ಹೀಗೆ ಮಾಡಿದರೆ ಕ್ಷಣಾರ್ಧದಲ್ಲಿ ಹೆಚ್ಚಿಸಬಹುದು ಮೊಬೈಲ್ ಸ್ಟೋರೇಜ್

ಕೇವಲ  ಒಂದು ಸಾವಿರ ರೂಪಾಯಿಗಿಂತ ಕಡಿಮೆ ಖರ್ಚಿನಲ್ಲಿ ಸ್ಮಾರ್ಟ್‌ಫೋನ್‌ನ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಟ್ರಿಕ್ ಒಂದಿದೆ.  

Written by - Ranjitha R K | Last Updated : Nov 21, 2021, 02:01 PM IST
  • ಸ್ಮಾರ್ಟ್ ಪೋನ್ ಅಥವಾ ಟ್ಯಾಬ್ ಮೊಮೊರಿ ಹೆಚ್ಚಿಸುವುದು ಹೇಗೆ?
  • SanDisk ಪೆನ್ ಡ್ರೈವ್ ಬಳಸಬಹುದು
  • ಸಾವಿರ ರೂಪಾಯಿಗಿಂತಕಡಿಮೆ ವೆಚ್ಚದಲ್ಲಿ ಆಗಿ ಹೋಗುತ್ತದೆ ಕೆಲಸ
ಹೀಗೆ ಮಾಡಿದರೆ ಕ್ಷಣಾರ್ಧದಲ್ಲಿ ಹೆಚ್ಚಿಸಬಹುದು ಮೊಬೈಲ್ ಸ್ಟೋರೇಜ್  title=
ಸ್ಮಾರ್ಟ್ ಪೋನ್ ಅಥವಾ ಟ್ಯಾಬ್ ಮೊಮೊರಿ ಹೆಚ್ಚಿಸುವುದು ಹೇಗೆ? (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ನಮ್ಮ ಹೆಚ್ಚಿನ ಕೆಲಸಗಳು ಸ್ಮಾರ್ಟ್‌ಫೋನ್‌ನಲ್ಲಿಯೇ (Smartphone) ಆಗಿ ಬಿಡುತ್ತವೆ. ಆದರೆ ಇದಕ್ಕಾಗಿ ಸ್ಮಾರ್ಟ್ ಫೋನ್ ಉತ್ತಮ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವುದು ಅವಶ್ಯಕ. ನಾವು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಶಾಲೆ ಮತ್ತು ಕಚೇರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತೇವೆ. ಅಲ್ಲದೆ, ಇದರ ಜೊತೆಗೆ  ಫೋಟೋಗಳು ಮತ್ತು ವೀಡಿಯೊಗಳು ಕೂಡಾ ಮೊಬೈಲ್ ನಲ್ಲಿ ತುಂಬಿಕೊಳ್ಳುತ್ತವೆ.  ಮೊಬೈಲ್ ಅಪ್ಲಿಕೇಶನ್‌ಗಳು (Mobile app) ಸಹ ಸಾಕಷ್ಟು ಜಾಗವನ್ನು ಆಕ್ರಮಿಸಿಬಿಡುತ್ತವೆ. ಹೀಗಾಗಿ ಫೋನ್‌ನ ಮೆಮೊರಿಯನ್ನು (Phone menory) ತುಂಬಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ಕೇವಲ  ಒಂದು ಸಾವಿರ ರೂಪಾಯಿಗಿಂತ ಕಡಿಮೆ ಖರ್ಚಿನಲ್ಲಿ ಸ್ಮಾರ್ಟ್‌ಫೋನ್‌ನ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಟ್ರಿಕ್ ಒಂದಿದೆ. 
 
ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಆಗಲಿದೆ ಕೆಲಸ : 
ನಿಮ್ಮ ಸ್ಮಾರ್ಟ್‌ಫೋನ್ (Smartphone) ಅಥವಾ ಟ್ಯಾಬ್ಲೆಟ್‌ನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾದರೆ, ಅದಕ್ಕಾಗಿ ನೀವು ಸ್ಯಾನ್‌ಡಿಸ್ಕ್ ಅಲ್ಟ್ರಾ ಡ್ಯುಯಲ್ ಡ್ರೈವ್ (SanDisk Pen Drive) ಅನ್ನು ಬಳಸಬಹುದು. ಇದೊಂದು ಪೆನ್ ಡ್ರೈವ್ ಆಗಿದ್ದು, ಎರಡು ರೂಪಾಂತರಗಳಲ್ಲಿ ಖರೀದಿಸಬಹುದು. 32GB ಮತ್ತು 64GB ಇಂಟರ್ ನೆಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಇದು ನಾಲ್ಕು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪೆನ್ ಡ್ರೈವ್‌ನ 32GB ರೂಪಾಂತರವನ್ನು ಸುಮಾರು 650 ರೂಗಳಿಗೆ ಲಭ್ಯವಿದ್ದರೆ, 64GB ರೂಪಾಂತರದ ಬೆಲೆ ಸುಮಾರು 850 ರೂ. ಆಗಿರುತ್ತದೆ. 

ಇದನ್ನೂ ಓದಿ : Realme 5G Smartphone: ಕಡಿಮೆ ಬೆಲೆಯಲ್ಲಿ ಖರೀದಿಸಿ Realme 5G ಸ್ಮಾರ್ಟ್‌ಫೋನ್, ಭರ್ಜರಿ ಆಫರ್ ಲಭ್ಯ

ಹೇಗಿರುತ್ತದೆ ಈ ಪೆನ್ ಡ್ರೈವ್?
ಈ ಪ್ಲಾಸ್ಟಿಕ್ ಪೆನ್ ಡ್ರೈವ್‌ನ ಹಿಂಭಾಗವು ಕೊಂಡಿಯಂತಿದ್ದು, ಇದರಲ್ಲಿ ನೀವು ಯಾವುದೇ ಥ್ರೆಡ್ ಅನ್ನು ಸೇರಿಸಬಹುದು. ಯುಎಸ್‌ಬಿ ಭಾಗವನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ ಮತ್ತು ಟೈಪ್ ಸಿ ಕನೆಕ್ಟರ್ ಭಾಗವನ್ನು ಹಾಗೆಯೇ ಬಿಡಲಾಗಿದೆ. ಈ ಪೆನ್ ಡ್ರೈವ್ ಅನ್ನು ಪ್ಲಾಸ್ಟಿಕ್‌ನಿಂದ ಮಾಡಲಾಗಿದ್ದರೂ, ಇದು ಸಾಕಷ್ಟು ಪ್ರಬಲವಾಗಿದೆ.  

ಯಾವ ಸಾಧನಗಳಿಗೆ ಬಳಸಬಹುದು ?
USB ಪೋರ್ಟ್ ಅಥವಾ ಟೈಪ್ C ಪೋರ್ಟ್ ಹೊಂದಿರುವ ಎಲ್ಲಾ ಸಾಧನಗಳೊಂದಿಗೆ ಈ ಪೆನ್ ಡ್ರೈವ್ ಅನ್ನು ಬಳಸಬಹುದು. Android, Windows OS, Mac OS ಮತ್ತು Linux ಸಾಧನಗಳಲ್ಲಿ ಬಳಸಬಹುದು.  ಈ ಪೆನ್ ಡ್ರೈವ್ ಅನ್ನು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗೆ ಪ್ಲಗ್ ಮಾಡಿ ನಂತರ ಫೈಲ್‌ಗಳನ್ನು ಆಕ್ಸೆಸ್ ಮಾಡಬೇಕು. ನಿಮ್ಮ ಫೋನ್‌ನ ಫೈಲ್‌ಗಳನ್ನು ಈ ಪೆನ್ ಡ್ರೈವ್‌ಗೆ ವರ್ಗಾಯಿಸುವ ಮೂಲಕ ನೀವು ಸ್ಟೋರೇಜ್ ಅನ್ನು ಹೆಚ್ಚಿಸಬಹುದು.

ಇದನ್ನೂ ಓದಿ : Knowledge Story: ಬಾವಿ ವೃತ್ತಾಕಾರದಲ್ಲಿಯೇ ಏಕೆ ಇರುತ್ತದೆ, ಇದರ ಹಿಂದಿನ ವಿಜ್ಞಾನ ನಿಮಗೆ ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News