ತನ್ನ ಬಳಕೆದಾರರಿಗೆ ಅಡ್ವಾನ್ಸ್ಡ್ ವೈಶಿಷ್ಟ್ಯಗಳನ್ನು ಪರಿಚಯಿಸಿದ WhatsApp

ವಾಟ್ಸಾಪ್ ತನ್ನ 2 ಬಿಲಿಯನ್ ಬಳಕೆದಾರರಿಗೆ ಸುಲಭವಾದ ಮೆಸೇಜಿಂಗ್ ಅನುಭವಕ್ಕಾಗಿ ತನ್ನ ಪ್ಲಾಟ್‌ಫಾರ್ಮ್ ಅನ್ನು ನವೀಕರಿಸುತ್ತಲೇ ಇರುತ್ತದೆ. ಇತ್ತೀಚಿಗೆ , ಫೇಸ್‌ಬುಕ್ ಒಡೆತನದ ಸಾಮಾಜಿಕ ಸಂದೇಶ ಅಪ್ಲಿಕೇಶನ್ ತನ್ನ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ.

Last Updated : Oct 2, 2020, 07:14 PM IST
  • ತನ್ನ ಬಳಕೆದಾರರಿಗೆ ನೂತನ ವೈಶಿಷ್ಟ್ಯ ಗಳನ್ನು ಪರಿಚಯಿಸಿದ ವಾಟ್ಸ್ ಆಪ್
  • ಅಲ್ವೆಜ್ ಮ್ಯೂಟ್, UI ಸ್ಟೋರೇಜ್, ಮೀಡಿಯಾ ಗೈಡ್ಲೈನ್ಸ್ ಪ್ರಸ್ತುತ ಪಡಿಸಿದ ವಾಟ್ಸ್ ಆಪ್.
  • ಪ್ರಸ್ತುತ ಕೇವಲ ಬೀಟಾ ಬಳಕೆದಾರರಿಗೆ ಮಾತ್ರ ಪರಿಚಯಿಸಲಾಗಿದೆ.
ತನ್ನ ಬಳಕೆದಾರರಿಗೆ ಅಡ್ವಾನ್ಸ್ಡ್ ವೈಶಿಷ್ಟ್ಯಗಳನ್ನು ಪರಿಚಯಿಸಿದ WhatsApp title=

ನವದೆಹಲಿ: ವಾಟ್ಸಾಪ್ (WhatsApp) ತನ್ನ 2 ಬಿಲಿಯನ್ ಬಳಕೆದಾರರಿಗೆ ಸುಲಭವಾದ ಮೆಸೇಜಿಂಗ್ ಅನುಭವಕ್ಕಾಗಿ ತನ್ನ ಪ್ಲಾಟ್‌ಫಾರ್ಮ್ ಅನ್ನು ನವೀಕರಿಸುತ್ತಲೇ ಇರುತ್ತದೆ. ಇತ್ತೀಚಿಗೆ , ಫೇಸ್‌ಬುಕ್ ಒಡೆತನದ ಸಾಮಾಜಿಕ ಸಂದೇಶ ಅಪ್ಲಿಕೇಶನ್ ತನ್ನ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಶೀಘ್ರದಲ್ಲಿಯೇ ಇದನ್ನು ಸ್ಟೇಬಲ್ ವರ್ಶನ್ ಗಳಿಗೂ ಕೂಡ ಬಿಡುಗಡೆಗೊಳಿಸಲಾಗುತ್ತಿದೆ.

ಇದನ್ನು ಓದಿ- WhatsApp ನಲ್ಲಿ ಹೊಸ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭವಾಗಿ ಖಾತೆ ಅಥವಾ ಸಂಖ್ಯೆ ಬದಲಾಯಿಸುವುದು ಹೇಗೆ?

ಸದ್ಯ ಪ್ರಸ್ತುತ ಪಡಿಸಲಾಗಿರುವ ವೈಶಿಷ್ಟ್ಯದಲ್ಲಿ WhatsApp ಆಲ್ವೇಸ್ ಮ್ಯೂಟ್ ಅನ್ನು ಸಕ್ರೀಯಗೊಳಿಸಿದೆ. ವಾಟ್ಸ್ ಆಪ್ ನ ಹೊಸ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ  ಬ್ಲಾಗ್ WABetaInfo ಪ್ರಕಾರ, ಆರಂಭದಲ್ಲಿ ಈ ವೈಶಿಷ್ಟ್ಯವನ್ನು ಬೀಟಾ ವರ್ಶನ್ ರೂಪದಲ್ಲಿ ರೋಲ್ ಔಟ್ ಮಾಡಲಾಗಿದೆ.  ಆಪ್ ನ ಬೀಟಾ ಯುಸರ್ಸ್ ಗಳಿಗಾಗಿ ಲಭ್ಯವಿರುವ ಇತರೆ ಸೌಕರ್ಯಗಳಲ್ಲಿ ನೂತನ ಸ್ಟೋರೇಜ್ UI ಹಾಗೂ ಅದರ ಉಪಕರಣಗಳು ಹಾಗೂ ಮೀಡಿಯಾ ಗೈಡ್ ಲೈನ್ಸ್ ಕೂಡ ಶಾಮೀಲಾಗಿವೆ. ಈ ಎಲ್ಲ ವೈಶಿಷ್ಟ್ಯ ಗಳನ್ನು ಅಂಡ್ರಾಯಿಡ್ ಗಾಗಿ ವಾಟ್ಸ್ ಆಪ್ 2.20.201.10 ಬೀಟಾ ವರ್ಶನ್ ನಲ್ಲಿವೆ ಹಾಗೂ ಇನ್ನೂ ಎಲ್ಲ ಬಳಕೆದಾರರಿಗೆ ಸ್ಟೇಬಲ್ ವರ್ಶನ್ ನಲ್ಲಿ ಬಿಡುಗಡೆಗೊಳಿಸಲಾಗಿಲ್ಲ.

ಇದನ್ನು ಓದಿ- WhatsApp: ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಬರಲಿವೆ 5 ಹೊಸ ವೈಶಿಷ್ಟ್ಯಗಳು

WhatsApp Always Mute ವೈಶಿಷ್ಟ್ಯ
ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಯಾವುದೇ ಒಂದು ಚಾಟ್ ಅನ್ನು ಖಾಯಂ ಆಗಿ ಮ್ಯೂಟ್ ಮಾಡಬಹುದು. ಈ ವೈಶಿಷ್ಟ್ಯ ಗ್ರೂಪ್ ಹಾಗೂ ವೈಯಕ್ತಿಕ ಚಾಟ್ ಎರಡರಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಆಲ್ವೇಸ್ ಮ್ಯೂಟ್ ಸಂಪೂರ್ಣವಾಗಿ ನೂತನ ವೈಶಿಷ್ಟ್ಯ ಆಗಿದ್ದು, ಈಗಾಗಲೇ ಲಭ್ಯವಿರುವ ವೈಶಿಷ್ಟ್ಯಗಳಿಗೆ ಹೆಚ್ಚುವರಿಯಾಗಿ ಇದನ್ನು ನೀಡಲಾಗುತ್ತಿದೆ. ಪ್ರಸ್ತುತ ಬಳಕೆದಾರರು ಯಾವುದೇ ಒಂದು ಕಾಂಟಾಕ್ಟ್ ಅನ್ನು ಗರಿಷ್ಟ ಅಂದರೆ ಒಂದು ವರ್ಷದ ಅವಧಿಗಾಗಿ ಮ್ಯೂಟ್ ಮಾಡಬಹುದು. ಆದರೆ, ಆಲ್ವೇಸ್ ಮ್ಯೂಟ್ ಆಪ್ಶನ್ ನಲ್ಲಿ ಖಾಯಂ ಆಗಿ ಯಾವುದೇ ಒಂದು ಚಾಟ್ ಅನ್ನು ನೀವು ಮ್ಯೂಟ್ ಮಾಡಬಹುದು.

ಇದನ್ನು ಓದಿ- ಇನ್ಮುಂದೆ WhatsAppನಿಂದ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ ವಿಡಿಯೋ ಹಾಗೂ ಫೋಟೋಗಳು

New Storage Usage UI ವೈಶಿಷ್ಟ್ಯ
ವಾಟ್ಸ್ ಆಪ್ ತನ್ನ ಸ್ಟೋರೇಜ್ ವೈಶಿಷ್ಟ್ಯ ಯುಐ ಗಾಗಿ ನೂತನ ಲೇಔಟ್ ಪರಿಚಯಿಸುತ್ತಿದೆ. ಲೇಟೆಸ್ಟ್ ವಾಟ್ಸ್ ಆಪ್ ಬೀಟಾ ವರ್ಶನ್ ನಲ್ಲಿ ಈ ಮೊದಲಿನ ಹೋಲಿಕೆಯಲ್ಲಿ ಹೆಚ್ಚು ಡಿಟೇಲ್ ಜೊತೆಗೆ ಸೋತ್ರೆಜ್ ಯುಸೆಜ್ ಯುಜರ್ ಇಂಟರ್ ಫೇಸ್ ಸಿಗಲಿದೆ. ಇದರಲ್ಲಿ ಕೆಳಭಾಗದಲ್ಲಿ ಅಗತ್ಯವಿಲ್ಲದ ಫೈಲ್ ಗಳನ್ನು ಡಿಲೀಟ್ ಮಾಡುವ ಆಪ್ಶನ್ ಕೂಡ ಇರಲಿದೆ. ಯಾವ ಫೈಲ್ ಹೆಚ್ಚು ಸ್ಟೋರೇಜ್ ಬಳಸುತ್ತಿದೆ ಎಂಬುದನ್ನೂ ಕೂಡ ನೀವು ಇದರಿಂದ ಕಂಡುಕೊಳ್ಳಬಹುದು. ಇದರಿಂದ ಬಳಕೆದಾರರು ಆ ಫೈಲ್ ಅನ್ನು ನಿರ್ವಹಿಸಬಹುದಾಗಿದೆ. ಈ ವೈಶಿಷ್ಟ್ಯ ವಾಟ್ಸ್ ಆಪ್ ಬೀಟಾ ಬಳಕೆದಾರರಿಗೆ ನಿಧಾನವಾಗಿ ಆರಂಭಗೊಳಿಸಲಾಗುತ್ತಿದೆ.

ಇದನ್ನು ಓದಿ-ಈ ಮೋಜಿನ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್ನಲ್ಲಿ ಸಿಗುತ್ತಿದೆ ಹೊಸ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್

WhatsApp Media Guidelines ವೈಶಿಷ್ಟ್ಯ
ವಾಟ್ಸ್ ಆಪ್ ನ ಈ ನೂತನ ವೈಶಿಷ್ಟ್ಯ ಇನ್ಸ್ಟಾಗ್ರಾಮ್ ನ ಮೀಡಿಯಾ ಗೈಡ್ಲೈನ್ಸ್ ವೈಶಿಷ್ಟ್ಯದಂತೆ ಕಾರ್ಯನಿರ್ವಹಿಸುತ್ತದೆ. ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಸ್ಟಿಕ್ಕರ್ ಗಳನ್ನು ಆನ್ಲೈನ್ ನಲ್ಲಿ ತಯಾರಿಸುವುದರ ಜೊತೆಗೆ ಇಮೋಜಿ, ವಿಡಿಯೋ ಅಥವಾ gif ಗಳನ್ನು ಎಡಿಟ್ ಮಾಡುವ ವೇಳೆಯೂ ಕೂಡ ಬಳಸಬಹುದು.

Trending News