Realme P1 Pro: ಈ ಸ್ಮಾರ್ಟ್‌ಫೋನ್‌ ಮೇಲೆ ₹5,000 ಡಿಸ್ಕೌಂಟ್, ಇಂದೇ ಖರೀದಿಸಿ

Realme P1 Pro ಫೋನ್ 6.7 ಇಂಚಿನ(17.02 cm) FHD+ OLED ಕರ್ವ್ ಡಿಸ್ಪ್ಲೇ ಹೊಂದಿದೆ. ಫೋನ್ 120Hz ರಿಫ್ರೆಶ್ ರೇಟ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್ಡ್ರಾಗನ್ 6 Gen 1 5G Processor ಹೊಂದಿದೆ. ಇದು ಆಂಡ್ರಾಯ್ಡ್ 14OSನಲ್ಲಿ ಕಾರ್ಯನಿರ್ವಹಿಸಲಿದೆ.

Written by - Puttaraj K Alur | Last Updated : Jun 2, 2024, 05:13 PM IST
  • ಭಾರತೀಯ ಮಾರುಕಟ್ಟೆಗೆ Realme P1 ಮತ್ತು Realme P1 Pro ಬಿಡುಗಡೆ
  • 20,000 ರೂ.ಗಿಂತ ಕಡಿಮೆಯಿರುವ ವಿಭಾಗದಲ್ಲಿ ಉತ್ತಮ ವೈಶಿಷ್ಟ್ಯ ಹೊಂದಿರುವ ಫೋನ್‌
  • ಈ ಎರಡೂ ಸ್ಮಾರ್ಟ್‌ಫೋನ್‌ಗಳ ಖರೀದಿಯ ಮೇಲೆ 5 ಸಾವಿರ ರೂ.ಗಳ ಭರ್ಜರಿ ಡಿಸ್ಕೌಂಟ್‌
Realme P1 Pro: ಈ ಸ್ಮಾರ್ಟ್‌ಫೋನ್‌ ಮೇಲೆ ₹5,000 ಡಿಸ್ಕೌಂಟ್, ಇಂದೇ ಖರೀದಿಸಿ title=
Realme P1 Pro

Realme P1 Pro Smartphones: ದೇಶದ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ Realmeಯು ಏಪ್ರಿಲ್ 15ರಂದು ಭಾರತೀಯ ಮಾರುಕಟ್ಟೆಗೆ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು. Realme P1 ಮತ್ತು Realme P1 Pro ಭಾರತೀಯ ಗ್ರಾಹಕರಿಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.

ಕೇವಲ 20,000 ರೂ.ಗಿಂತ ಕಡಿಮೆಯಿರುವ ವಿಭಾಗದಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಈ ಫೋನ್‌ಗಳನ್ನು ಪರಿಚಯಿಸಲಾಗಿದೆ. ಈಗ ಫ್ಲಿಪ್‌ಕಾರ್ಟ್‌ನಲ್ಲಿ Realme P1 Pro(8 GB RAM, 128 GB ROM)ನ ಖರೀದಿಯ ಮೇಲೆ ಶೇ.20ರಷ್ಟು ರಿಯಾಯಿತಿ ಲಭ್ಯವಿದೆ. ಅಂದರೆ ನಿಮಗೆ 5 ಸಾವಿರ ರೂ.ಗಳ ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತಿದೆ. 

ಇದನ್ನೂ ಓದಿ: Electric Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್!

Realme P1 Pro ವೈಶಿಷ್ಟ್ಯಗಳು

Realme P1 Pro ಫೋನ್ 6.7 ಇಂಚಿನ(17.02 cm) FHD+ OLED ಕರ್ವ್ ಡಿಸ್ಪ್ಲೇ ಹೊಂದಿದೆ. ಫೋನ್ 120Hz ರಿಫ್ರೆಶ್ ರೇಟ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್ಡ್ರಾಗನ್ 6 Gen 1 5G Processor ಹೊಂದಿದೆ. ಇದು ಆಂಡ್ರಾಯ್ಡ್ 14OSನಲ್ಲಿ ಕಾರ್ಯನಿರ್ವಹಿಸಲಿದೆ. Realme P1 Proನಲ್ಲಿ ನೀವು 50MP ಪ್ರಾಥಮಿಕ ಕ್ಯಾಮೆರಾ ಇದ್ದು, ಇದು Sony LYT-600 ಸೆನ್ಸಾರ್‌ನೊಂದಿಗೆ ಬರುತ್ತದೆ. 8MP ಅಲ್ಟ್ರಾ ವೈಡ್ ಕ್ಯಾಮೆರಾ ಕೂಡ ಲಭ್ಯವಿದೆ. ಇದಲ್ಲದೆ ಈ ಫೋನ್‌ನಲ್ಲಿ 16MP ಸೆಲ್ಫಿ ಕ್ಯಾಮೆರಾ ಸಹ ಲಭ್ಯವಿದೆ. ಈ ಫೋನ್ 5000mAh ಬ್ಯಾಟರಿಯನ್ನು ಸಹ ಹೊಂದಿದ್ದು, ಇದು 45W SUPERVOOC ಚಾರ್ಜಿಂಗ್‌ನೊಂದಿಗೆ ಬರುತ್ತದೆ.

Realme P1 Pro 5G ಬೆಲೆ & ಆಫರ್  

Realme P1 Pro 5Gಯನ್ನು realme.com ಮತ್ತು Flipkartನಲ್ಲಿ ಮಾರಾಟ ಮಾಡಲಾಗುತ್ತದೆ. ನೀವು ಈ ಫೋನ್‌ನ 8GB + 128GB ಮತ್ತು 8GB + 256GB ರೂಪಾಂತರಗಳನ್ನು 5 ಸಾವಿರ ರೂ.ಗಳ ನೇರ ರಿಯಾಯಿತಿಯಲ್ಲಿ ಖರೀದಿಸಬಹುದು. ಇದಲ್ಲದೇ ಈ ಫೋನ್‌ಗಳ ಮೇಲೆ ಬ್ಯಾಂಕ್‌ ಆಫರ್‌ ಕೂಡ ಲಭ್ಯವಿದೆ. ಹೀಗಾಗಿ ನೀವು ಅತ್ಯಂತ ಕಡಿಮೆ ಬೆಲೆಗೆ ಈ ಫೋನ್‌ಗಳನ್ನು ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ಅನ್ನು ನೀವು ಮಾಸಿಕ 739 ರೂ.ಗಳ EMI ಮೂಲಕವೂ ಖರೀದಿಸಬಹುದು. ಅತ್ಯಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್‌ಅನ್ನು ಖರೀದಿಸಬಹುದು. 

ಇದನ್ನೂ ಓದಿ: ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News