Flipkart Mobile Bonanza Sale: Redmi Note 9 ಮೇಲೆ ಸಿಗಲಿದೆ ಭಾರೀ ರಿಯಾಯಿತಿ ಜೊತೆಗೆ ಆಕರ್ಷಕ ಕೊಡುಗೆಗಳು

ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಬೊನಾನ್ಜಾ  ಸೇಲ್  ನಡೆಯುತ್ತಿದೆ. ಈ ಸೇಲ್ ಮೂಲಕ, ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. ಅನೇಕ ಬ್ರಾಂಡ್‌ಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿದೆ. 

Written by - Ranjitha R K | Last Updated : Jun 22, 2021, 02:00 PM IST
  • ಅಗ್ಗದ ಬೆಲೆಗೆ ಖರೀದಿಸಬಹುದು ಸ್ಮಾರ್ಟ್ ಫೋನ್
  • ಕಡಿಮೆ ಬೆಲೆಗೆ ಸಿಗಲಿದೆ Redmi Note 9
  • Redmi Note 9 ಮೇಲೆ ಸಿಗಲಿದೆ ಉತ್ತಮ ಆಫರ್
Flipkart Mobile Bonanza Sale: Redmi Note 9 ಮೇಲೆ ಸಿಗಲಿದೆ ಭಾರೀ ರಿಯಾಯಿತಿ ಜೊತೆಗೆ ಆಕರ್ಷಕ ಕೊಡುಗೆಗಳು title=
ಕಡಿಮೆ ಬೆಲೆಗೆ ಸಿಗಲಿದೆ Redmi Note 9 (photo zee news)

ನವದೆಹಲಿ : ಫ್ಲಿಪ್‌ಕಾರ್ಟ್‌ನಲ್ಲಿ (Flipkart ) ಮೊಬೈಲ್ ಬೊನಾನ್ಜಾ  ಸೇಲ್ (Mobile Bonanza Sale)  ನಡೆಯುತ್ತಿದೆ. ಈ ಸೇಲ್ ಮೂಲಕ, ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ (Smartphone) ಅನ್ನು ಖರೀದಿಸಬಹುದು. ಅನೇಕ ಬ್ರಾಂಡ್‌ಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿದೆ. ಇಂದಿನ ಡೀಲ್ ಬಗ್ಗೆ ಹೇಳುವುದಾದರೆ, ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯಗಳಿರುವ Redmi Note 9 ಅನ್ನು ಖರೀದಿಸಬಹುದು. 

Redmi Note 9 ಮೇಲೆ ಸಿಗಲಿದೆ ಉತ್ತಮ ಆಫರ್ : 
Redmi Note 9 ಈ ಸೇಲ್ ನಲ್ಲಿ ಕೇವಲ 10,499 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಈ ಫೋನಿನ 4GB+64GB ವೇರಿಯೆಂಟನ್ನು  ಕಂಪನಿಯು 11,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಇದಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit card) ಮೂಲಕ ಈ  ಸ್ಮಾರ್ಟ್‌ಫೋನ್‌ ಖರೀದಿಸುವುದಾದರೆ, ಇದರ ಮೇಲೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ನೋ ಕಾಸ್ಟ್ ಇಎಂಐ ಆಪ್ಶನ್ ಕೂಡಾ ಲಭ್ಯವಿರಲಿದೆ.  

ಇದನ್ನೂ ಓದಿ : Covid-19 Vaccine Certificate ನಲ್ಲಿನ ತಪ್ಪಾಗಿರುವ ಮಾಹಿತಿ ಮನೆಯಿಂದಲೇ ಸರಿಪಡಿಸುವುದು ಹೇಗೆ?

ಫೋನಿನ ವೈಶಿಷ್ಟ್ಯಗಳು : 
ರೆಡ್ಮಿ ನೋಟ್ 9 ರ ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ, 6.53 ಇಂಚಿನ ಫುಲ್ ಎಚ್ಡಿ + ಡಾಟ್ ಡಿಸ್ಪ್ಲೇ ಹೊಂದಿದೆ. ಇದು 2340x1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಸ್ಕ್ರೀನ್ ಪ್ರೊಟೆಕ್ಷನ್ ಗಾಗಿ,  ಫೋನ್‌ಗೆ ಸ್ಪ್ಲಾಶ್ ಫ್ರೀ ನ್ಯಾನೋ ಕೋಟಿಂಗ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ನೀಡಲಾಗಿದೆ. ಗ್ರಾಹಕರು ಈ ಫೋನ್ ಅನ್ನು ಆಕ್ವಾ ಗ್ರೀನ್, ಆರ್ಕ್ಟಿಕ್ ವೈಟ್ ಮತ್ತು ಪೆಬಲ್ ಗ್ರೇ ಮೂರು ಬಣ್ಣಗಳಲ್ಲಿ ಖರೀದಿಸಬಹುದು.

ಕ್ಯಾಮೆರಾ :
ಇನ್ನು ಈ ಫೋನಿನ ಕ್ಯಾಮರಾದ (Phone camera) ಬಗ್ಗೆ ಹೇಳುವುದಾದರೆ, ಫೋನ್‌ನಲ್ಲಿ ನಾಲ್ಕು ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇದು 48 ಮೆಗಾಪಿಕ್ಸೆಲ್ ನ ಮೈನ್ ಕ್ಯಾಮರಾದೊಂದಿಗೆ, 8 ಮೆಗಾ ಫಿಕ್ಸೆಲ್ ನ  ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾವನ್ನು ಕೂಡಾ ಹೊಂದಿದೆ. 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಇನ್-ಡಿಸ್ಪ್ಲೇ ಕ್ಯಾಮೆರಾವನ್ನು ಕೂಡಾ ನೀಡಲಾಗಿದೆ.  

ಇದನ್ನೂ ಓದಿ : WhatsAppನಲ್ಲಿ ಬಂತು ಜಬರ್ದಸ್ತ್ ವೈಶಿಷ್ಟ್ಯ, ಇದೀಗ ನೀವು ಸಂದೆಶಗಳಂತೆಯೇ Sticker Pack ಕಳುಹಿಸಬಹುದು

ಬ್ಯಾಟರಿ :
ಫೋನ್‌ನಲ್ಲಿ 5,020mAh ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದು 18W ವೇಗದ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬರುತ್ತದೆ. ಫೋನ್‌ನ ಮತ್ತೊಂದು ವಿಶೇಷ ಲಕ್ಷಣವೆಂದರೆ ಇದು 9W ಮ್ಯಾಕ್ಸ್ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News