ನವದೆಹಲಿ: ಟೆಕ್ ದೈತ್ಯ ಫೇಸ್ಬುಕ್ ಇತ್ತೀಚೆಗೆ ತನ್ನ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ನಲ್ಲಿ ಸಂದೇಶ ಅಳಿಸುವಿಕೆ ವೈಶಿಷ್ಟ್ಯವನ್ನು (ವ್ಯಾನಿಶ್ ಮೋಡ್) ಬಿಡುಗಡೆ ಮಾಡಿತ್ತು. ಈಗ ಕಂಪನಿಯು ಫೇಸ್ಬುಕ್ ಮೆಸೆಂಜರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಕೂಡ ವ್ಯಾನಿಶ್ ಮೋಡ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.
ಅಮೆರಿಕಾದಲ್ಲಿ ಪ್ರಾರಂಭ:
ಟೆಕ್ ಸೈಟ್ ದಿ ವರ್ಜ್ ಪ್ರಕಾರ, ನೀವು ಈಗ ಫೇಸ್ಬುಕ್ ಮೆಸೆಂಜರ್ (Messenger) ಮತ್ತು ಇನ್ಸ್ಟಾಗ್ರಾಮ್ (Instagram)ನಲ್ಲಿರುವ ಯಾವುದೇ ಸ್ನೇಹಿತರಿಗೆ ಪಠ್ಯ, ಫೋಟೋಗಳು, ಧ್ವನಿ ಸಂದೇಶಗಳು, ಎಮೋಜಿಗಳು ಅಥವಾ ಸ್ಟಿಕ್ಕರ್ಗಳನ್ನು ಕಳುಹಿಸಬಹುದು. ಅವುಗಳನ್ನು ರಿಸೀವರ್ ನೋಡಿದ ನಂತರ ಅವು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ
ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ನೀವು ಅದನ್ನು ಪ್ರತ್ಯೇಕ ಚಾಟ್ ಆಗಿ ಬಳಸಲು ಸಾಧ್ಯವಾಗುತ್ತದೆ ಮತ್ತು ಓದಿದ ನಂತರ ಚಾಟ್ ವಿಂಡೋ ಸಂದೇಶವು ಕಣ್ಮರೆಯಾಗುತ್ತದೆ. ಈ ಹೊಸ ವೈಶಿಷ್ಟ್ಯಗಳು ಅಮೆರಿಕದಲ್ಲಿ ಪ್ರಾರಂಭವಾಗಿವೆ. ಶೀಘ್ರದಲ್ಲೇ ಇದನ್ನು ವಿಶ್ವದ ಇತರ ದೇಶಗಳಲ್ಲಿ ನವೀಕರಿಸಲಾಗುವುದು ಎಂದು ಕಂಪನಿ ತಿಳಿಸಿದೆ.
WhatsApp ನ್ನು ಈಗಲೇ ನಿಮ್ಮ ಪೋನ್ ನಿಂದ ಯಾಕೆ ಡಿಲಿಟ್ ಮಾಡಬೇಕು ಗೊತ್ತೇ?
ಲಭ್ಯವಿರುವ ಮಾಹಿತಿಯ ಪ್ರಕಾರ ಈ ರಹಸ್ಯ ಸಂದೇಶ ವೈಶಿಷ್ಟ್ಯವು end-to-end encrypted ಆಗಿದೆ ಮತ್ತು ಅದನ್ನು ನಿಮ್ಮ ವೈಯಕ್ತಿಕ ಸಾಧನದಲ್ಲಿ ಮಾತ್ರ ಸೇವ್ ಮಾಡಬಹುದಾಗಿದೆ.
ವಾಟ್ಸಾಪ್ನಲ್ಲಿನ ಹೊಸ ವೈಶಿಷ್ಟ್ಯ, ಈಗ ಅನಗತ್ಯ ಮೆಸೇಜ್ಗಳಿಗೆ ಹೇಳಿ ಗುಡ್ ಬೈ
ಕೆಲವು ದಿನಗಳ ಹಿಂದೆ ಫೇಸ್ಬುಕ್ ತನ್ನ ಚಾಟಿಂಗ್ ಆ್ಯಪ್ ವಾಟ್ಸಾಪ್ನಲ್ಲಿ (Whatsapp) ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ನಿಮ್ಮ ಸಂದೇಶ ಸ್ವೀಕರಿಸುವವರು ಅದನ್ನು ವಾಟ್ಸಾಪ್ನಲ್ಲಿ ನೋಡಿದ ತಕ್ಷಣ, ಅದು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ. ಈ ವಾರದಿಂದ ಈ ನವೀಕರಣವು ಭಾರತದ ಬಳಕೆದಾರರ ಹ್ಯಾಂಡ್ಸೆಟ್ನಲ್ಲಿ ಬರಲು ಪ್ರಾರಂಭಿಸಿದೆ.