ಚಾಟ್ ಜಿಪಿಟಿ : ಶಾಲಾ ಶಿಕ್ಷಣಕ್ಕೆ ವರವೇ..? ಶಾಪವೇ? 

ಮಾನವನ ಮೆದುಳು ಎಲ್ಲ ಜೀವಿಗಳಿಗಿಂತ ಅತ್ಯಂತ ಹೆಚ್ಚು ವಿಕಸನಗೊಂಡಿದೆ ಎಂದು ಪರಿಗಣಿಸಲಾಗಿದ್ದು, ಇಷ್ಟು ವರ್ಷಗಳಲ್ಲಿ ಅದು ನಿಸ್ಸಂದೇಹವಾಗಿ ಸಾಬೀತಾಗಿದೆ ಕೂಡ. ಲಕ್ಷಾಂತರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಮಾನವನ ಬದುಕು ಪ್ರಾರಂಭವಾಗಿದ್ದು, ವಿಕಸನ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಈ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ವಿನೂತನ ಅನ್ವೇಷಣೆಯಾಗಿದೆ. ಅದು ಮಾನವ ನಾಗರಿಕತೆಯನ್ನು ವೈಭವ ಮತ್ತು ಸಮೃದ್ಧಿಯ ಉತ್ತುಂಗಕ್ಕೆ ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ. 

Written by - Zee Kannada News Desk | Edited by - Krishna N K | Last Updated : Mar 16, 2023, 04:08 PM IST
  • ಚಾಟ್ ಜಿಪಿಟಿ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.
  • ಕೃತಕ ಬುದ್ಧಿಮತ್ತೆ (ಎಐ)ಯು ರಚಿಸಿದ ಒಂದು ಅತ್ಯಂತ ಶಕ್ತಿಶಾಲಿ.
  • ಶಾಲಾ ಶಿಕ್ಷಣಕ್ಕೆ ಚಾಟ್ ಜಿಪಿಟಿ ವರ ಮತ್ತು ಶಾಪ ಎರಡನ್ನೂ ಒಳಗೊಂಡಿದೆ.
ಚಾಟ್ ಜಿಪಿಟಿ : ಶಾಲಾ ಶಿಕ್ಷಣಕ್ಕೆ ವರವೇ..? ಶಾಪವೇ?  title=

Chat GPT : ಮಾನವನ ಮೆದುಳು ಎಲ್ಲ ಜೀವಿಗಳಿಗಿಂತ ಅತ್ಯಂತ ಹೆಚ್ಚು ವಿಕಸನಗೊಂಡಿದೆ ಎಂದು ಪರಿಗಣಿಸಲಾಗಿದ್ದು, ಇಷ್ಟು ವರ್ಷಗಳಲ್ಲಿ ಅದು ನಿಸ್ಸಂದೇಹವಾಗಿ ಸಾಬೀತಾಗಿದೆ ಕೂಡ. ಲಕ್ಷಾಂತರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಮಾನವನ ಬದುಕು ಪ್ರಾರಂಭವಾಗಿದ್ದು, ವಿಕಸನ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಈ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ವಿನೂತನ ಅನ್ವೇಷಣೆಯಾಗಿದೆ. ಅದು ಮಾನವ ನಾಗರಿಕತೆಯನ್ನು ವೈಭವ ಮತ್ತು ಸಮೃದ್ಧಿಯ ಉತ್ತುಂಗಕ್ಕೆ ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ. 

ಚಾಟ್ ಜಿಪಿಟಿ ಎಂದು ಜನಪ್ರಿಯವಾಗಿರುವ ಚಾಟ್ ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್‌ಫಾರ್ಮರ್ (CHAT GENERATIVE PRE-TRAINED TRANSFORMER), ಕೃತಕ ಬುದ್ಧಿಮತ್ತೆ (ಎಐ)ಯು ರಚಿಸಿದ ಒಂದು ಅತ್ಯಂತ ಶಕ್ತಿಶಾಲಿ ಮತ್ತು ಅದ್ಭುತ ಸಾಧನವಾಗಿದ್ದು, ಮಾಹಿತಿಯ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ನಮ್ಮ ಎಲ್ಲ ಪ್ರಶ್ನೆಗಳಿಗೆ ಒಂದು ಕ್ಷಣದೊಳಗಾಗಿ ಉತ್ತರಿಸಿದಾಗ, ಅದು ಕೊಡುವ ತೃಪ್ತಿಯನ್ನು ಪದಗಳಲ್ಲಿ ವರ್ಣಿಸಲಾಗದು. ಆದರೆ, ಅದೇ ಹೊತ್ತಿಗೆ ಈ ಅವಲಂಬನೆಯು ನಮ್ಮ ಬೂದು ಕೋಶಗಳನ್ನು ಕಾರ್ಯ ನಿರ್ವಹಿಸಲು ಮತ್ತು ಯೋಚಿಸಲು ದುರ್ಬಲವಾಗುವಂತೆ ಮಾಡುತ್ತದೆ. ಶಾಲಾ ಶಿಕ್ಷಣದ ವಿಷಯಕ್ಕೆ ಬಂದಾಗ, ಅದರ ಬಳಕೆಯನ್ನು ಅವಲಂಬಿಸಿ ಚಾಟ್ ಜಿಪಿಟಿ ವರ ಮತ್ತು ಶಾಪ ಎರಡನ್ನೂ ಒಳಗೊಂಡಿದೆ. 

ಇದನ್ನೂ ಓದಿ: Maruti Ertigaಗೆ ಟಕ್ಕರ್ ನೀಡಲು ರೋಡಿಗಿಳಿಯುತ್ತಿವೆ ಮೂರು ಹೊಸ 7 ಸೀಟರ್ ! ಬೆಲೆ ಮತ್ತು ವೈಶಿಷ್ಟ್ಯ ಕೂಡಾ ಸೂಪರ್

ಶಾಲಾ ಶಿಕ್ಷಣದಲ್ಲಿ ಜಿಪಿಟಿ ಚಾಟ್ ಕೊಡುಗೆಗಳು

  • ಬೆರಳ ತುದಿಯಲ್ಲಿ ಅಥವಾ ಮೌಸ್‌ನ ಕ್ಲಿಕ್‌ನಲ್ಲಿ ಪ್ರತಿಯೊಂದು ಮಾಹಿತಿಯನ್ನು ಪಡೆಯುವುದು ಆಧುನಿಕ ಯುಗದ ವಿದ್ಯಾರ್ಥಿಗೆ ಸಂತೋಷದಾಯಕವಾಗಿರುತ್ತದೆ. ಮಾಹಿತಿಯನ್ನು ಹುಡುಕುವುದಕ್ಕಾಗಿ ದಪ್ಪ ಪುಸ್ತಕದ ಪುಟಗಳನ್ನು ತಿರುವಿ ಹಾಕುವ ತೊಂದರೆಯಿಂದ ಅವರು ಪಾರಾಗಿದ್ದಾರೆ. 
  • ಬಹುತೇಕ ಮಾಹಿತಿಯು ಕ್ಲೌಡ್ ಸ್ಟೋರೇಜ್‌‌ನಲ್ಲಿ ಸಂಗ್ರಹವಾಗುವುದರಿಂದ, ಕಾಗದಗಳ ಬಳಕೆ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಮರಗಳನ್ನು ಕಡಿಯುವುದು ತಪ್ಪಿ, ಪರಿಸರ ಸಂರಕ್ಷಣೆಗೂ ಗಮನಾರ್ಹ ಕೊಡುಗೆ ನೀಡುತ್ತದೆ. 
  • ಪ್ರತಿಯೊಂದು ಸಣ್ಣ ಮಾಹಿತಿಯೂ ತ್ವರಿತವಾಗಿ ಲಭ್ಯವಾಗುತ್ತಿದ್ದು, ಸಮಯದ ಉಳಿತಾಯವಾಗುತ್ತಿದೆ. ಇದು ಉತ್ಪಾದನೆಯನ್ನು ಹೆಚ್ಚಿಸಿ ಮತ್ತು ವರ್ಧಿತ ದಕ್ಷತೆಗೆ ಕಾರಣವಾಗುತ್ತದೆ. ಮಾಹಿತಿಯು ಬಳಕೆಗೆ ಸುಲಭವಾಗಿ ಲಭ್ಯವಿರುವುದರಿಂದ ಯೋಜನೆ ಆಧಾರಿತ ಕಲಿಕೆಯು ಗರಿಷ್ಠ ಪ್ರಯೋಜನವನ್ನು ಪಡೆಯುತ್ತದೆ.
  • ಶಿಕ್ಷಕರು ತರಗತಿಗೆ ಸಿದ್ಧರಾಗಲು ಮತ್ತು ಸಂದೇಹ ನಿವಾರಿಸಿಕೊಳ್ಳಲು ಅಗತ್ಯವಾದ ಮಾಹಿತಿಯನ್ನು ಸುಲಭವಾಗಿ ನೋಡಬಹುದು. ಈ ಮೂಲಕ ಅವರು ತಪ್ಪಿಲ್ಲದಂತೆ ಮತ್ತು ನಿಖರವಾಗಿ ಬೋಧಿಸಬಹುದು. ಪಾಠಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲು ಮತ್ತು ಯೋಜಿಸಲು ಇದು ಅವರಿಗೆ ಸಹಾಯ ಮಾಡುತ್ತದೆ.
  • ವಿಷಯವು ಗುಣಾತ್ಮಕವಾಗಿರುತ್ತದೆ, ಪ್ರಸ್ತುತವಾಗಿರುತ್ತದೆ ಮತ್ತು ಹೆಚ್ಚು ನಿಖರವಾಗಿರುತ್ತದೆ. ಅಲ್ಲದೆ, ಪುನರಾವರ್ತಿತ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸುತ್ತದೆ. ಈ ಮೂಲಕ ಪ್ರತಿ ಬಾರಿಯೂ ಹೊಸ ಉತ್ತರವನ್ನು ನೀಡುತ್ತದೆ. ಈ ಹಿಂದಿನ ಸಂವಹನಗಳನ್ನು ನೆನಪಿಟ್ಟುಕೊಳ್ಳುವ ಇದು, ಪುನರಾವರ್ತನೆಗಳನ್ನು ತಪ್ಪಿಸುತ್ತದೆ.
  • ದೋಷಗಳು ಕಡಿಮೆಯಾಗಿರುವ ಕಾರಣ, ನಿಖರತೆಯು ತುಂಬ ಹೆಚ್ಚಾಗಿರುತ್ತದೆ. ಅದು AI (ಕೃತಕ ಬುದ್ಧಿಮತ್ತೆ) ಚಾಲಿತವಾಗಿರುವುದರಿಂದ, ಪರಿಹಾರಗಳನ್ನು ತ್ವರಿತವಾಗಿ ರಚಿಸಲಾಗುತ್ತದೆ.

ಇದನ್ನೂ ಓದಿ: ಇವೇ ನೋಡಿ ಅತಿ ಹೆಚ್ಚು ಮೈಲೇಜ್ ನೀಡುವ ಜನಪ್ರಿಯ ಎಸ್‌ಯುವಿ ಕಾರುಗಳು

ಶಾಲಾ ಶಿಕ್ಷಣಕ್ಕೆ ಪಿಟಿ ಚಾಟ್  ಶಾಪ ಹೇಗೆ?

  • ಪುಸ್ತಕಗಳನ್ನು ಓದದೆ, ಮೌಸ್‌ನ ಕ್ಲಿಕ್‌ನಲ್ಲೇ ಪ್ರತಿಯೊಂದು ಮಾಹಿತಿಯೂ ಲಭ್ಯವಿರುವುದು ಹುಡುಕುವ ಮತ್ತು ಕಲಿಯುವ ಬಯಕೆಯನ್ನು ಕೊಲ್ಲುತ್ತದೆ. ಇದು ಮಾನವನ ಮೆದುಳನ್ನು ದುರ್ಬಲಗೊಳಿಸುತ್ತದೆ.
  • ಈ ಪ್ರಕ್ರಿಯೆಯು ಮಾನವನ ಬುದ್ಧಿಮತ್ತೆಗೆ ಸಂಬಂಧಿಸಿದ ಅರಿವಿನ ಡೊಮೇನ್‌ನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಏಕೆಂದರೆ ಬೂದು ಕೋಶಗಳು ಮೊಂಡಾಗುತ್ತವೆ ಮತ್ತು ನಿಷ್ಕ್ರಿಯಗೊಳ್ಳುತ್ತವೆ. ಬಳಸದೇ ಇರುವ ಪೆನ್ಸಿಲ್ ಹರಿತಗೊಳಿಸುವ ಅಗತ್ಯವಿದೆಯೇ? ಅದೇ ಸ್ಥಿತಿ ಬೂದು ಕೋಶಗಳಿಗೂ ಒದಗುತ್ತದೆ. 
  • ಸುಲಭವಾಗಿ ಲಭ್ಯವಿರುವ ಕಾಪಿ ಮತ್ತು ಪೇಸ್ಟ್ ಆಯ್ಕೆಯು ಮಕ್ಕಳ ಓದುವ, ಯೋಚಿಸುವ ಮತ್ತು ಬರೆಯುವ ಕೌಶಲಗಳನ್ನು ನಾಶ ಮಾಡುತ್ತದೆ. ವಿದ್ಯಾರ್ಥಿಗಳು ವಿಷಯವನ್ನು ಓದುವ ಬದಲು ಉತ್ತರವನ್ನು ಕಾಪಿ-ಪೇಸ್ಟ್ ಮಾಡುತ್ತಾರೆ. ಆ್ಯಪ್‌ನ ಮೇಲೆ ಅವಲಂಬನೆ ಹೆಚ್ಚಾದಂತೆ ಆಲೋಚನಾ ಸಾಮರ್ಥ್ಯದ ಬೆಳವಣಿಗೆ, ಸಮಸ್ಯೆ-ಪರಿಹರಿಸುವ ಕೌಶಲ್ಯ ಮತ್ತು ಸೃಜನಶೀಲತೆ ಎಲ್ಲವೂ ಹಿನ್ನೆಲೆಗೆ ಸರಿಯುತ್ತವೆ. 
  • ವಿದ್ಯಾರ್ಥಿಗಳು ಓದಲು ಮತ್ತು ಗ್ರಹಿಸಲು ಹೆಣಗಾಡುತ್ತಿರುವ ಶಾಲೆಗಳಲ್ಲಿ, ವಿಶೇಷವಾಗಿ ಕೋವಿಡ್ ಅವಧಿಯಲ್ಲಿ, ತಂತ್ರಜ್ಞಾನದ ಅತಿರೇಕದ ಬಳಕೆಯು ಅಕ್ಷರಶಃ ಸವಾಲನ್ನು ಒಡ್ಡಿದೆ. ಅವರಿಗೆ ಚಾಟ್ ಜಿಪಿಟಿಯ ಲಭ್ಯತೆಯು ಶಿಕ್ಷಣದ ಗುಣಮಟ್ಟವನ್ನು ಹದಗೆಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. 
  • ಪರೀಕ್ಷೆಯ ಸಮಯದಲ್ಲಿ ಮೋಸ ಮಾಡುವ ಪ್ರಲೋಭನೆಯು ಹೆಚ್ಚಾಗುತ್ತದೆ ಮತ್ತು ಎಲ್ಲ ಮೌಲ್ಯಮಾಪನಗಳಲ್ಲಿ ಅಕ್ರಮವು ನುಸುಳುವ ಸಾಧ್ಯತೆ ಇರುತ್ತದೆ. ಮೋಸದಾಟವು ಪ್ರಧಾನವಾಗಿ ಚಟಕ್ಕೆ ಕಾರಣವಾಗುವ ಅಭ್ಯಾಸವಾಗಿದೆ. ಹೀಗಾಗಿ ಪರೀಕ್ಷಾ ವ್ಯವಸ್ಥೆಯು ಕಲುಷಿತಗೊಳ್ಳುತ್ತದೆ.
  • ಕೌಶಲಪೂರ್ಣ ಶಿಕ್ಷಣ ಮತ್ತು ಜೀವನ ಕೌಶಲದ ತರಬೇತಿ ಈ ಕಾಲದ ಅಗತ್ಯವಾಗಿವೆ. ಇವುಗಳನ್ನು ನೀಡಲು ಚಾಟ್ ಜಿಪಿಟಿ (ChatGPT) ಗೆ ಸಾಧ್ಯವಿಲ್ಲ. ಕಾಪಿ ಮತ್ತು ಪೇಸ್ಟ್ ಅಲ್ಲ, ಪ್ರಾಯೋಗಿಕವಾಗಿ ಮಾಡುವುದು ಮತ್ತು ಕಲಿಯುವುದೇ  ಜೀವಮಾನದ ಕಲಿಕೆ ಆಗಿರುತ್ತದೆ.
  • ಗ್ಯಾಜೆಟ್‌ಗಳ ಬಳಕೆ ಹೆಚ್ಚುವುದರಿಂದ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನೂ ಉಂಟು ಮಾಡುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶೀಘ್ರದಲ್ಲೇ ರೋಬೋಟ್‌ಗಳ ಗುಲಾಮರಾಗಿರುವ ಮೂರ್ಖ ಮಾನವರಿಂದ ತುಂಬಿರುವ ರಾಷ್ಟ್ರವಾಗಿ ರೂಪುಗೊಳ್ಳುವ ಅಪಾಯವನ್ನು ನಾವು ಹೊಂದಿದ್ದೇವೆ.
  • ವಿಪರ್ಯಾಸವೆಂದರೆ, ರೋಬೋಟ್‌ಗಳನ್ನು ಸಂಶೋಧಿಸಿದ ಮಾನವರೇ ಈಗ ಅವುಗಳಿಗೆ ಗುಲಾಮರಾಗುತ್ತಿದ್ದಾರೆ. ಆದರೂ, ಆಧಿಪತ್ಯ ಸ್ಥಾಪಿಸುವತ್ತ ಚಾಟ್‌ಜಿಪಿಟಿ ಹೆಜ್ಜೆ ಹಾಕುತ್ತಿದ್ದು, ಮಾನವನ ಮೆದುಳು ಯಂತ್ರಗಳು ಮತ್ತು ರೋಬೋಟ್‌ಗಳ ಅಧೀನಕ್ಕೆ ಒಳಗಾಗುತ್ತದೆ. ಸಮತೋಲನವು ಒಂದು ಆಯ್ಕೆಯಾಗಿದ್ದು, ಅದು ನಮ್ಮದೇ ನಿಯಂತ್ರಣದಲ್ಲಿರುತ್ತದೆ.

ಲೇಖಕರು : ಪರಮಿತಾ ಮಿಶ್ರಾ
ಪ್ರಾಂಶುಪಾಲರು, 
ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್, 
ಮೆಜೆಸ್ಟಿಕ್ ಶಾಖೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News