ನೀವು Google Chrome ಬಳಸುತ್ತಿದ್ದರೆ ಈ ಸುದ್ದಿಯನ್ನು ಈಗಲೇ ಓದಿ: ಇಲ್ಲದಿದ್ದರೆ ದೊಡ್ಡ ನಷ್ಟವಾಗಬಹುದು!

ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ಗೂಗಲ್ ಕ್ರೋಮ್‌ನ ಕೆಲವು ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಹಲವಾರು ಭದ್ರತಾ ದೋಷಗಳನ್ನು ಎತ್ತಿ ತೋರಿಸಿದೆ. ಬಳಕೆದಾರರ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಲು ಹ್ಯಾಕರ್‌ಗಳು ಈ ದೋಷಗಳ ಲಾಭವನ್ನು ಪಡೆಯಬಹುದು ಎಂದು ತಂಡ ಹೇಳುತ್ತದೆ.

Written by - Bhavishya Shetty | Last Updated : Oct 1, 2022, 09:44 PM IST
    • ಗೂಗಲ್ ಕ್ರೋಮ್‌ನ ಕೆಲವು ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಹಲವಾರು ಭದ್ರತಾ ದೋಷಗಳನ್ನು ಕಂಡುಬಂದಿವೆ
    • ಕ್ರೋಮ್ ಬಳಕೆಯು ಅಪಾಯಕಾರಿ ಎಂದು ಸಾಬೀತು!
    • ಎಂದು ರಾಷ್ಟ್ರೀಯ ಸೈಬರ್ ಏಜೆನ್ಸಿ ಸಿಇಆರ್‌ಟಿ-ಇನ್ ಹೇಳಿಕೆ
ನೀವು Google Chrome ಬಳಸುತ್ತಿದ್ದರೆ ಈ ಸುದ್ದಿಯನ್ನು ಈಗಲೇ ಓದಿ: ಇಲ್ಲದಿದ್ದರೆ ದೊಡ್ಡ ನಷ್ಟವಾಗಬಹುದು! title=
Google Chrome

ಜನಪ್ರಿಯ ಸರ್ಚ್ ಬ್ರೌಸರ್ ಗೂಗಲ್ ಕ್ರೋಮ್ ಬಳಕೆಗೆ ಸಂಬಂಧಿಸಿದಂತೆ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಗೂಗಲ್ ಕ್ರೋಮ್ ಬಳಕೆಯು ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ರಾಷ್ಟ್ರೀಯ ಸೈಬರ್ ಏಜೆನ್ಸಿ ಸಿಇಆರ್‌ಟಿ-ಇನ್ ಹೇಳಿದೆ.

ಇದನ್ನೂ ಓದಿ:  ಶನಿಯ ಕೃಪೆಯಿಂದ ರೂಪುಗೊಳ್ಳಲಿದೆ 'ಅಖಂಡ ಸಾಮ್ರಾಜ್ಯ ರಾಜಯೋಗ' ಈ ಮೂರು ರಾಶಿಯವರಿಗೆ ಅದೃಷ್ಟ

ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ಗೂಗಲ್ ಕ್ರೋಮ್‌ನ ಕೆಲವು ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಹಲವಾರು ಭದ್ರತಾ ದೋಷಗಳನ್ನು ಎತ್ತಿ ತೋರಿಸಿದೆ. ಬಳಕೆದಾರರ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಲು ಹ್ಯಾಕರ್‌ಗಳು ಈ ದೋಷಗಳ ಲಾಭವನ್ನು ಪಡೆಯಬಹುದು ಎಂದು ತಂಡ ಹೇಳುತ್ತದೆ.

ನೀವು ಈ ಕ್ರೋಮ್ ಬ್ರೌಸರ್ ಅನ್ನು ಬಳಸುತ್ತಿದ್ದರೆ ಜಾಗರೂಕರಾಗಿರಿ ಇಲ್ಲದಿದ್ದರೆ ಹ್ಯಾಕರ್‌ಗಳು ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳನ್ನು ಹೊರತೆಗೆಯಬಹುದು ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು.

CERT-In ವರದಿ ಏನು ಹೇಳುತ್ತದೆ?

-Google Chrome 106.0.5249.61 ಮತ್ತು ಮೇಲಿನ ಆವೃತ್ತಿಯನ್ನು ಬಳಸುವುದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

-Mac/linux ಮತ್ತು windows 106.0.5249.61/62 ಆವೃತ್ತಿಯು ಭದ್ರತಾ ದೃಷ್ಟಿಯಿಂದ ಉತ್ತಮವಾಗಿಲ್ಲ.

 

ಹ್ಯಾಕರ್‌ಗಳನ್ನು ತಪ್ಪಿಸಲು ಏನು ಮಾಡಬೇಕು?

ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಬಳಕೆದಾರರಿಗಾಗಿ ಗೂಗಲ್ ಕ್ರೋಮ್ 106 ನ ಸ್ಥಿರ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

- Chrome ನ ಸ್ಥಿರ ಆವೃತ್ತಿ ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ

- Chrome 106.0.5249.61 (Mac/linux) ಮತ್ತು 106.0.5249.61/62 (Windows) ನ ಸ್ಥಿರ ಮತ್ತು ಸುಧಾರಿತ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದೆ.

-Google Chrome ಬ್ರೌಸರ್ ಅನ್ನು ಅಪ್ಡೇಟ್ ಮಾಡಿ. ಅಪ್ಡೇಟ್ ಗಳು ಬಂದಂತೆ ನಿರ್ಲಕ್ಷಿಸಬೇಡಿ.

Google Chrome ಬಳಸುವಾಗ ಯಾವುದೇ ನಕಲಿ ಲಿಂಕ್‌ಗಳು ಅಥವಾ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಬೇಡಿ.

ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಯಾವುದೇ ವೆಬ್‌ಸೈಟ್‌ನಲ್ಲಿ ಉಳಿಸಬೇಡಿ.

ಇದನ್ನೂ ಓದಿ: Astro Tips: ಈ ಅಂಗಗಳ ಸೆಳೆತ ನಿಮ್ಮ ಜೀವನದಲ್ಲಿ ಮುಂಬರುವ ಘಟನೆಗಳ ಸಂಕೇತ.!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News