ಕೇಂದ್ರ ಸರ್ಕಾರದಿಂದ ಮೂರು ತಿಂಗಳು ಉಚಿತ pre paid Scheme ? ಏನಿದು ಹೊಸ ಯೋಜನೆ ?

ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೇಗವಾಗಿ ವೈರಲ್ ಆಗುತ್ತಿದೆ.ಸರ್ಕಾರ ಜನರಿಗೆ 3 ತಿಂಗಳ ಉಚಿತ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ. 

Written by - Ranjitha R K | Last Updated : Jul 25, 2024, 03:45 PM IST
  • ಸರ್ಕಾರ ಮೂರು ತಿಂಗಳ ಉಚಿತ ಮೊಬೈಲ್ ರೀಚಾರ್ಜ್ ನೀಡುತ್ತಿದೆ
  • ಇಂಥಹ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
  • ಈ ನಕಲಿ ಸಂದೇಶ ವೈರಲ್ ಆಗುತ್ತಿದೆ
ಕೇಂದ್ರ ಸರ್ಕಾರದಿಂದ ಮೂರು ತಿಂಗಳು ಉಚಿತ pre paid Scheme ? ಏನಿದು ಹೊಸ ಯೋಜನೆ ? title=

ಬೆಂಗಳೂರು : ಸರ್ಕಾರ ಮೂರು ತಿಂಗಳ ಉಚಿತ ಮೊಬೈಲ್ ರೀಚಾರ್ಜ್ ನೀಡುತ್ತಿದೆ ಎನ್ನುವ ಸಂದೇಶ ಎಲ್ಲಾ ಕಡೆ ಹರಿದಾಡುತ್ತಿದೆ.ಮೊಬೈಲ್ ರೀಚಾರ್ಜ್ ಬೆಲೆ ಏರಿಕೆಯಿಂದಾಗಿ ಸರ್ಕಾರದ ವತಿಯಿಂದ ಉಚಿತ ರೀಚಾರ್ಜ್ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಜನ ಕೂಡಾ ಎಲ್ಲಾ ಕಡೆ ಸರ್ಚ್ ಮಾಡುತ್ತಿದ್ದಾರೆ.ಆದರೆ, ಇದು ಸುಳ್ಳು ಸಂದೇಶವಾಗಿದ್ದು,ಜನರನ್ನು ವಂಚಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಹರಡಲಾಗುತ್ತಿದೆ.ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹೆಸರಿನಲ್ಲಿ ನಕಲಿ ಸಂದೇಶ ಹರಿದಾಡುತ್ತಿದೆ ಎಂದು ಟ್ವಿಟರ್‌ನಲ್ಲಿ ಪಿಐಬಿ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಈ ನಕಲಿ ಸಂದೇಶ ವೈರಲ್ ಆಗುತ್ತಿದೆ : 
'ಅಭಿನಂದನೆಗಳು! ಮೂರು ತಿಂಗಳ ಉಚಿತ ರೀಚಾರ್ಜ್ ಅನ್ನು ಪಡೆದುಕೊಂಡಿದ್ದೀರಿ.ಇದು 200GB ಹೈ ಸ್ಪೀಡ್ 4G/5G ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ ಬರುತ್ತದೆ ಎಂದು ಮೆಸೇಜ್ ನಲ್ಲಿ ಹೇಳಲಾಗಿದೆ.  ಮೊಬೈಲ್ ರೀಚಾರ್ಜ್ ಬೆಲೆಗಳ ಹೆಚ್ಚಳದಿಂದಾಗಿ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮೂರು ತಿಂಗಳ ಉಚಿತ ರೀಚಾರ್ಜ್ ಅನ್ನು ನೀಡುತ್ತಿದ್ದು, ಈ ಆಫರ್ ಜುಲೈ 31 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. 

ಇದನ್ನೂ ಓದಿ : ದುಬಾರಿ ರಿಚಾರ್ಜ್ ಪ್ಲಾನ್ ನಿಂದ ಬೇಸತ್ತ ಗ್ರಾಹಕರೀಗ ರಿಲ್ಯಾಕ್ಸ್ ! ಅತ್ಯಂತ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ !

ಇದೊಂದು ನಕಲಿ ಮೆಸೇಜ್ ಎಂದು ಸ್ಪಷ್ಟಪಡಿಸಿದ ಪಿಐಬಿ : 
ಈ ಕೊಡುಗೆಯು ಜುಲೈ 31ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿದೆ.ಇದರಿಂದ ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ಜನರನ್ನು ಪ್ರಚೋದಿಸಲಾಗುತ್ತದೆ.ಆದರೆ,ಇದೊಂದು ಫೇಕ್ ಮೆಸೇಜ್ ಎನ್ನುವುದನ್ನು ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟಪಡಿಸಿದೆ. TRAI ಯಾವುದೇ ರೀತಿಯಲ್ಲಿಯೂ ಉಚಿತ ಮೊಬೈಲ್ ರೀಚಾರ್ಜ್ ನೀಡುತ್ತಿಲ್ಲ ಎಂದು ಹೇಳಿದೆ.

Xನಲ್ಲಿ ಟ್ವೀಟ್ ಮಾಡಿದ ಪಿಐಬಿ  : 
TRAI ಹೆಸರನ್ನು ಬಳಸುತ್ತಿರುವ ಸಂದೇಶವು ಜನರಿಗೆ ಉಚಿತ ಮೊಬೈಲ್ ರೀಚಾರ್ಜ್ ನೀಡುವ ಆಮಿಷವೊಡ್ಡುತ್ತಿದೆ.ಆದರೆ ಇದು ಶುದ್ದ ಸುಳ್ಳು.TRAI ಯಾವುದೇ ರೀತಿಯ ಉಚಿತ ರೀಚಾರ್ಜ್ ನೀಡುತ್ತಿಲ್ಲ.ಈ ಸಂದೇಶ ಬಂದರೆ  ಜಾಗರೂಕರಾಗಿರಿ ಮತ್ತು ಅಲ್ಲಿ ನೀಡಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. 

ಇದನ್ನೂ ಓದಿ : ಆ್ಯಪ್ ಮೂಲಕ ಮಸೇಜ್ ಮಾಡಿದ್ರೆ, ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಸಿಸಿಟಿವಿ ವಿಡಿಯೋ: ಇದು ಸೇಫ್ ಸಿಟಿ ಯೋಜನೆ

ಮೆಸೇಜ್ ಬಂದ ಕೂಡಲೇ ಏನು ಮಾಡುವುದು ? :
ಇಂಥಹ ಮೆಸೇಜ್ ಬಂದ ಕೂಡಲೇ ಅದನ್ನು ಖಚಿತಪಡಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.ಈ ಮೂಲಕ ಆಫರ್ ಹೌದಾ ಅಲ್ಲವಾ ಎಂದು ಸರಿಯಾಗಿ ಖಚಿತ ಪಡಿಸಿಕೊಳ್ಳಬೇಕು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News