Mahindra Upcoming Electric SUVs : ಮಹೀಂದ್ರಾ ಕಳೆದ ವರ್ಷ ಆಗಸ್ಟ್‌ನಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ನ್ಯೂ ಬಾರ್ನ್ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳನ್ನು ಪ್ರದರ್ಶಿಸಿತು. XUV.e ಮತ್ತು BE ಸಬ್ ಬ್ರಾಂಡ್‌ಗಳ ಅಡಿಯಲ್ಲಿ ಕಂಪನಿಯು 5 ಹೊಸ ಎಲೆಕ್ಟ್ರಿಕ್ SUVಗಳನ್ನು ಪ್ರದರ್ಶಿಸಿದೆ. UKಯ ಆಕ್ಸ್‌ಫರ್ಡ್‌ಶೈರ್‌ನಲ್ಲಿರುವ ಮಹೀಂದ್ರಾದ ಎಂಎಡಿಇ ವಿನ್ಯಾಸ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಲಾದ ಹೊಸ ಮಹೀಂದ್ರಾ ಎಲೆಕ್ಟ್ರಿಕ್ SUV ಶ್ರೇಣಿಯನ್ನು ಫೆಬ್ರವರಿ 10 ರಂದು ಭಾರತದಲ್ಲಿ ಪ್ರದರ್ಶಿಸಲಾಗುವುದು. ಇವುಗಳಲ್ಲಿ XUV.e8, XUV.e9, BE.05, BE.07 ಮತ್ತು BE.09 ಮಾದರಿಗಳು ಸೇರಿವೆ.
ಮಹೀಂದ್ರ XUV.E8 ಮತ್ತು XUV.E9 :
ಪ್ರೊಡಕ್ಷನ್ ಲೈನ್ ಪ್ರವೇಶಿಸುವ ಮೊದಲ ಮಹೀಂದ್ರಾ ಬಾರ್ನ್ ಎಲೆಕ್ಟ್ರಿಕ್ ಮಾದರಿ ಕಾರು XUV.e8 ಆಗಿರಲಿದೆ. ಇದನ್ನು ಡಿಸೆಂಬರ್ 2024 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಇದರ ನಂತರ XUV.e9 ಬರಲಿದೆ. ಎರಡೂ SUVಗಳು INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ. ಇದು ಬಾರ್ನ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಆಗಿದೆ. XUV.e8 ನ ಮೂಲ ವಿನ್ಯಾಸ ಸಿಲೂಯೆಟ್ ಮಹೀಂದ್ರ XUV700ನಂತೆಯೇ ಇರುತ್ತದೆ. XUV.e8 4740mm ಉದ್ದ, 1900mm ಅಗಲ ಮತ್ತು 1760mm ಎತ್ತರ ಇರುತ್ತದೆ. ಇದರ ವ್ಹೀಲ್ ಬೇಸ್ 2,762 ಎಂಎಂ ಆಗಿರುತ್ತದೆ.
ಇದನ್ನೂ ಓದಿ : ಬೇಸಿಗೆಗೂ ಮೊದಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಅಗ್ಗದ Split AC
ಇದು XUV700 ಗಿಂತ ಸುಮಾರು 45 ಎಂಎಂ ಉದ್ದ, 10 ಎಂಎಂ ಅಗಲ ಮತ್ತು 5 ಎಂಎಂ ಎತ್ತರವಾಗಿರುತ್ತದೆ . ಅದರ ವೀಲ್‌ಬೇಸ್ 7 ಎಂಎಂ ನಷ್ಟು ಅಧಿಕಾವಗಿರುತ್ತದೆ. ಮಹೀಂದ್ರಾ XUV.e9 ಕೂಪ್ ತರಹದ ವಿನ್ಯಾಸದೊಂದಿಗೆ ಬರಲಿದೆ. ಇದನ್ನು ಏಪ್ರಿಲ್ 2025 ರ ವೇಳೆಗೆ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ. ಇದು 4790 ಎಂಎಂ ಉದ್ದ, 1905 ಎಂಎಂ ಅಗಲ ಮತ್ತು 1690 ಎಂಎಂ ಎತ್ತರ ಇರಲಿದೆ. ಇದು 5-ಸೀಟರ್ ಮಾಡೆಲ್ ಆಗಿರುತ್ತದೆ ಮತ್ತು 2775mm ಉದ್ದದ ವೀಲ್‌ಬೇಸ್‌ನೊಂದಿಗೆ ಬರಲಿದೆ.
ಮಹೀಂದ್ರ ಬಿಇ ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳು :
ಮಹೀಂದ್ರ BE.05 ಅನ್ನು ಸ್ಪೋರ್ಟ್ಸ್ ಎಲೆಕ್ಟ್ರಿಕ್ ವಾಹನವಾಗಿ ಮಾರಾಟ ಮಾಡಲಾಗುವುದು. ಇದರ ಉದ್ದ 4370mm, ಅಗಲ 1900mm ಮತ್ತು ಎತ್ತರ 1635mm. ಇದರ ವ್ಹೀಲ್ ಬೇಸ್ 2775 ಎಂಎಂ ಆಗಿರಲಿದೆ. ಆದರೆ, ಮಹೀಂದ್ರ BE.07 4565mm ಉದ್ದ, 1,900mm ಅಗಲ ಮತ್ತು 1,660mm ಎತ್ತರವಿರಲಿದೆ. ಇದರ ವ್ಹೀಲ್ ಬೇಸ್ ಕೂಡಾ 2,775 ಎಂಎಂ. ಮಹೀಂದ್ರ BE.09 ಸಹ INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
ಇದನ್ನೂ ಓದಿ : ಬರಲಿದೆ ಹೊಸ ವೈಶಿಷ್ಟ್ಯ: ಇನ್ನೂ ಸುಲಭವಾಗಲಿದೆ ವಾಟ್ಸಾಪ್ ಕಾಲಿಂಗ್
ಟಾಟಾ ವಾಹನಗಳೊಂದಿಗೆ ಸ್ಪರ್ಧೆ :
ಪ್ರಸ್ತುತ, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಪ್ರಾತಿನಿಧ್ಯ ಹೊಂದಿದೆ. ಟಾಟಾ ಮೋಟಾರ್ಸ್ ಅತಿ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಕಂಪನಿಯಾಗಿದೆ. ಆದರೆ ಮಹೀಂದ್ರಾದ ಈ ಕಾರುಗಳ ಆಗಮನದ ನಂತರ ಟಾಟಾ ಮೋಟಾರ್ಸ್ ಕಠಿಣ ಸ್ಪರ್ಧೆಯನ್ನು ಎದುರಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.