಕಾಗಲಿವೆ.
ಇದನ್ನೂ ಓದಿ-Jio Service Down: ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಜೀಯೋ ಸೇವೆ, ಆಕ್ರೋಶ ಹೊರಹಾಕಿದ ಬಳಕೆದಾರರು!
G7 ಮತ್ತು G20 ದೇಶಗಳಿಗೆ ವಿಶೇಷ ಮನವಿ
ವಿಶ್ವಸಂಸ್ಥೆಯ ಹವಾಮಾನ ತಜ್ಞರು ಜಿ7 ಮತ್ತು ಜಿ20 ರಾಷ್ಟ್ರಗಳು ಹೆಚ್ಚಿನ ಪ್ರಯತ್ನಗಳನ್ನು ಕೈಗೊಳ್ಳಬೇಕು. ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಸಪ್ಲೈ ಚೈನ್ ಕುಸಿಯಲಿದೆ ಮತ್ತು ಹಣದುಬ್ಬರ 'ನಾಟಕೀಯವಾಗಿ' ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ವಿಶ್ವದೆಲ್ಲೆಡೆ ನಡೆಯುತ್ತಿರುವ ಚುನಾವಣಾ ಋತುವಿನ ಲಾಭವನ್ನು ಪಡೆದುಕೊಳ್ಳಲು ಸ್ಟೀಲ್ ಯತ್ನಿಸಿದ್ದಾರೆ.
ಇದನ್ನೂ ಓದಿ-WhatsApp Alert: ಈ 4 ಸಂದೇಶಗಳ ಮೇಲೆ ಮರೆತೂ ಕ್ಲಿಕ್ಕಿಸಬೇಡಿ, ಭಾರಿ ಪಶ್ಚಾತಾಪ ಪಡಬೇಕಾದೀತು!
ಅಮೆರಿಕ, ಭಾರತ ಸೇರಿದಂತೆ ವಿಶ್ವದ 64 ದೇಶಗಳಲ್ಲಿ ಈ ವರ್ಷ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಇನ್ನಾದರೂ ಮತದಾರರು ಹವಾಮಾನ ಬದಲಾವಣೆ ಕುರಿತು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದಾರೆ. 'ಸರ್ಕಾರಗಳ ಅಜೆಂಡಾದಲ್ಲಿ ಕ್ಲೈಮೇಟ್ ತರಲು ಇರುವ ಏಕೈಕ ಮಾರ್ಗ ಎಂದರೆ ಹೆಚ್ಚು ಹೆಚ್ಚು ಜನರು ಧ್ವನಿ ಎತ್ತಬೇಕು' ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ