Google Chrome Updates: ತನ್ನ Chrome ಬ್ರೌಸರ್ ಬಳಕೆದಾರರಿಗೆ ಎರಡು ನೂತನ ವೈಶಿಷ್ಟ್ಯ ಪರಿಚಯಿಸಿದ ಗೂಗಲ್ ಕ್ರೋಮ್

Google Chrome New Features - Google Chromeನ ಈ ಎರಡು ಹೊಸ ವೈಶಿಷ್ಟ್ಯಗಳು ಬಳಕೆದಾರರಿಗೆ ತುಂಬಾ ಉಪಯುಕ್ತ ಸಾಬೀತಾತಲಿವೆ. ಇವುಗಳ ಸಹಾಯದಿಂದ ಬಳಕೆದಾರರು ಯಾವ ವೆಬ್‌ಸೈಟ್‌ಗೆ ಯಾವ ಅನುಮತಿಗಳನ್ನು ನೀಡಲಾಗಿದೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗಲಿದೆ.

Written by - Nitin Tabib | Last Updated : Jul 22, 2021, 05:29 PM IST
  • ಕ್ರೋಮ್ ಬ್ರೌಸಿಂಗ್ ಸುರಕ್ಷತೆಗಾಗಿ ಎರಡು ನೂತನ ವೈಶಿಷ್ಟ್ಯ ಬಿಡುಗಡೆಗೊಳಿಸಿದ ಗೂಗಲ್.
  • ಈ ವೈಶಿಷ್ಟ್ಯಗಳು ಯಾವುವು ಮತ್ತು ಅವುಗಳನ್ನು ಹೇಗೆ ಬಳಸಬೇಕು?
  • ಬಳಕೆದಾರರಿಗೆ ಈ ವೈಶಿಷ್ಟ್ಯಗಳಿಂದ ಏನು ಲಾಭ?
Google Chrome Updates: ತನ್ನ Chrome ಬ್ರೌಸರ್ ಬಳಕೆದಾರರಿಗೆ ಎರಡು ನೂತನ ವೈಶಿಷ್ಟ್ಯ ಪರಿಚಯಿಸಿದ ಗೂಗಲ್ ಕ್ರೋಮ್ title=
Google Chrome New Features (File Photo)

ನವದೆಹಲಿ: Google Chrome New Features - ಗೂಗಲ್ ಕ್ರೋಮ್ ಬಳಕೆದಾರರಿಗೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಹೌದು, Google ತನ್ನ ಸರ್ಚ್ ಇಂಜಿನ್ ಪ್ಲಾಟ್ಫಾರ್ಮ್  Google Chromeಗಾಗಿ ಎರಡು ನೂತನ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. 

Google Chrome ವಿಶ್ವದ ಅತ್ಯಂತ ಜನಪ್ರಿಯ ಇಂಟರ್ನೆಟ್ ಬ್ರೌಸರ್ ಗಳಲ್ಲಿ ಒಂದಾಗಿದೆ. ಕಂಪನಿಯು ಈ ವೈಶಿಷ್ಟ್ಯಗಳನ್ನು Chrome 92 ನವೀಕರಣದ ಅಡಿಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಇಂಟರ್ನೆಟ್ ಬ್ರೌಸರ್ ಅನ್ನು ಬಳಕೆದಾರರಿಗೆ ಮತ್ತಷ್ಟು ಸುರಕ್ಷಿತವಾಗಿಸುವ ಗುರಿ ಹೊಂದಿದೆ. ಹೊಸ ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವು ಬಳಕೆದಾರರನ್ನು ಹೇಗೆ ಸುರಕ್ಷಿತವಾಗಿರಿಸುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Google Chrome Update Details
Chrome 92 ಅಪ್ಡೇಟ್ ಬಳಿಕ ಇದೀಗ ಬಳಕೆದಾರರು ಸುಲಭವಾಗಿ ಯಾವುದೇ ಒಂದು ವೆಬ್ಸೈಟ್ ಗಳಿಗೆ ನೀಡಲಾಗಿರುವ ಎಲ್ಲಾ ಅನುಮತಿಗಳನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ಅವರು ಕೇವಲ Google Chrome Address Barನ ಎಡಭಾಗಕ್ಕೆ ನೀಡಲಾಗಿರುವ Lock Icon  ಮೇಲೆ ಕ್ಲಿಕ್ಕಿಸಬೇಕು. ಅದನ್ನು ಕ್ಲಿಕ್ಕಿಸುತ್ತಲೇ ಪ್ಯಾನಲ್ ವೊಂದು ತೆರೆದುಕೊಳ್ಳಲಿದೆ. ಅದರಲ್ಲಿ ನಿಮಗೆ ಒಂದು Permissions ಸೆಕ್ಷನ್ ಕಾಣಿಸಿಕೊಳ್ಳಲಿದೆ. ಈ ಸೆಕ್ಷನ್ ಗೆ ಭೇಟಿ ನೀಡಿ, ವೆಬ್ ಸೈಟ್ ನಲ್ ಯಾವ ಯಾವ ಸಂಗತಿಗಳಿಗೆ ಪರ್ಮಿಶನ್ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು ಜೊತೆಗೆ. ಬಳಕೆದಾರರು ಅದರ ಆನ್ ಹಾಗೂ ಆಫ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ ಸುಲಭವಾಗಿ ಅದರ ಸೆಟ್ಟಿಂಗ್ ಕೂಡ ಬದಲಾಯಿಸಬಹುದು. ಆದ್ರೆ, ಈ ವೈಶಿಷ್ಟ್ಯ ಮೊದಲು Android ಫೋನ್ ಹಾಗೂ Tabletsಗಳ ಮೇಲಿನ Chrome ಗಾಗಿ ಬರಲಿದೆ. ಅದಾದ ಬಳಿಕ ಇತರೆ ಪ್ಲಾಟ್ ಫಾರ್ಮ್ ಗಳಿಗೂ ಕೂಡ ಲಭ್ಯವಾಗಲಿದೆ.

ಇದನ್ನೂ ಓದಿ- ಪಾಸ್ವರ್ಡ್ ಇಲ್ಲದೆಯೇ ಓಪನ್ ಆಗಲಿದೆ Twitter, ಬಂದಿದೆ ಹೊಸ ವೈಶಿಷ್ಟ್ಯ

ಈ ರೀತಿ ಸೇಫ್ಟಿ ಚೆಕ್ ಅಳವಡಿಸಬಹುದು (How To Use Google Chrome New Updates)
Chrome ಬ್ರೌಸರ್ ಅಡ್ರೆಸ್ ಬಾರ್ ನಲ್ಲಿ ಟೈಪ್ ಮಾಡುವ ಮೂಲಕ ಬಳಕೆದಾರರು ಸುರಕ್ಷತಾ ಪರಿಶೀಲನೆಯನ್ನು ಕಂಡುಹಿಡಿಯಲು ಸಾಧ್ಯವಾಗಲಿದೆ ಇದಕ್ಕಾಗಿ, ಬಳಕೆದಾರರು ಅಡ್ರೆಸ್ ಬಾರ್ ನಲ್ಲಿ Safety Check ಟೈಪ್ ಮಾಡಬೇಕು. ಇದರಿಂದ  ಪಾಸ್‌ವರ್ಡ್‌ನ ಸುರಕ್ಷತೆಯನ್ನು ಕೇಳಲಾಗುವುದು. ಇದಲ್ಲದೆ ದುರುದ್ದೇಶಪೂರಿತ ವಿಸ್ತರಣೆಗಳನ್ನು ಸ್ಕ್ಯಾನ್ ಮಾಡಲು ನಿಮಗೆ ಸಾಧ್ಯವಾಗಲಿದೆ. ಅಲ್ಲದೆ, ಭದ್ರತಾ ಸೆಟ್ಟಿಂಗ್ ಅನ್ನು ಬದಲಾಯಿಸುವ ಮೂಲಕ, ನೀವು  manage Synn ಸೆಟ್ಟಿಂಗ್ ಅನ್ನು ಕೂಡ ಬದಲಾಯಿಸಬಹುದು. ಇದರೊಂದಿಗೆ, Chrome 92 ನವೀಕರಣ ಸೈಟ್ ಐಸೊಲೆಶನ್ ಸ್ಕೋಪ್ ಅನ್ನು ಕೂಡ  ವಿಸ್ತರಿಸುತ್ತಿದೆ. ಇದು ದುರುದ್ದೇಶಪೂರಿತ ವೆಬ್‌ಸೈಟ್‌ಗಳಿಂದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಭದ್ರತಾ ವೈಶಿಷ್ಟ್ಯವಾಗಿದೆ. 

ಇದನ್ನೂ ಓದಿ-YouTube Super Thanks: YouTuberಗಳಿಗಾಗಿ ತೆರೆದುಕೊಂಡ ಆದಾಯದ ಹೊಸ ಮಾರ್ಗ

ಇದಲ್ಲದೆ ಇನ್ಮುಂದೆ ನಿಮಗೆ ಕ್ರೋಮ್ ಬ್ರೌಸರ್ ನಲ್ಲಿ ಇಮೇಜ್ ಪ್ರೊಸೆಸಿಂಗ್ ನಲ್ಲಿಯೂ ಕೂಡ ಗಮನಾರ್ಹ ಬದಲಾವಣೆ ಕಾಣಿಸಲಿದೆ. ಇದರಿಂದ ಫಿಶಿಂಗ್ ಡಿಟೆಕ್ಶನ್ (Phishing Detection) ವೇಗ ಶೇ.50ರಷ್ಟು ಹೆಚ್ಚಾಗಲಿದೆ. ಕಂಪನಿಯ ಪ್ರಕಾರ ಇದರಿಂದ ಬಳಕೆದಾರರಿಗೆ 1.8 ಸೆಕೆಂಡ್ ಕಾಲಾವಧಿಯ ಬದಲು ಕೇವಲ 100 ಮಿಲಿ ಸೆಕೆಂಡ್  ಕಾಲಾವಧಿಯಲ್ಲಿ ಫಿಶಿಂಗ್ ವರ್ಗೀಕರಣದ ಫಲಿತಾಂಶ ಸಿಗಲಿದೆ. ಇದರಿಂದ ಬಳಕೆದಾರರಿಗೆ ಹಲವು ಲಾಭಗಳಾಗಲಿವೆ ಹಾಗೂ ಅವರ ಫೋನ್, ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್ ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲ. 

ಇದನ್ನೂ ಓದಿ-Reliance Jio ಅತ್ಯಂತ ಅಗ್ಗದ ಪ್ಲಾನ್, ಕೇವಲ 200 ರೂ.ಗಳಿಗೆ 1000GB ಡೇಟಾ, ಅನಿಯಮಿತ ಕರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News