ಅಮೆಜಾನ್ ನಲ್ಲಿ Great Freedom Festival Sale ಆರಂಭ, ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ

Great Freedom Festival Sale 2022 :ಈ ಫ್ರೀಡಂ ಸೇಲ್ ನಲ್ಲಿ ಹೊಸದಾಗಿ ಬಿಡುಗಡೆಯಾದ OnePlus 10T , iQOO 9T ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಈ ವರ್ಷ ಪರಿಚಯಿಸಲಾದ ಬಜೆಟ್, ಮಿಡ್ ಬಜೆಟ್ ಮತ್ತು ಪ್ರೀಮಿಯಂ ಫೋನ್‌ಗಳ ಮೇಲೆ ಕೂಡಾ ರಿಯಾಯಿತಿ ಸಿಗಲಿದೆ.

Written by - Ranjitha R K | Last Updated : Aug 5, 2022, 02:32 PM IST
  • ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಆರಂಭ
  • ಪ್ರೈಮ್ ಬಳಕೆದಾರರಿಗೆ ಆರಂಭವಾಗಿದೆ ಸೇಲ್
  • ಸಾಮಾನ್ಯ ಬಳಕೆದಾರರಿಗೆ ಇಂದು ರಾತ್ರಿಯಿಂದ ಲಭ್ಯ
ಅಮೆಜಾನ್ ನಲ್ಲಿ Great Freedom Festival Sale ಆರಂಭ,  ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ  title=
Great Freedom Festival Sale 2022

Great Freedom Festival Sale 2022 : ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಲೈವ್ ಆಗಿದೆ. ಸಾಮಾನ್ಯ ಬಳಕೆದಾರರಿಗೆ, ಈ  ಸೇಲ್ ಇಂದು ರಾತ್ರಿ ಮಧ್ಯರಾತ್ರಿಯಿಂದ ಪ್ರಾರಂಭವಾಗುತ್ತದೆ. ಪ್ರತಿ ವರ್ಷ ನಡೆಯುವ ಈ ಫ್ರೀಡಂ ಸೇಲ್‌ನಲ್ಲಿ ಬಳಕೆದಾರರು ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಇತ್ಯಾದಿಗಳ ಮೇಲೆ ಭಾರೀ ರಿಯಾಯಿತಿ ಪಡೆಯಬಹುದು. ಕೆಲವು ದಿನಗಳ ಹಿಂದೆ, ಅಮೆಜಾನ್ ಈ ಮಾರಾಟದಲ್ಲಿ ಲಭ್ಯವಿರುವ ಪ್ರಮುಖ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಈ ಸೇಲ್ ಆಗಸ್ಟ್ 10 ರ ಮಧ್ಯರಾತ್ರಿಯವರೆಗೆ ಇರುತ್ತದೆ. 

ಈ ಫ್ರೀಡಂ ಸೇಲ್ ನಲ್ಲಿ ಹೊಸದಾಗಿ ಬಿಡುಗಡೆಯಾದ OnePlus 10T , iQOO 9T ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಈ ವರ್ಷ ಪರಿಚಯಿಸಲಾದ ಬಜೆಟ್, ಮಿಡ್ ಬಜೆಟ್ ಮತ್ತು ಪ್ರೀಮಿಯಂ ಫೋನ್‌ಗಳ ಮೇಲೆ ಕೂಡಾ ರಿಯಾಯಿತಿ ಸಿಗಲಿದೆ. ಇದಲ್ಲದೆ, ಬಳಕೆದಾರರು ಸ್ಮಾರ್ಟ್ ಟಿವಿಗಳು, ಲ್ಯಾಪ್‌ಟಾಪ್‌ಗಳು, ಗೃಹೋಪಯೋಗಿ ವಸ್ತುಗಳು, ಇತ್ಯಾದಿಗಳ ಮೇಲೆ ರಿಯಾಯಿತಿ ಪಡೆಯಲಿದ್ದಾರೆ. 

ಇದನ್ನೂ ಓದಿ :  NASA Discovery: ಹೊಸ ಗ್ರಹವನ್ನು ಪತ್ತೆಹಚ್ಚಿದ ವಿಜ್ಞಾನಿಗಳು, ಟ್ವೀಟ್ ಮಾಡುವ ಮೂಲಕ 'ಸೂಪರ್ ಅರ್ಥ್' ಮಾಹಿತಿ ನೀಡಿದ ನಾಸಾ

ಅಮೆಜಾನ್ ಹೊರತುಪಡಿಸಿ, ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಇಂದು ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದೆ. ಅದರ ಆರಂಭಿಕ ಆಕ್ಸೆಸ್ ಫ್ಲಿಪ್‌ಕಾರ್ಟ್ ಪ್ಲಸ್ ಬಳಕೆದಾರರಿಗೆ ರಾತ್ರಿ 12 ಗಂಟೆಯಿಂದ ಲಭ್ಯವಿರಲಿದೆ. 

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ರಲ್ಲಿ ಲಭ್ಯವಿರುವ ಪ್ರಮುಖ  ಆಫರ್ ಗಳು : 
ಫ್ರೀಡಂ ಫೆಸ್ಟಿವಲ್ ಸೇಲ್‌ಗಾಗಿ ಅಮೆಜಾನ್ ಎಸ್‌ಬಿಐ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಸ್‌ಬಿಐ ಕಾರ್ಡ್‌ನೊಂದಿಗೆ ಯಾವುದೇ ಉತ್ಪನ್ನವನ್ನು ಖರೀದಿಸಿದರೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೇ, ಮೊದಲ ಉತ್ಪನ್ನ ಖರೀದಿಯಲ್ಲಿ ಹೊಸ ಬಳಕೆದಾರರಿಗೆ 10 ಪ್ರತಿಶತ ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ.

ಸ್ಮಾರ್ಟ್ಫೋನ್ ಕೊಡುಗೆಗಳು :
ಈ ಸೇಲ್ ‌ನಲ್ಲಿ ಬಳಕೆದಾರರು ಸ್ಮಾರ್ಟ್‌ಫೋನ್ ಖರೀದಿಯ ಮೇಲೆ 750 ರೂಪಾಯಿಗಳ ಕಾರ್ಡ್ ಆಫರ್ ಪಡೆಯುತ್ತಾರೆ. ಇದಲ್ಲದೇ, EMI ವಹಿವಾಟಿನ ಮೇಲೆ ಬಳಕೆದಾರರಿಗೆ 1,250 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತಿದೆ.  ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಖರೀದಿಸಬೇಕಾದರೆ ಕನಿಷ್ಠ 5,000 ರೂ. ವ್ಯಯಿಸಬೇಕಾಗುತ್ತದೆ. ಹೀಗಾದರೆ ಮಾತ್ರ  ಆಫರ್ ಲಾಭವನ್ನು ಪಡೆಯಬಹುದು. ಇದಲ್ಲದೇ, 1,500 ರೂ.ವರೆಗಿನ ವಿಶೇಷ ಬೋನಸ್ ಕೊಡುಗೆಯೂ ಇರುತ್ತದೆ.

ಇದನ್ನೂ ಓದಿ : Smartwatch Offer: 6000 ರೂ. ಸ್ಮಾರ್ಟ್ ವಾಚ್ ಕೇವಲ 2000 ರೂ. ಗೆ ಲಭ್ಯ

ಇತರ ಉತ್ಪನ್ನಗಳ ಮೇಲೆ ಕೊಡುಗೆಗಳು :
Amazon Great Freedom Festival Sale 2022 ರಲ್ಲಿ , SBI ಕಾರ್ಡ್‌ಗಳೊಂದಿಗೆ ಟಿವಿ, ಫ್ರಿಜ್‌  ಮುಂತಾದ ದೊಡ್ಡ ಗೃಹೋಪಯೋಗಿ ಉಪಕರಣಗಳ ಮೇಲೆ ು 500 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗಲಿದೆ. 30,000 ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಡ್ ವೆಚ್ಚದಲ್ಲಿ ಈ ಕೊಡುಗೆ ಲಭ್ಯವಿರುತ್ತದೆ. 5,000 ರೂಪಾಯಿಗಳ ದಿನಸಿ ಖರೀದಿಸಿದರೆ 300 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗುತ್ತದೆ. ಅಲ್ಲದೆ, 1,500 ರೂ.ಗಳ ಬೋನಸ್ ಕೊಡುಗೆಯನ್ನು ನೀಡಲಾಗುವುದು. EMI ವಹಿವಾಟಿನ ಮೇಲೆ 1,500 ರೂ.ಗಳ ರಿಯಾಯಿತಿ ಸಿಗಲಿದೆ. ಅಲ್ಲದೆ, 1,500 ರೂ.ಗಳ ಬೋನಸ್ ರಿಯಾಯಿತಿ ಇರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News