Car Safety Tips: ನಿಮ್ಮ ದುಬಾರಿ ಕಾರುಗಳನ್ನು ಸುರಕ್ಷಿತವಾಗಿರಿಸಲು ಅಥವಾ ಕಳುವಾಗದಂತೆ ರಕ್ಷಿಸಲು ಮಾರುಕಟ್ಟೆಯಲ್ಲಿ ಹಲವು ರೀತಿಯ ಆಂಟಿ ಥೆಫ್ಟ್ ಸಾಧನಗಳು ಲಭ್ಯವಿದ್ದು ಅವುಗಳ ಬಳಕೆಯಿಂದ ನಿಮ್ಮ ಕಾರನ್ನು ಕಳ್ಳತನದಿಂದ ರಕ್ಷಿಸಬಹುದು. ಹೌದು, ನಿಮ್ಮ ಬೆಲೆ ಬಾಳುವ ಕಾರುಗಳನ್ನು ಕಳ್ಳತನವಾಗದಂತೆ ರಕ್ಷಿಸಲು ಒಂದು ಸಣ್ಣ ಡಿವೈಸ್ ನಿಮಗೆ ಸಹಕಾರಿ ಆಗಲಿದೆ. ಅದರ ವಿಶೇಷತೆ ಎಂದರೆ ಅದಕ್ಕಾಗಿ ನೀವು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವೂ ಇಲ್ಲ. ಕೈಗೆಟುಕುವ ದರದಲ್ಲಿ ಸುಲಭವಾಗಿ ಈ ಸಾಧನವನ್ನು ಖರೀದಿಸಬಹುದಾಗಿದೆ.
ಆಂಟಿ ಥೆಫ್ಟ್ ಸಾಧನಗಳು:
ವಾಸ್ತವವಾಗಿ, ಮಾರುಕಟ್ಟೆಯಲ್ಲಿ ಹಲವು ರೀತಿಯ ಆಂಟಿ ಥೆಫ್ಟ್ ಡಿವೈಸ್ ಗಳು ಲಭ್ಯವಿದೆ. ಅವುಗಳು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿವೆ. ಸಾಮಾನ್ಯವಾಗಿ, ಈ ಆಂಟಿ ಥೆಫ್ಟ್ ಸಾಧನಗಳು 1200 ರಿಂದ 1500ರೂ. ಗಳಲ್ಲಿ ಲಭ್ಯವಾಗುತ್ತವೆ. ಆದಾಗ್ಯೂ, ಬ್ರಾಂಡ್ ಗೆ ಅನುಗುಣವಾಗಿ ಅವುಗಳ ಬೆಲೆ ಬದಲಾಗಬಹುದು. ನೀವು ಈ ಡಿವೈಸ್ ಅನ್ನು ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಸುಲಭವಾಗಿ ಖರೀದಿಸಬಹುದು.
ಇದನ್ನೂ ಓದಿ- Maruti Dzire Airbags: 70 ಕಿಮೀ ವೇಗದಲ್ಲಿ ಅಪಘಾತಕ್ಕೀಡಾದರೂ ತೆರೆಯದ Maruti Dzire ಏರ್ ಬ್ಯಾಗ್: ಕಂಪನಿ ಹೇಳಿದ್ದೇನು?
ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ನಿಮ್ಮ ಅಗತ್ಯತೆಗೆ ಅನುಗುಣವಾಗಿ ನೀವು ಆಂಟಿ ಥೆಫ್ಟ್ ಡಿವೈಸ್ ಗಳನ್ನು ಖರೀದಿಸಬಹುದು. ಆದರೂ, ಇಂತಹ ಸಾಧನಗಳನ್ನು ಖರೀದಿಸುವ, ಬಳಸುವ ಮೊದಲು ಅವು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಉದಾಹರಣೆಗೆ, ಇ-ಕಾಮರ್ಸ್ ವೆಬ್ಸೈಟ್ ಅಮೆಜಾನ್ ನಲ್ಲಿ SeTrack ಕಂಪನಿಯ ಆಂಟಿ ಥೆಫ್ಟ್ ಡಿವೈಸ್ 1,599 ರೂ.ಗಳಿಗೆ ಲಭ್ಯವಿದೆ.
ಆಂಟಿ ಥೆಫ್ಟ್ ಡಿವೈಸ್ ವೈಶಿಷ್ಟ್ಯಗಳು:-
>> ಆಂಟಿ ಥೆಫ್ಟ್ ಡಿವೈಸ್ ಎಂಜಿನ್ ಲಾಕ್, ಜಿಪಿಎಸ್ ಟ್ರ್ಯಾಕರ್ ಮತ್ತು ಆಂಟಿ ಥೆಫ್ಟ್ ಅಲಾರಂನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ವೆಬ್ಸೈಟ್ ಮಾಹಿತಿ ಹಂಚಿಕೊಂಡಿದೆ.
>> ಇದರ ಮತ್ತೊಂದು ವೈಶಿಷ್ಟ್ಯವೆಂದರೆ, ಇದನ್ನು Android ಮತ್ತು iOS ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಸುಲಭವಾಗಿ ಹೊಂದಿಸಬಹುದಾಗಿದ್ದು ಈ ಸಾಧನದ ಅಪ್ಲಿಕೇಶನ್ನೊಂದಿಗೆ ನಿಮ್ಮ ಕಾರಿನ ಎಂಜಿನ್ ಅನ್ನು ನೀವು ಲಾಕ್ ಮಾಡಬಹುದಾಗಿದೆ.
>> ಈ ರೀತಿ ಮಾಡುವುದರಿಂದ ಯಾರೂ ಕೂಡ ನಿಮ್ಮ ಅನುಮತಿಯಿಲ್ಲದೆ ನಿಮ್ಮ ಕಾರನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ.
>> ಕಾರನ್ನು ನಿಲ್ಲಿಸಿದ ನಂತರ ನೀವು ಸಾಧನದ ಕೀ ಅಪ್ಲಿಕೇಶನ್ನೊಂದಿಗೆ ಎಂಜಿನ್ ಅನ್ನು ಲಾಕ್ ಮಾಡಬಹುದು.
ಇದನ್ನೂ ಓದಿ- ಮನೆಯಲ್ಲಿ ಈ ಡಿವೈಸ್ ಅಳವಡಿಸಿದರೆ ವರ್ಷವಿಡೀ ಕರೆಂಟ್ ಬಿಲ್ ಬರೋದೇ ಇಲ್ಲ!
ಕೆಲವು ಆಂಟಿ ಥೆಫ್ಟ್ ಡಿವೈಸ್ ಗಳಲ್ಲಿ ನೀವು ಕಾರಿನ ಲೈವ್ ಲೋಕೇಶನ್ ಅನ್ನು ನೋಡಲು ಕೂಡ ಸಾಧ್ಯವಾಗುತ್ತದೆ. ಇಂತಹ ಸಾಧನಗಳ ಸಹಾಯದಿಂದ ನಿಮ್ಮ ಬೆಲೆ ಬಾಳುವ ಕಾರುಗಳನ್ನು ಕಳ್ಳರಿಂದ ರಕ್ಷಿಸಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.