iPhone 13: 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 13 ಮನೆಗೆ ಕೊಂಡೊಯ್ಯಿರಿ! ಹೇಗೆಂದು ತಿಳಿಯಿರಿ

Croma Independence Day Sale ಪ್ರಯುಕ್ತ ನಿಮಗೆ iPhone 13 128GB ಮಾದರಿಯ ಫೋನ್‍ ಮೇಲೆ ಶೇ.11ರಷ್ಟು ರಿಯಾಯಿತಿ ಸಿಗುತ್ತಿದೆ.

Written by - Puttaraj K Alur | Last Updated : Aug 8, 2022, 09:19 PM IST
  • 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 13 ಖರೀದಿಸ ಮನೆಗೆ ಕೊಂಡೊಯ್ಯಿರಿ
  • Croma Independence Day Saleನಲ್ಲಿ iPhone 13 128GB ಮಾದರಿಯ ಫೋನ್‍ ಮೇಲೆ ಶೇ.11ರಷ್ಟು ರಿಯಾಯಿತಿ
  • Qik EMI ಕಾರ್ಡ್‌ ಬಳಸಿ ತಿಂಗಳಿಗೆ 2,958 ರೂ. ಪಾವತಿಸಿದರೆ ನಿಮ್ಮದಾಗುತ್ತೆ iPhone 13
iPhone 13: 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 13 ಮನೆಗೆ ಕೊಂಡೊಯ್ಯಿರಿ! ಹೇಗೆಂದು ತಿಳಿಯಿರಿ title=
iPhone 13 128GB SmartPhone

ನವದೆಹಲಿ: Appleನ ಪ್ರಮುಖ ಸ್ಮಾರ್ಟ್‌ಫೋನ್‌ನ ಹೊಸ ಸರಣಿ iPhone 14 ಮುಂಬರುವ ತಿಂಗಳು ಅಂದರೆ ಸೆಪ್ಟೆಂಬರ್ 2022ರಲ್ಲಿ ಬಿಡುಗಡೆಯಾಗಲಿದೆ. ಈ ಸರಣಿ ಫೋನ್ ಖರೀದಿಸಲು ಅನೇಕ ಜನರು ಕಾಯುತ್ತಿದ್ದಾರೆ. ಇದೀಗ ಅನೇಕ ಜನರು ಐಫೋನ್ 13 ಖರೀದಿಸಲು ಯೋಚಿಸುತ್ತಿದ್ದಾರೆ. ಒಂದು ವೇಳೆ iPhone 14 ಬಿಡುಗಡೆಯಾದರೆ iPhone 13 ಬೆಲೆ ಕೊಂಚ ಕಡಿಮೆಯಾಗಲಿದೆ. ನೀವು ಸಹ iPhone 13 ಖರೀದಿಸುವ ಯೋಚನೆಯಲ್ಲಿದ್ದರೆ ಇಲ್ಲಿದೆ ಗುಡ್ ನ್ಯೂಸ್. ಕೇವಲ 3 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ನೀವು iPhone 13ನ 128GB ಮಾದರಿಯ ಫೋನ್‍ಅನ್ನು ಮನೆಗೆ ಕೊಂಡೊಯ್ಯಬಹುದು. ಈ ಆಫರ್ ನಿಮಗೆ Amazon ಅಥವಾ Flipkartನಲ್ಲಿ ಸಿಗಲ್ಲ. ಹಾಗಾದರೆ ಈ ಆಫರ್‌ನ ಲಾಭವನ್ನು ಎಲ್ಲಿಂದ? ಹೇಗೆ ಪಡೆದುಕೊಳ್ಳಬೇಕೆಂದು ತಿಳಿದುಕೊಳ್ಳಿರಿ.

ಇಲ್ಲಿ ಕಡಿಮೆ ಬೆಲೆಗೆ iPhone 13 ಖರೀದಿಸಿ

ಈಗ ನಾವು ಹೇಳುತ್ತಿರುವ ಆಫರ್ ನಿಮಗೆ ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‍ನಲ್ಲಿ ಸಿಗಲ್ಲ. ನೀವು ಈ ಸ್ಮಾರ್ಟ್‌ಫೋನ್ ಅನ್ನು Cromaದಲ್ಲಿ ಖರೀದಿಸಬಹುದು. ಸ್ವಾತಂತ್ರ್ಯ ದಿನದ ಕೊಡುಗೆಯಾಗಿ Croma ಆನ್‍ಲೈನ್ ಸೈಟ್‍ನಲ್ಲಿ ನಿಮಗೆ ಈ ಆಫರ್ ಲಭ್ಯವಿದೆ. Croma Independence Day Sale ಪ್ರಯುಕ್ತ ನಿಮಗೆ iPhone 13 128GB ಮಾದರಿಯ ಫೋನ್‍ ಮೇಲೆ ಶೇ.11ರಷ್ಟು ರಿಯಾಯಿತಿ ಸಿಗುತ್ತಿದೆ. ಅಂದರೆ ಇಲ್ಲಿ ನಿಮಗೆ 79,900 ರೂ. ಬೆಲೆಯ ಫೋನ್ 70,990 ರೂ.ಗೆ ಸಿಗುತ್ತದೆ.  

ಇದನ್ನೂ ಓದಿ: ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ iPhone 12, iPhone 13 ಮೇಲೆ ಭರ್ಜರಿ ಆಫರ್‌ಗಳು

3 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಹೀಗೆ ಖರೀದಿಸಿ

3 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್ ಮನೆಗೆ ಕೊಂಡೊಯ್ಯಲು ನೀವು No-Cost EMI ಆಯ್ಕೆ ಮಾಡಬೇಕು. Qik EMI ಕಾರ್ಡ್‌ ಬಳಸಿ ತಿಂಗಳಿಗೆ 2,958 ರೂ. ಪಾವತಿಸಿದರೆ ಸಾಕು ನೀವು iPhone 13 ಖರೀದಿಸಿ ಮನೆಗೆ ಕೊಂಡೊಯ್ಯಬಹುದು. ನೀವು 24 ತಿಂಗಳುಗಳಲ್ಲಿ ಈ ಫೋನಿನ ಪೂರ್ಣ ಮೊತ್ತವನ್ನು ಪಾವತಿಸುವ ಅವಕಾಶವಿರುತ್ತದೆ.  

ಐಫೋನ್ 13 ನ ವೈಶಿಷ್ಟ್ಯಗಳು

iPhone 13ನ 128GB ಸ್ಟೋರೇಜ್ ಮಾದರಿಯ ಈ ಪೋನ್ A15 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 5G ಸೇವೆಯೊಂದಿಗೆ ಈ iPhone 13 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರ ಹಿಂದಿನ ಕ್ಯಾಮೆರಾ ಸೆಟಪ್‌ನಲ್ಲಿ ನೀಡಲಾದ ಎರಡೂ ಸೆನ್ಸಾರ್‍ಗಳು 12MP ಮತ್ತು ಮುಂಭಾಗದ ಕ್ಯಾಮೆರಾ 12MP ಆಗಿರುತ್ತದೆ. ಡ್ಯುಯಲ್ ಸಿಮ್ ಸೇವೆಗಳೊಂದಿಗೆ ಈ ಫೋನ್‌ನಲ್ಲಿ ನಿಮಗೆ 1 ವರ್ಷದ ಬ್ರ್ಯಾಂಡ್ ವಾರಂಟಿ ಸಹ ನೀಡಲಾಗುತ್ತದೆ.

ಇದನ್ನೂ ಓದಿ: ಇಸ್ರೋದ SSLV 'Azadi ಉಪಗ್ರಹ' ಉಡಾವಣೆ ಯಶಸ್ವಿ: ಆದರೆ ಎದುರಾಗಿದೆ ಸಣ್ಣ ಸಮಸ್ಯೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News