ನವದೆಹಲಿ: Government Deadline End Today - ಇಂದಿನ ಯುಗದಲ್ಲಿ, ಸಾಮಾಜಿಕ ತಾಣಗಳಾದ (Social Sites) ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಭಾರತದ ಕೋಟ್ಯಂತರ ಜನರ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿವೆ. ಆದರೆ ಮಂಗಳವಾರದಿಂದ ಈ ಎಲ್ಲಾ ಸಾಮಾಜಿಕ ಮಾಧ್ಯಮ (Social Media) ತಾಣಗಳನ್ನು ಬಂದ್ ಮಾಡಲಾಗುವುದು ಎಂಬ ಚರ್ಚೆ ದೇಶದಲ್ಲಿ ಭರದಿಂದ ಸಾಗಿದೆ. ಹಾಗಾದರೆ ಈ ಚರ್ಚೆ ಏಕೆ ನಡೆಯುತ್ತಿದೆ? ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ
ನಿರಂಕುಶವಾಗುತ್ತಿದೆಯೇ ಸಾಮಾಜಿಕ ಮಾಧ್ಯಮ?
ಭಾರತದಲ್ಲಿ ಸಾಮಾಜಿಕ ಮಾಧ್ಯಮ ನಿರಂಕುಶವಾಗುತ್ತಿದೆ ಎಂದು ದೇಶದಲ್ಲಿ ಹಲವು ವರ್ಗಗಳು ಆರೋಪಿಸುತ್ತಿವೆ. ಈ ಆರೋಪಗಳ ಹಿನ್ನೆಲೆ ಭಾರತ ಸರ್ಕಾರ ಈ ಕಂಪನಿಗಳಿಗೆ ಭಾರತದಲ್ಲಿ ಅಧಿಕಾರಿಗಳನ್ನು ನೇಮಿಸಲು ನಿರ್ದೇಶನಗಳನ್ನು ನೀಡಿದೆ. ಆದರೆ, ಭಾರತೀಯ ಸಾಮಾಜಿಕ ಮಾಧ್ಯಮ ಕಂಪನಿ 'ಕೂ' ಹೊರತುಪಡಿಸಿ ಇದುವರೆಗೆ ಯಾವುದೇ ಸಾಮಾಜಿಕ ಮಾಧ್ಯಮ ಕಂಪನಿಗಳು ಈ ನಿರ್ದೇಶನಗಳನ್ನು ಪಾಲಿಸಿಲ್ಲ.
ಸರ್ಕಾರದ ವತಿಯಿಂದ ಫೆಬ್ರುವರಿ 25, 2021ರ ಈ ನಿರ್ದೇಶನಗಳ ಡೆಡ್ ಲೈನ್ (Government Deadline) ಇಂದು ಮುಕ್ತಾಯಗೊಳ್ಳುತ್ತಿದೆ. ಈ ಗಡುವು ಮುಕ್ತಾಯದ ಬಳಿಕ ಸರ್ಕಾರ ಈ ಸಾಮಾಜಿಕ ಮಾಧ್ಯಮ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
ಸರ್ಕಾರ ನೀಡಿರುವ ನಿರ್ದೇಶನಗಳೇನು?
ಟ್ವಿಟ್ಟರ್ (Twitter) ಹಾಗೂ ಫೇಸ್ ಬುಕ್(Facebook) ಗಳಂತಹ ಕಂಪನಿಗಳಿಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಸರ್ಕಾರ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಈ ಕಾಲಾವಕಾಶದ ಮಿತಿ ಇಂದು ಮುಕ್ತಾಯಗೊಳ್ಳುತ್ತಿದೆ. ಇದುವರೆಗೆ ಭಾರತೀಯ ಕಂಪನಿ 'ಕೂ' ಹೊರತುಪಡಿಸಿ ಯಾವುದೇ ಕಂಪನಿ ಸರ್ಕಾರಕ್ಕೆ ಉತ್ತರ ನೀಡಿಲ್ಲ.
ಈ ವರ್ಷದ ಫೆಬ್ರುವರಿ 25 ರಂದು ಕೇಂದ್ರ ಸರ್ಕಾರ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಗಳಂತಹ ಕಂಪನಿಗಳಿಗೆ ಹೆಚ್ಚುವರಿ ಕಠಿಣ ನಿಯಮಗಳನ್ನು ಘೋಷಿಸಿತ್ತು. ಇದರ ಅಡಿ ವರದಿ ಮಾಡಲಾಗಿರುವ ಕಂಟೆಂಟ್ ಅನ್ನು 36 ಗಂಟೆಯೊಳಗೆ ತೆಗೆದುಹಾಕಲು ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಓರ್ವ ಅಧಿಕಾರಿಯ ಮೂಲಕ ದೂರು ಪರಿಹಾರ ವ್ಯವಸ್ಥೆ ರೂಪಿಸಲು ಹೇಳಿತ್ತು.
ಈ ನಿಯಮಗಳ ಅನುಸಾರ ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತದಲ್ಲಿ ತನ್ನ ಅಧಿಕಾರಿ ಹಾಗೂ ಕಾಂಟಾಕ್ಟ್ ಅಡ್ರೆಸ್ಸ್ ನೀಡಬೇಕು. ಜೊತೆಗೆ ಕಂಪ್ಲೈನ್ಸ್ ಅಧಿಕಾರಿಯನ್ನು ನೇಮಿಸಬೇಕು. ದೂರು-ಪರಿಹಾರ, ಆಕ್ಷೇಪಾರ್ಹ ಕಂಟೆಂಟ್ ಮೇಲೆ ನಿಗಾ ವಹಿಸುವಿಕೆ, ಕಂಪ್ಲೈನ್ಸ್ ರಿಪೋರ್ಟ್ ಹಾಗೂ ಆಕ್ಷೇಪಾರ್ಹ ಸಾಮಗ್ರಿಯನ್ನು ತೆಗೆದುಹಾಕುವ ನಿಯಮಗಳು ಕೂಡ ಇದರಲ್ಲಿ ಶಾಮೀಲಾಗಿವೆ.
ಕಳೆದ ಕೆಲ ವರ್ಷಗಳಿಂದ ಈ ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯಾಗುತ್ತಿದೆ. ಅಂದರೆ, ಈ ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿ ಹಬ್ಬಿಸುವುದು, ಆಕ್ಷೇಪಾರ್ಹ ಮಾಹಿತಿ ವಿನಿಮಯ ಮಾಡಿಕೊಳ್ಳುವುದು, ದೇಶದಲ್ಲಿನ ವಾತಾವರಣವನ್ನು ಹಾಳು ಮಾಡುವ ಕಾರ್ಯ ಈ ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ನಡೆಯುತ್ತಿದೆ. ಹಲವು ಬಾರಿ ಇಂತಹ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿವೆ. ಸರ್ಕಾರದ ಪದೇ ಪದೇ ನಿರ್ದೇಶನಗಳ ಬಳಿಕವೂ ಕೂಡ ಸಾಮಾಹಿಕ ಮಾಧ್ಯಮ ಕಂಪನಿಗಳು ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಇದೀಗ ಈ ಕಂಪನಿಗಳಿಗೆ ಕಠಿಣ ಗೈಡ್ ಲೈನ್ ಗಳನು ಸಿದ್ಧಪಡಿಸುವಂತೆ ನಿರ್ದೇಶನಗಳನ್ನೂ ನೀಡಿದೆ.
ಯಾವ ಕ್ರಮ ಸರ್ಕಾರ ಜರುಗಿಸಬಹುದು?
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸಾಮಾಜಿಕ ಮಾಧ್ಯಮ ಕಂಪನಿಗಳು ನಿಯಮಗಳನ್ನು ಪಾಲಿಸದೆ ಹೋದಲ್ಲಿ, ಅಂದರೆ ಗೈಡ್ ಲೈನ್ಸ್ ರೂಪಿಸದೆ ಹೋದಲ್ಲಿ, ಭಾರತದಲ್ಲಿ ಈ ಕಂಪನಿಗಳಿಗೆ ನೀಡಿರುವ ಸೌಲಭ್ಯವನ್ನು ಸರ್ಕಾರ ಹಿಂಪಡೆಯುವ ಸಾಧ್ಯತೆ ಇದೆ. ಇದರಲ್ಲಿ ಅತಿ ದೊಡ್ಡ ಸೌಕರ್ಯ ಎಂದರೆ, ನ್ಯಾಯಾಲಯಗಳಲ್ಲಿ ಈ ಕಂಪನಿಗಳನ್ನು ಪಕ್ಷವನ್ನಾಗಿ ಮಾಡಬಾರದು ಎಂದಿದೆ. ಈ ಸೌಲಭ್ಯ ಸರ್ಕಾರ ಹಿಂಪಡೆಯಬಹುದು ಮತ್ತು ನ್ಯಾಯಾಲಯಗಳಲ್ಲಿ ಈ ಕಂಪನಿಗಳನ್ನು ಪಕ್ಷವನ್ನಾಗಿಸಬಹುದು.
ಇದನ್ನೂ ಓದಿ-Fake SIM Card: ಎಚ್ಚರಿಕೆ! ನಿಮ್ಮ ಹೆಸರಲ್ಲೂ ನಕಲಿ SIM ಚಾಲ್ತಿಯಲ್ಲಿದೆಯಾ? ಈ ರೀತಿ ಬ್ಲಾಕ್ ಮಾಡಿ
ಆದರೆ ಇಲ್ಲಿ ನಿಜವಾದ ಪ್ರಶ್ನೆ ಎಂದರೆ ಸರ್ಕಾರ ನೀಡಿರುವ ಇಂದಿನ ಡೆಡ್ ಲೈನ್ ಒಂದು ವೇಳೆ ಮುಕ್ತಾಯಗೊಂಡರೆ ಮುಂದೇನಾಗಲಿದೆ? ಎಂಬುದು. ಇದಕ್ಕೆ ಉತ್ತರ ಎಂದರೆ, ಸರ್ಕಾರ ಈ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಸಾಧ್ಯತೆ ಇದೆ. IT Act 2000 ಸೆಕ್ಷನ್ 79ರ ಅಡಿ ಸರ್ಕಾರ ಈ ಕಂಪನಿಗಳಿಗೆ ಸಂರಕ್ಷಣೆ ಒದಗಿಸುತ್ತದೆ. ಈ ಸೌಲಭ್ಯ ಮುಕ್ತಾಯವಾಗುವ ಸಾಧ್ಯತೆ ಇದೆ. ಸೆಕ್ಷನ್ 79ರ ಪ್ರಕಾರ ಈ ವೇದಿಕೆಗಳ ಮೇಲೆ ಯಾರಾದರು ಆಕ್ಷೇಪಾರ್ಹ ಕಂಟೆಂಟ್ ಅನ್ನು ಬಿತ್ತರಿಸಿದರೆ, ಅದಕ್ಕೆ ಕಂಪನಿಗಳು ಜವಾಬ್ದಾರಿ ಅಲ್ಲ ಎಂದು ಹೇಳಲಾಗಿದೆ.
ಆದರೆ, ಫೆಬ್ರವರಿ 25ರಂದು ಈ ಕಂಪನಿಗಳಿಗೆ ನೀಡಲಾಗಿರುವ ನಿರ್ದೇಶನಗಳಲ್ಲಿ ಒಂದು ವೇಳೆ ನ್ಯಾಯಾಲಯ ಹಾಗೂ ಸರ್ಕಾರದ ಆದೇಶದ ಬಳಿಕ ಈ ಕಂಪನಿಗಳು ಯಾವುದೇ ಕಂಟೆಂಟ್ ಅನ್ನು ತೆಗೆದುಹಾಕದೆ ಹೋದಲ್ಲಿ ಸೆಕ್ಷನ್ 79ರ ಅಡಿ ಕಂಪನಿಗಳಿಂದ ಈ ಅಧಿಕಾರವನ್ನು ಕಸಿದುಕೊಳ್ಳಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ-Super Blood Moon 2021 In India: ಏನಿದು ಸೂಪರ್ ಬ್ಲಡ್ ಮೂನ್ ? ಭಾರತದಲ್ಲಿ ಯಾವಾಗ ಗೋಚರಿಸಲಿದೆ?
Facebook ಜಾರಿಗೊಳಿಸಿದೆ ಹೇಳಿಕೆ
ಭಾರತ ಸರ್ಕಾರದ ವತಿಯಿಂದ ನೀಡಲಾಗಿರುವ ಡೆಡ್ ಲೈನ್ ಮುಕ್ತಾಯವಾಗುತ್ತಿರುವುದನ್ನು ಮನಗಂಡ ಫೇಸ್ ಬುಕ್, ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ನಿಯಮಗಳನ್ನು ಪಾಲಿಸುವುದಾಗಿ ಹೇಳಿದೆ. ಆದರೆ, ಇನ್ನೂ ಕೆಲ ನಿಯಮಗಳ ಮೇಲೆ ಮಾತುಕತೆ ಮುಂದುವರೆದಿದೆ ಎನ್ನಲಾಗಿದೆ.
ತನ್ನ ಹೇಳಿಕೆಯಲ್ಲಿ ಫೇಸ್ ಬುಕ್, ಐಟಿ ಕಾಯ್ದೆಯ ಪ್ರಕಾರ ಯಾವ ನಿಯಮಗಳನ್ನು ಮಾಡಲಾಗಿದೆಯೋ, ನಾವು ಆ ನಿಯಮಗಳನ್ನು ಪಾಲಿಸಲು ಸಿದ್ಧರಿದ್ದೇವೆ ಹಾಗೂ ನಾವು ನಮ್ಮ ಕಾರ್ಯವಿಧಾನ ಬದಲಾಯಿಸಲು ಹೆಜ್ಜೆ ಇಟ್ಟಿದ್ದೇವೆ. ನಾವು ಜನರಿಗೆ ಸುರಕ್ಷಿತವಾಗಿದ್ದುಕೊಂಡು, ಸ್ವತಂತ್ರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸಿದ್ದೇವೆ ಎಂದು ಹೇಳಿದೆ.
ಇದನ್ನೂ ಓದಿ- WhatsApp New Privacy Policy: WhatsApp ಹೊಸ ಆಟ ಆರಂಭ! ಗೌಪ್ಯತಾ ನೀತಿ ಒಪ್ಪಿಕೊಳ್ಳದ ಬಳಕೆದಾರದಿಗೆ ಎದುರಾದ ಅಡಚಣೆಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.