ಈ ಟ್ರಿಕ್ ಬಳಸಿ, ನಿಮಗರಿವಿಲ್ಲದೆ ನಿಮ್ಮ ಫೋನ್ ಓಪನ್ ಮಾಡಿದವರು ಫೋಟೋ ಸಮೇತ ಸಿಕ್ಕಿ ಬೀಳುತ್ತಾರೆ !

Who touched my phone:ನಮ್ಮ ಅನುಪಸ್ಥಿತಿಯಲ್ಲಿ ಯಾರಾದರೂ ನಮ್ಮ ಫೋನ್ ತೆರೆದು ನೋಡಬಹುದು ಎನ್ನುವ ಭಯ ಯಾವಾಗಲೂ ಇರುತ್ತದೆ. ಆದರೆ ಇದೊಂದು ಟ್ರಿಕ್ ಮೂಲಕ ನಿಮ್ಮ ಫೋನ್ ಟಚ್ ಮಾಡಿದವರು ಯಾರು ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. 

Written by - Ranjitha R K | Last Updated : Aug 28, 2024, 12:52 PM IST
  • ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ.
  • ನಮ್ಮ ಜೀವನದ ಪ್ರತಿಯೊಂದು ರಹಸ್ಯವೂ ಫೋನ್‌ನಲ್ಲಿ ಅಡಗಿರುತ್ತದೆ.
  • ಯಾರಾದರೂ ಓಪನ್ ಮಾಡಿದ್ದಾರೆಯೇ ಎಂದು ತಿಳಿದುಕೊಳ್ಳುವ ಒಂದು ಸಿಂಪಲ್ ಟ್ರಿಕ್
ಈ ಟ್ರಿಕ್ ಬಳಸಿ, ನಿಮಗರಿವಿಲ್ಲದೆ ನಿಮ್ಮ ಫೋನ್ ಓಪನ್ ಮಾಡಿದವರು ಫೋಟೋ ಸಮೇತ ಸಿಕ್ಕಿ ಬೀಳುತ್ತಾರೆ ! title=

Can I see who touched my phone?:ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ.ನಮ್ಮ ಜೀವನದ ಪ್ರತಿಯೊಂದು ರಹಸ್ಯವೂ ಫೋನ್‌ನಲ್ಲಿ ಅಡಗಿರುತ್ತದೆ. ಹೀಗಿರುವಾಗ ಯಾರಾದರೂ ಫೋನ್ ತೆರೆದು ಸಂದೇಶಗಳು ಅಥವಾ ಫೋಟೋಗಳನ್ನು ನೋಡಬಹುದು ಎನ್ನುವ ಭಯ ಕೂಡ ಕಾಡುತ್ತಿರುತ್ತದೆ.ಆದರೆ  ನಿಮ್ಮ ಫೋನ್ ಅನ್ನು ನಿಮಗೆ ಅರಿವಿಲ್ಲದೆ ಯಾರಾದರೂ ಓಪನ್ ಮಾಡಿದ್ದಾರೆಯೇ ಎಂದು ತಿಳಿದುಕೊಳ್ಳುವ ಒಂದು ಸಿಂಪಲ್ ಟ್ರಿಕ್  ಇಲ್ಲಿದೆ. 

ನಿಮಗೆ ಗೊತ್ತಿಲ್ಲದೇ ಯಾರೋ ನಿಮ್ಮ ಫೋನ್ ತೆಗೆದುಕೊಂಡಿದ್ದಾರೆ ಎನ್ನುವ ಅನುಮಾನ ನಿಮಗೆ ಬಂದರೆ ಅದು ಯಾರು ಎಂದು ತಿಳಿದುಕೊಳ್ಳುವುದು ಬಹಳ ಸುಲಭ. ಇದಕ್ಕಾಗಿ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.ಈ ಅಪ್ಲಿಕೇಶನ್‌ನೊಂದಿಗೆ ನಿಮ್ಮ ಫೋನ್ ಅನ್ನು ಯಾರು ಮುಟ್ಟಿದ್ದಾರೆ ಎನ್ನುವುದು ತಿಳಿಯುತ್ತದೆ. WTMP-Who touched my phone? ಎನ್ನುವ ಆಪ್ಲಿಕೇಶನ್ ಇದೆ. ಈ ಆಪ್  ಮೂಲಕ ನಿಮ್ಮ ಫೋನ್ ಮುಟ್ಟಿದವರು ಯಾರು ಎನ್ನುವುದನ್ನು ಫೋಟೋ ಸಮೇತ ತಿಳಿದುಕೊಳ್ಳಬಹುದು.

ಇದನ್ನೂ ಓದಿ : BSNL ಸಿಮ್ ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್‌ವರ್ಕ್ ಸಿಗುತ್ತಿದೆಯೇ ಎನ್ನುವುದನ್ನು ಈ ರೀತಿ ಪರಿಶೀಲಿಸಿ !

ಯಾರಾದರೂ ನಿಮ್ಮ ಫೋನ್ ಟಚ್ ಮಾಡಿದರೆ ಸಿಗುತ್ತದೆ ನೋಟಿಫಿಕೇಶನ್ : 
ಈ ಅಪ್ಲಿಕೇಶನ್ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿ ಇಡಲು ಸಹಾಯ ಮಾಡುತ್ತದೆ.ಯಾರಾದರೂ ನಿಮ್ಮ ಫೋನ್ ಅನ್ನು ಸ್ಪರ್ಶಿಸಿದರೆ ಅಥವಾ ಅದನ್ನು ತೆರೆಯಲು ಪ್ರಯತ್ನಿಸಿದರೆ, ನಿಮಗೆ ಗೊತ್ತಾಗುತ್ತದೆ. ಈ ಅಪ್ಲಿಕೇಶನ್ ಅನ್ನು ರನ್ ಮಾಡಲು ನೀವು ಅದನ್ನು ಓಪನ್ ಮಾಡಿ ಯಾವುದಾದರೊಂದು  ಬಟನ್ ಒತ್ತಬೇಕು. ನಂತರ ನೀವು ಅಪ್ಲಿಕೇಶನ್ ಅನ್ನು ಕ್ಲೋಸ್ ಮಾಡಿ ಫೋನ್ ಅನ್ನು ಲಾಕ್ ಮಾಡಬೇಕು.ಇದರ ನಂತರ,ಈ ಅಪ್ಲಿಕೇಶನ್ ನಿಮ್ಮ ಫೋನ್ ಮೇಲೆ ಕಣ್ಣಿಡಲು  ಆರಂಭಿಸುತ್ತದೆ. 

ಸಿದ್ಧಪಡಿಸುತ್ತದೆ ರಿಪೋರ್ಟ್ : 
ಫೋನ್ ಅನ್ನು ತೆರೆದ ನಂತರ ನಿಮಗೆ ಗೊತ್ತಿಲ್ಲದೇ ಯಾವ ಅಪ್ಲಿಕೇಶನ್‌ಗಳನ್ನು ತೆರೆದಿದ್ದಾರೆ ಎನ್ನುವುದನ್ನು ವಿವರವಾಗಿ ತಿಳಿಸುತ್ತದೆ.ಈ ಅಪ್ಲಿಕೇಶನ್ ತನ್ನ ಸಂಪೂರ್ಣ ವರದಿಯನ್ನು ಸಿದ್ಧಪಡಿಸುತ್ತದೆ. ಆ ರಿಪೋರ್ಟ್ ಅನ್ನು ನಿಮ್ಮ ಸೇವ್ ಮಾಡಿಟ್ಟುಕೊಳ್ಳಬಹುದು. 

ಇದನ್ನೂ ಓದಿ :  ರಾತ್ರಿ ಮೊಬೈಲ್ ನೋಡುತ್ತಲೇ ನಿದ್ದೆಗೆ ಜಾರುತ್ತೀರಾ ? ಹಾಗಿದ್ದರೆ ಈ ವಿಚಾರ ಕೂಡಾ ಗೊತ್ತಿರಲಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News