ಬೆಂಗಳೂರು : ಬೇಸಿಗೆಯಲ್ಲಿ ಮನೆ ತಂಪಾಗಿಸಲು ಎಸಿ ಬಳಸುವುದು ಅಗತ್ಯ.ಆದರೆ ನಂತರ ಬರುವ ವಿದ್ಯುತ್ ಬಿಲ್ ಮಾತ್ರ ಶಾಕ್ ನೀಡುತ್ತದೆ. ಹಲವು ಮನೆಗಳಲ್ಲಿ 4ರಿಂದ 5 ಸಾವಿರ ರೂ.ವರೆಗೆ ವಿದ್ಯುತ್ ಬಿಲ್ ಬರುತ್ತದೆ.ಆದರೆ ಎಸಿ ಆನ್ ಮಾಡದಿದ್ದರೆ, ಸೆಖೆ ತಡೆದುಕೊಳ್ಳುವುದು ಕೂಡಾ ಸಾಧ್ಯವಾಗುವುದಿಲ್ಲ.ಜನ ಸಾಮಾನ್ಯರಿಗೂ ಎಸಿ ಬಳಸುವುದಕ್ಕೆ ಸುಲಭವಾಗುವಂತೆ ಇದೀಗ ಸರ್ಕಾರವೇ ಕ್ರಮ ತೆಗೆದುಕೊಂಡಿದೆ.ಕೆಲವು ಸಮಯದ ಹಿಂದೆ, EESL (ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್) ತನ್ನ ಇ-ಕಾಮರ್ಸ್ ವೆಬ್‌ಸೈಟ್ ಅನ್ನು EESLMart ಎಂದು ಹೆಸರಿಸಿದೆ.ಇಲ್ಲಿ ವಿದ್ಯುತ್ ಉಳಿತಾಯ ಎಸಿ, ಫ್ಯಾನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.ಇವು ಕೇವಲ ವಿದ್ಯುತ್ ಉಳಿಸುವುದಲ್ಲದೆ ಸೊಗಸಾದ ವಿನ್ಯಾಸದಲ್ಲಿ ಬರುತ್ತವೆ.
1.5 ಟಿಆರ್ ಸೂಪರ್ ಎಫಿಶಿಯೆಂಟ್ 5 ಸ್ಟಾರ್ ಸ್ಪ್ಲಿಟ್ ಎಸಿ (1.5 TR Super Efficient 5 Star Split AC):
ISEER 1.5 TR ಸೂಪರ್ ಎಫಿಶಿಯೆಂಟ್ 5 ಸ್ಟಾರ್ ಸ್ಪ್ಲಿಟ್ ಎಸಿ ಉತ್ತಮವಾದ ಹವಾನಿಯಂತ್ರಣವಾಗಿದ್ದು ಅದು ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ. ಮಾತ್ರವಲ್ಲ ಕೋಣೆಯನ್ನು ತ್ವರಿತವಾಗಿ ತಂಪಾಗಿಸುತ್ತದೆ.ಇದರ ಬೆಲೆ ಈಗ 44,141 ರೂ. ವೆಬ್‌ಸೈಟ್ ಪ್ರಕಾರ, ಇದನ್ನು 15 ದಿನಗಳಲ್ಲಿ ಡೆಲಿವೆರಿ ನೀಡಿ 7 ದಿನಗಳಲ್ಲಿ ಇನ್ಸ್ಟಾಲ್ ಕೂಡಾ ಮಾಡಲಾಗುವದು. ಇದು ತಾಮ್ರದ ಕಂಡೆನ್ಸರ್ ಕಾಯಿಲ್ ಮತ್ತು ನ್ಯಾನೊ ಲೇಪನದ ತಾಮ್ರದ ಭಾಗಗಳನ್ನು ಒಳಗೊಂಡಿದೆ.ಸಾಂಪ್ರದಾಯಿಕ 5 ಸ್ಟಾರ್ ಎಸಿಗಿಂತ 14% ಕಡಿಮೆ ವಿದ್ಯುತ್ ಬಳಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ : ನಿಮ್ಮ ಏರಿಯಾದಲ್ಲಿ ಯಾವ ದಿನದಿಂದ ಆರಂಭವಾಗಲಿದೆ BSNL 4G? ಇಲ್ಲಿದೆ ಕಂಪನಿ ನೀಡಿದ ಮಾಹಿತಿ
1.0 ಟಿಆರ್ ಸೂಪರ್ ಎಫಿಶಿಯೆಂಟ್ 5 ಸ್ಟಾರ್ ಸ್ಪ್ಲಿಟ್ ಎಸಿ (1.0 TR Super Efficient 5 Star Split AC):
ಇನ್ನು 1 ಟನ್ ಎಸಿ ಸಾಕು ಎಂದು ಹೇಳುವುದಾದರೆ ಆ ಆಯ್ಕೆ ಕೂಡಾ ಇದೆ. ಇದರ ಬೆಲೆ ಈಗ 33,456 ರೂ. ಇದನ್ನು ಕೂಡಾ 15 ದಿನಗಳಲ್ಲಿ ಡೆಲಿವೆರಿ ನೀಡಿ 7 ದಿನಗಳಲ್ಲಿ ಇನ್ಸ್ಟಾಲ್ ಮಾಡಲಾಗುವುದು. ಸಾಂಪ್ರದಾಯಿಕ 5 ಸ್ಟಾರ್ ಎಸಿಗೆ ಹೋಲಿಸಿದರೆ ಇದು 19% ಕಡಿಮೆ ವಿದ್ಯುತ್ ಬಳಸುತ್ತದೆ.
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಲವಾರು ರೀತಿಯ ಎಸಿಗಳು ಲಭ್ಯವಿದೆ. ಆದರೆ ಕೆಲವು 2 ಸ್ಟಾರ್ ಮತ್ತು ಕೆಲವು 4 ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತವೆ. ಇದರಿಂದ ಹೆಚ್ಚು ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲಿ ಬೆಲೆ ಕಡಿಮೆ ಇದ್ದರೂ ವಿದ್ಯುತ್ ಬಿಲ್ ನಲ್ಲಿ ಉಳಿತಾಯ ಮಾಡಲು ಸಾಧ್ಯವಿಲ್ಲ. ಆದರೆ ವಿದ್ಯುತ್ ಬಿಲ್ ಉಳಿಸಬೇಕಾದರೆ ಈ ಎಸಿಏ ಬೆಸ್ಟ್ ಆಯ್ಕೆ.
ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ನಿಮ್ಮ ಸಂಗಾತಿ ದಿನವಿಡೀ ಯಾರೊಂದಿಗೆ ಚಾಟ್ ಮಾಡುತ್ತಾರೆ? ಈ ರೀತಿ ಪತ್ತೆ ಹಚ್ಚಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.