Nokia: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ ಬಿಡುಗಡೆ, ಬಲವಾದ ಬ್ಯಾಟರಿ ಜೊತೆಗೆ ಸಿಗಲಿದೆ ಈ ವೈಶಿಷ್ಟ್ಯ

Nokia G10 : ನೋಕಿಯಾ ಭಾರತದಲ್ಲಿ ನೋಕಿಯಾ ಜಿ 10 (Nokia G10) ಫೋನ್ ಬಿಡುಗಡೆ ಮಾಡಿದೆ. ಫೋನಿನ ಬೆಲೆ ಕಡಿಮೆ, ಆದರೆ ವೈಶಿಷ್ಟ್ಯಗಳು ಅದ್ಭುತವಾಗಿದೆ. ಫೋನ್ 6.5 ಇಂಚಿನ ಡಿಸ್ಪ್ಲೇ ಮತ್ತು 5000mAH ಬ್ಯಾಟರಿಯನ್ನು ಹೊಂದಿದೆ. ನೋಕಿಯಾ ಜಿ 10 ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...

Written by - Yashaswini V | Last Updated : Sep 15, 2021, 02:18 PM IST
  • ನೋಕಿಯಾ ಭಾರತದಲ್ಲಿ ನೋಕಿಯಾ ಜಿ 10 ಫೋನ್ ಬಿಡುಗಡೆ ಮಾಡಿದೆ
  • ಫೋನಿನ ಬೆಲೆ ಕಡಿಮೆ, ಆದರೆ ವೈಶಿಷ್ಟ್ಯಗಳು ಅದ್ಭುತವಾಗಿದೆ
  • ಫೋನ್ 6.5 ಇಂಚಿನ ಡಿಸ್ಪ್ಲೇ ಮತ್ತು 5000mAH ಬ್ಯಾಟರಿಯನ್ನು ಹೊಂದಿದೆ
Nokia: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ ಬಿಡುಗಡೆ, ಬಲವಾದ ಬ್ಯಾಟರಿ ಜೊತೆಗೆ ಸಿಗಲಿದೆ ಈ ವೈಶಿಷ್ಟ್ಯ title=
Nokia G10 Price, Specifiations, Features

ನವದೆಹಲಿ: Nokia G10- ನೋಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಜಿ 10 (Nokia G10) ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ನೋಕಿಯಾ ಜಿ 10 ಒಂದು ಬಜೆಟ್ ಸ್ಮಾರ್ಟ್ಫೋನ್ ಆಗಿದ್ದು ಅದು ಮೀಡಿಯಾ ಟೆಕ್ ನ ಹೆಲಿಯೋ ಜಿ 25 SoC ನೊಂದಿಗೆ ಬರುತ್ತದೆ. ಫೋನಿನ ಬೆಲೆ ಕಡಿಮೆ, ಆದರೆ ವೈಶಿಷ್ಟ್ಯಗಳು ಉತ್ತಮವಾಗಿವೆ. ಅದರ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಕೂಡ ಆಕರ್ಷಕವಾಗಿವೆ ಎಂದು ಕಂಪನಿ ತಿಳಿಸಿದೆ. ನೋಕಿಯಾ ಯಾವಾಗಲೂ ತನ್ನ ಬಲವಾದ ಬ್ಯಾಟರಿಗೆ ಹೆಸರುವಾಸಿಯಾಗಿದೆ. ಕಂಪನಿಯು ಈ ಫೋನಿನಲ್ಲಿ ದೊಡ್ಡ ಬ್ಯಾಟರಿಯನ್ನು ನೀಡಿದೆ. ನೋಕಿಯಾ ಜಿ 10 ನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ...

ನೋಕಿಯಾ ಜಿ 10 ವಿಶೇಷತೆಗಳು:
ನೋಕಿಯಾ ಜಿ 10 (Nokia G10) 6.5 ಇಂಚಿನ ವಾಟರ್-ಡ್ರಾಪ್ ನಾಚ್ ಡಿಸ್‌ಪ್ಲೇ ಜೊತೆಗೆ ಎಚ್‌ಡಿ+ ರೆಸಲ್ಯೂಶನ್ ಅನ್ನು ಹೊಂದಿದೆ. ಇದು ಪಾಲಿಕಾರ್ಬೊನೇಟ್ ಶೆಲ್‌ನಲ್ಲಿ ಬರುತ್ತದೆ ಮತ್ತು ವೃತ್ತಾಕಾರದ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಇದು 13MP ಪ್ರಾಥಮಿಕ ಲೆನ್ಸ್, 2MP ಮ್ಯಾಕ್ರೋ ಸೆನ್ಸರ್ ಮತ್ತು 2MP ಡೆಪ್ತ್ ಸೆನ್ಸರ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಮುಂಭಾಗದಲ್ಲಿ ಇದು ಸೆಲ್ಫಿಗಾಗಿ 8MP ಸಿಂಗಲ್ ಕ್ಯಾಮೆರಾ ಲೆನ್ಸ್ ಹೊಂದಿದೆ.

ಇದನ್ನೂ ಓದಿ- Samsung: 5 ಕ್ಯಾಮೆರಾಗಳ ಗದರ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್, ಬಲವಾದ ಬ್ಯಾಟರಿಯೊಂದಿಗೆ ಸಿಗಲಿದೆ ಈ ವೈಶಿಷ್ಟ್ಯ

ನೋಕಿಯಾ ಜಿ 10 ನ ಇತರ ವೈಶಿಷ್ಟ್ಯಗಳು:
ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ ಜಿ 25 (MediaTek Helio G25) ಚಿಪ್‌ಸೆಟ್‌ನಿಂದ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರಲಿದೆ. ಇದು 512GB ವರೆಗಿನ ಹೆಚ್ಚುವರಿ ಸಂಗ್ರಹಣೆಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ. ಡ್ಯುಯಲ್-ಸಿಮ್ ಸ್ಮಾರ್ಟ್ಫೋನ್ 4G VoLTE ಅನ್ನು ಬೆಂಬಲಿಸುತ್ತದೆ ಮತ್ತು ಬ್ಲೂಟೂತ್ v5 ಹೊಂದಿದೆ ಎಂದು ಕಂಪನಿ ತಿಳಿಸಿದೆ. 

ನೋಕಿಯಾ ಜಿ 10 ಬ್ಯಾಟರಿ:
ಇದು 5,050mAh ಬ್ಯಾಟರಿಯನ್ನು ಹೊಂದಿದೆ ಮತ್ತು 10W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದು ಆಡಿಯೋಗೆ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿದೆ. ಸ್ಮಾರ್ಟ್‌ಫೋನ್ (Smartphones) ಆಂಡ್ರಾಯ್ಡ್ 11 ನಲ್ಲಿ ಕಾರ್ಯ ನಿರ್ವಹಿಸುತ್ತಿದೆ.  ನೋಕಿಯಾದಲ್ಲಿ ಕೆಲವು ಆಪ್‌ಗಳನ್ನು ಮೊದಲೇ ಲೋಡ್ ಮಾಡಲಾಗಿದೆ.

ಇದನ್ನೂ ಓದಿ- ಬಳಕೆದಾರರಿಗೆ ಶಾಕ್ ನೀಡಿದ Xiaomi! ಇದ್ದಕ್ಕಿದ್ದಂತೆ ಇಷ್ಟು ಜನರ ಫೋನ್‌ಗಳಿಗೆ ನಿರ್ಬಂಧ ..! ಕಾರಣ ಏನು ಗೊತ್ತಾ ?

ನೋಕಿಯಾ ಜಿ 10 ಬೆಲೆ ಮತ್ತು ಕೊಡುಗೆಗಳು: 
ನೋಕಿಯಾ ಜಿ 10 (Nokia G10) 4 ಜಿಬಿ RAM + 64 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 12,149ರೂ. ನೈಟ್ ಮತ್ತು ಡಸ್ಕ್ ಎಂಬ ಎರಡು ಬಣ್ಣಗಳಲ್ಲಿ ಬರುತ್ತದೆ -   ಇದು ಈಗಾಗಲೇ ನೋಕಿಯಾ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ನೋಕಿಯಾ ಸ್ಮಾರ್ಟ್ಫೋನ್ ಮೇಲೆ ರಿಯಾಯಿತಿಗಳನ್ನು ನೀಡಲು ಜಿಯೋ ಜೊತೆ ಪಾಲುದಾರಿಕೆ ಹೊಂದಿದೆ. ಜಿಯೋ ಗ್ರಾಹಕರು 10 ಪ್ರತಿಶತ ತ್ವರಿತ ಬೆಲೆ ಬೆಂಬಲವನ್ನು ಪಡೆಯಬಹುದು. ಆಯ್ದ ರಿಟೇಲ್ ಸ್ಟೋರ್‌ಗಳು ಅಥವಾ ಮೈಜಿಯೋ ಆಪ್‌ನಿಂದ ಗ್ರಾಹಕರು 11,150 ರೂಪಾಯಿಗೆ ಫೋನ್ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News