Google Pixel 6 Pro ನಲ್ಲಿ AMOLED ಡಿಸ್ಪ್ಲೇ ಜೊತೆಗೆ ಸಿಗಲಿದೆ Sony ಕಂಪನಿಯ ಜಬರ್ದಸ್ತ್ ಕ್ಯಾಮರಾ, ಇಲ್ಲಿವೆ ಡಿಟೇಲ್ಸ್ !

Google Pixel 6 Pro ಫೋಟೋಗ್ರಾಫಿಗಾಗಿ ಟ್ರಿಪಲ್ ರಿಯರ್ ಕ್ಯಾಮರಾ ಸೆಟಪ್ ನೊಂದಿಗೆ ಬರುವ ಮಾರುಕಟ್ಟೆಗೆ ಸಾಧ್ಯತೆ ಇದ್ದು, ಇದರಲ್ಲಿನ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಗಳದ್ದಾಗಿರುವ ನಿರೀಕ್ಷೆ ಇದೆ. ಈ ಫೋನ್ ವೈರ್ಲೆಸ್ ಜಾರ್ಜಿಂಗ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.

Written by - Nitin Tabib | Last Updated : Sep 15, 2021, 05:59 PM IST
  • Google Pixel 6 Pro ಫೋಟೋಗ್ರಾಫಿಗಾಗಿ ಟ್ರಿಪಲ್ ರಿಯರ್ ಕ್ಯಾಮರಾ ಸೆಟಪ್ ನೊಂದಿಗೆ ಬರುವ ಮಾರುಕಟ್ಟೆಗೆ ಸಾಧ್ಯತೆ.
  • ಇದರಲ್ಲಿನ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಗಳದ್ದಾಗಿರುವ ನಿರೀಕ್ಷೆ ಇದೆ.
  • ಈ ಫೋನ್ ವೈರ್ಲೆಸ್ ಜಾರ್ಜಿಂಗ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.
Google Pixel 6 Pro ನಲ್ಲಿ AMOLED ಡಿಸ್ಪ್ಲೇ ಜೊತೆಗೆ ಸಿಗಲಿದೆ Sony ಕಂಪನಿಯ ಜಬರ್ದಸ್ತ್ ಕ್ಯಾಮರಾ, ಇಲ್ಲಿವೆ ಡಿಟೇಲ್ಸ್ ! title=
Google Pixel 6 Pro (File Photo)

Google Pixel 6 Pro ಸ್ಮಾರ್ಟ್ ಫೋನ್ ಬಿಡುಗಡೆಯ ಕಾರಣ  ಸಾಕಷ್ಟು ಸುದ್ದಿಯಲ್ಲಿದೆ. ಈ ವರ್ಷದ ಅಂತ್ಯದ ವೇಳೆಗೆ ಗೂಗಲ್ ಈ ಪ್ರೀಮಿಯಂ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡುವ ನಿರೀಕ್ಷೆ ಇದೆ. ಇದೇ ವೇಳೆ, ಈ ಸ್ಮಾರ್ಟ್ ಫೋನ್ ಬಿಡುಗಡೆಗೂ ಮುನ್ನ ಅದರ ಸಂಭಾವ್ಯ ವಿವರಗಳು ಹೊರಬರುತ್ತಿವೆ. ಇತ್ತೀಚಿಗೆ ಪ್ರಕಟಗೊಂಡ ಮಾಹಿತಿಯ ಪ್ರಕಾರ,  Google Pixel 6 Pro ಸ್ಮಾರ್ಟ್ ಫೋನ್ AMOLED ಡಿಸ್ಪ್ಲೇನೊಂದಿಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೆ, ಈ ಫೋನ್ ಅನ್ನು ವೈರ್ಲೆಸ್ ಚರ್ಜಿಂಗ್ ಬೆಂಬಲದೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದಲ್ಲದೆ ಇದರಲ್ಲಿ ಹೊಸ ಚಿಪ್ ಸೆಟ್ ಟೆನ್ಸರ್ ಅಳವಡಿಸಲಾಗುವ ಸಾಧ್ಯತೆ ಇದೆ. ಈ ಫೋನ್ ನ ಇತರ ಮಾಹಿತಿಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

ಸಂಭಾವ್ಯ ವೈಶಿಷ್ಟ್ಯಗಳು 
ಸೋರಿಕೆಯಾದ ಮಾಹಿತಿ ಪ್ರಕಾರ, Google Pixel 6 ಸರಣಿಯ ಸ್ಮಾರ್ಟ್ ಫೋನ್ ಅಂಡ್ರಾಯಿಡ್ 12 OS ಮೇಲೆ ಕಾರ್ಯನಿರ್ವಹಿಸಲಿದೆ. ಈ ಸರಣಿಯ ಸ್ಮಾರ್ಟ್ ಫೋನ್ ಅನ್ನು ಅಲ್ಟ್ರಾ ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಇದು 5 G ಬೆಂಬಲದೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಗಲಿವೆ. ಫೋಟೋಗ್ರಾಫಿಗಾಗಿ ಇದರಲ್ಲಿ Samsung ನ ISOCELL 50MPನ GN1 ಸೆನ್ಸರ್ ಸಿಗುವ ಸಾಧ್ಯತೆ ಇದೆ.  Google Pixel 6 Proನ ಹಿಂಭಾಗದಲ್ಲಿ ಗ್ಲಾಸ್ ಪ್ಯಾನೆಲ್ ಮೇಲೆ ಒಂದು ಹೊಳೆಯುವ ದಪ್ಪ ಫ್ರೇಮ್ ನೀಡಲಾಗುತ್ತಿದೆ ಎನ್ನಲಾಗಿದೆ. ಇದಲ್ಲದೆ 120Hz ಸಾಮರ್ಥ್ಯದ ಕ್ವಾರ್ಡ್ ಡಿಸ್ಪ್ಲೇ ನೀಡಲಾಗುವ ಸಾಧ್ಯತೆ ಇದೆ.

ಕ್ಯಾಮರಾ ಈ ಫೋನ್ ನ ಪ್ರಮುಖ ಆಕರ್ಷಣೆಯಾಗಿರಲಿದೆ
Google
Pixel 6 Pro ಹೊಸ ಕ್ಯಾಮರಾ ಸಿಸ್ಟಂನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 4x ಟೆಲಿಫೋಟೋ ಲೆನ್ಸ್  ಇದರಲ್ಲಿ ಇರಲಿದೆ ಎನ್ನಲಾಗಿದೆ. ಇದರಲ್ಲಿ, ಫೋಟೋಗ್ರಾಫಿಗಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರುವ ಸಾಧ್ಯತೆ ಇದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿದೆ. ಇದು 48 ಮೆಗಾಪಿಕ್ಸೆಲ್ ಸೋನಿ IMX586 ಟೆಲಿಫೋಟೋ ಲೆನ್ಸ್ ಹೊಂದಿರಲಿದೆ. ಇದಲ್ಲದೇ, 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ನೀಡಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-ವೊಡಾಫೋನ್ ಐಡಿಯಾದ ಭರ್ಜರಿ ಆಫರ್ ; ಪ್ರತಿದಿನ 3 ಜಿಬಿ ಇಂಟರ್ನೆಟ್ ಜೊತೆಗೆ ಉಳಿದ ಎಲ್ಲಾ ಪ್ರಯೋಜನಗಳು

ಇದುವರೆಗಿನ ಅತ್ಯಂತ ಫಾಸ್ಟ್ ಸ್ಮಾರ್ಟ್ ಫೋನ್ ಇದಾಗಿರಲಿದೆ
ಕಂಪನಿ ಹೇಳಿಕೊಂಡಂತೆ Google Pixel 6 Pro ಇದುವರೆಗಿನ ಅತ್ಯಂತ ಫಾಸ್ಟ್ ಸ್ಮಾರ್ಟ್ ಫೋನ್ ಆಗಿರಲಿದೆ. ಈ ಕುರಿತು ಹೇಳಿಕೆ ನೀಡಿರುವ Google, Tensor Chip ಜೊತೆಗೆ AI ಹಾಗೂ ಮಶೀನ್ ಲರ್ನಿಂಗ್ ಸಾಮರ್ಥ್ಯ ಈ ಸ್ಮಾರ್ಟ್ ಫೋನ್ ಗಳನ್ನು ತುಂಬಾ ವೇಗವಾಗಿಸಲಿವೆ ಮತ್ತು ಫೋನ್ ಹ್ಯಾಂಗ್ ಆಗುವುದಿಲ್ಲ. ಫೋನ್ ಬಳಕೆ ಮಾಡುವಾಗ ಬಳಕೆದಾರರಿಗೆ ಸ್ಲೋ ಆಗುವ ಅಥವಾ ಇನ್ಯಾವ ಸಮಸ್ಯೆಗಳು ಎದುರಾಗುವುದಿಲ್ಲ. 

ಇದನ್ನೂ ಓದಿ-ಬಳಕೆದಾರರಿಗೆ ಶಾಕ್ ನೀಡಿದ Xiaomi! ಇದ್ದಕ್ಕಿದ್ದಂತೆ ಇಷ್ಟು ಜನರ ಫೋನ್‌ಗಳಿಗೆ ನಿರ್ಬಂಧ ..! ಕಾರಣ ಏನು ಗೊತ್ತಾ ?

ಸಂಭಾವ್ಯ ಬೆಲೆ ಎಷ್ಟು ಇರಲಿದೆ?
Google Pixel 6 Pro ಅನ್ನು ಕಂಪನಿ ಭಾರತದಲ್ಲಿ ರೂ.70,000 ರಿಂದ ರೂ.80,000 ರೇಂಜ್ ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಸ್ಮಾರ್ಟ್ ಫೋನ್ ಅನ್ನು ಹಲವು ಆಕರ್ಷಕ ಬಣ್ಣಗಳಲ್ಲಿಯೂ ಕೂಡ ಬಿಡುಗಡೆ ಮಾಡಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-Nokia: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ ಬಿಡುಗಡೆ, ಬಲವಾದ ಬ್ಯಾಟರಿ ಜೊತೆಗೆ ಸಿಗಲಿದೆ ಈ ವೈಶಿಷ್ಟ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News