Jio Service Down: ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಜೀಯೋ ಸೇವೆ, ಆಕ್ರೋಶ ಹೊರಹಾಕಿದ ಬಳಕೆದಾರರು!

Jio Service Down: ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆ ಬಳಕೆದಾರರಿಗೆ ಇಂದು ಇದ್ದಕ್ಕಿದ್ದಂತೆ ಅಡೆತಡೆ ಎದುರಾಗಿದೆ. ದೇಶದ ಅನೇಕ ಭಾಗಗಳಲ್ಲಿ ಬಳಕೆದಾರರಿಗೆ ಮೊಬೈಲ್ ಇಂಟರ್ನೆಟ್ ಮತ್ತು ಜಿಯೋ ಫೈಬರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕಾರಣದಿಂದ ಜಿಯೋ ಸಿಮ್ ನಿಂದ ಕರೆಗಳು ಕೂಡ ನಿಂತುಹೋಗಿದ್ದವು ಎನ್ನಲಾಗುತ್ತಿದೆ  

Written by - Nitin Tabib | Last Updated : Apr 11, 2024, 05:49 PM IST
  • ಜಿಯೋ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
  • ಡೌನ್ ಡಿಟೇಕ್ಟರ್ ಕೂಡ, ಸಮಸ್ಯೆಯ ಗ್ರಾಫ್ ಇನ್ನೂ ರೆಡ್ ಮಾರ್ಕ್ ನಲ್ಲಿದೆ ಎಂದು ಹೇಳಿದೆ,
  • ಅಂದರೆ ಬಳಕೆದಾರರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರ್ಥ.
Jio Service Down: ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಜೀಯೋ ಸೇವೆ, ಆಕ್ರೋಶ ಹೊರಹಾಕಿದ ಬಳಕೆದಾರರು! title=

Jio Internet And Jio Fiber Service Down: ಭಾರತದ ಮುಂಚೂಣಿಯ ಟೆಲಿಕಾಂ ಕಂಪನಿಗಳಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಕೂಡ ಒಂದು. ದೇಶಾದ್ಯಂತ ಕೋಟ್ಯಾಂತರ ಬಳಕೆದಾರರು ಇದರ ಸೇವೆಯನ್ನು ಬಳಸುತ್ತಾರೆ. ಆದರೆ, ಜಿಯೋ ಸೇವೆ ಬಳಕೆದಾರರಿಗೆ ಇಂದು ಇದ್ದಕ್ಕಿದ್ದಂತೆ ಅಡೆತಡೆ ಎದುರಾಗಿದೆ. ದೇಶದ ಅನೇಕ ಭಾಗಗಳಲ್ಲಿ ಬಳಕೆದಾರರಿಗೆ ಮೊಬೈಲ್ ಇಂಟರ್ನೆಟ್ ಮತ್ತು ಜಿಯೋ ಫೈಬರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕಾರಣದಿಂದ ಜಿಯೋ ಸಿಮ್ ನಿಂದ ಕರೆಗಳು ಕೂಡ ನಿಂತುಹೋಗಿದ್ದವು ಎನ್ನಲಾಗುತ್ತಿದೆ. 

ಎಷ್ಟು ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ?
Downdetector ಹೆಸರಿನ ಒಂದು ವೆಬ್ಸೈಟ್ ರಿಯಲ್ ಟೈಮ್ ನಲ್ಲಿ ಇಂಟರ್ನೆಟ್ ಸೇವೆಯಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ವೆಬ್‌ಸೈಟ್ ಪ್ರಕಾರ, ಮಧ್ಯಾಹ್ನ 1:30 ರವರೆಗೆ, 700 ಕ್ಕೂ ಹೆಚ್ಚು ಜನರು ಜಿಯೋದ ಇಂಟರ್ನೆಟ್ ಸೇವೆಯಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಇವುಗಳಲ್ಲಿ, 51% ಜಿಯೋಫೈಬರ್‌ಗೆ ಸಂಬಂಧಿಸಿದರೆ, 42% ಮೊಬೈಲ್ ಇಂಟರ್ನೆಟ್‌ಗೆ ಮತ್ತು 7% ಕರೆಗಳಿಗೆ ಸಂಬಂಧಿಸಿವೆ. 

ಇದನ್ನೂ ಓದಿ-IPL 2024: ಮುಂಬೈ ತಂಡದಲ್ಲಿ ಎಲ್ಲವೂ ಸರಿ ಇಲ್ಲ, RCB ವಿರುದ್ಧದ ಪಂದ್ಯಕ್ಕೂ ಮುನ್ನ ವೈರಲ್ ಆಗುತ್ತಿದೆ ಈ ವಿಡಿಯೋ!

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡ ಜನರು
ಕೆಲ ಬಳಕೆದಾರರಿಗೆ ಮೊಬೈಲ್ ಗೇಮ್ ಆಡುವಾಗ ಸಮಸ್ಯೆಗಳನ್ನು ಎದುರಿಸಿದ್ದಾರೆ. BGMI ಮತ್ತು Free Fire MAX ನಂತಹ ಆಟಗಳನ್ನು ಆಡುವಲ್ಲಿ ಜನರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಅಷ್ಟೇ ಅಲ್ಲ ಕೆಲ ಬಳಕೆದಾರರಿಗೆ ಗಂಟೆಗಟ್ಟಲೆ ಇಂಟರ್ನೆಟ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಜಿಯೋ ಬಳಕೆದಾರರು ಈ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. 

ಇದನ್ನೂ ಓದಿ-IPL 2024: ಇತಿಹಾಸ ಬರೆದ Rashid Khan, ಏಕಕಾಲಕ್ಕೆ 5 ದಿಗ್ಗಜರ ದಾಖಲೆ ಪುಡಿ ಪುಡಿ...!

ಆಪ್ ನಲ್ಲೂ ಕಾಣಿಸಿಕೊಂಡ ಸಮಸ್ಯೆಗಳು
ಆದರೆ ಈ ಬಗ್ಗೆ ಜಿಯೋ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಡೌನ್ ಡಿಟೇಕ್ಟರ್ ಕೂಡ, ಸಮಸ್ಯೆಯ ಗ್ರಾಫ್ ಇನ್ನೂ ರೆಡ್ ಮಾರ್ಕ್ ನಲ್ಲಿದೆ ಎಂದು ಹೇಳಿದೆ, ಅಂದರೆ ಬಳಕೆದಾರರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರ್ಥ. ಮತ್ತೊಂದೆಡೆ, ಟೆಲಿಗ್ರಾಮ್, ಸ್ವಿಗ್ಗಿ ಸೇರಿದಂತೆ ಇತರ ಕೆಲವು ಅಪ್ಲಿಕೇಶನ್‌ಗಳು ಡೌನ್‌ಟೆಕ್ಟರ್‌ನಲ್ಲಿ ರೆಡ್ ಮಾರ್ಕ್ ನಲ್ಲಿ ಕಂಡುಬಂದಿವೆ, ಅಂದರೆ ಅವುಗಳು ಸಹ ಸಮಸ್ಯೆಗಳನ್ನು ಎದುರಿಸುತ್ತಿವೆ. ನಿಮ್ಮ ಜಿಯೋ ಇಂಟರ್ನೆಟ್ ಕಾರ್ಯನಿರ್ವಹಿಸದಿದ್ದರೆ ನಿಮ್ಮ ಫೋನ್ ಅನ್ನು ರೇಸ್ಟಾರ್ಟ್ ಮಾಡಿ ನೀವು ಯತ್ನಿಸಬಹುದು. ಆದಾಗ್ಯೂ ಕೂಡ ನಿಮಗೆ ಸಮಸ್ಯೆ ಕಂಡುಬಂದರೆ, ನೀವು ಜಿಯೋ ಕಷ್ಟಮರ್ ಕೇರ್ ಅನ್ನು ಸಂಪರ್ಕಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News